ಸುದ್ದಿಒನ್, ಚಿತ್ರದುರ್ಗ ಮೇ 18 : ಐಮಂಗಳ ಹೋಬಳಿಯ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ಪರೀಕ್ಷರ್ಥವಾಗಿ ನೀರು ಹರಿಸುವ ಮಾರ್ಗ ಮಧ್ಯದಲ್ಲಿ ಭರಂಪುರ ಗ್ರಾಮದ ಹಳ್ಳಕ್ಕೆ ನೀರು ಹರಿಸಬೇಕೆಂದು ಐಮಂಗಳ ಹೋಬಳಿ ನೀರಾವರಿ ಹೋರಾಟ ಸಮಿತಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ, ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರೈತರಿಗೆ ಅನುಕೂಲವಾಗುವಂತಹ ಕೆರೆ ತುಂಬಿಸುವ ಯೋಜನೆಯನ್ನು ಅತಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಐಮಂಗಳ ಗ್ರಾಮದ ಹೊರವಲದಯ ಶ್ರೀ ಕಲ್ಕುಂಟೆ ಕರಿಯಮ್ಮ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ ರೈತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಭದ್ರಾ ಮೇಲ್ದಂಡೆ ಯೋಜನೆಯ ಕನಸು ಕೇವಲ ಚಿತ್ರದುರ್ಗ ಕ್ಷೇತ್ರದ ಕನಸಲ್ಲ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮತದಾರರ ಕನಸಾಗಿದೆ, ಈ ಕನಸನ್ನ ನನಸು ಮಾಡುವಂತಹ ದಿನಗಳು ಕೆಲವೇ ದಿನಗಳು ಉಳಿದಿವೆ, ಐಮಂಗಳ ಭಾಗದ ಕೆರೆಗಳನ್ನು ಸಹ ತುಂಬಿಸುವುದಕ್ಕೆ ಸರ್ಕಾರದಿಂದ ಅನುಮೋದನೆಯನ್ನು ತರುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯ ಕೆಲವೊಂದಿಷ್ಟು ತಾಂತ್ರಿಕ ಕೆಲಸಗಳು ಅತಿ ಶೀಘ್ರದಲ್ಲಿ ಕೆಲಸವನ್ನು ಮುಗಿಸಿ ಕಾಲುವೆಯ ಮುಖಾಂತರ ನೀರನ್ನಹರಿಸುವಂತ ಕೆಲಸವನ್ನು ಮಾಡಲಾಗುವುದು, ಐಮಂಗಳ ಹೋಬಳಿಯ ರೈತರಿಗೂ ಸಹ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು, ಮುಖ್ಯವಾಗಿ ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ನಂತರ ದಿನಗಳಲ್ಲಿ ರೈತರ ಹೊಲಗಳಿಗೆ ಪೈಪ್ ಲೈನ್ ಕಾಮಗಾರಿ ಸಹ ಮಾಡಲಾಗುವುದು ಎಂದು ರೈತರಿಗೆ ತಿಳಿಸಿದರು.
ಐಮಂಗಳ ಹೋಬಳಿ ನೀರಾವರಿ ಹೋರಾಟ ಸಮಿತಿ ಕಾರ್ಯದರ್ಶಿ ಯಶವಂತರಾಜ್ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಕಾಲುವೆಯಿಂದ ಕಣಿವೆ ಕೆರೆ ಹಳ್ಳ ಮಾರ್ಗವು ಭರಂಪುರ ಗ್ರಾಮದ ಮುಖಾಂತರ ಹಲವು ಹಳ್ಳಿಗಳಾದ ಭರಂಪುರ, ಕೆ.ಸಿ ರೊಪ್ಪ, ಅದಿರಾಳು, ಸಿ.ಎನ್ ಮಾಳಿಗೆ, ಹುಲಿತೊಟ್ಟು, ಸೊರಗೊಂಡನಹಳ್ಳಿ, ತಾವಂದಿ ಕೆರೆಯವರೆಗೂ ಮುಖ್ಯ ಹಳ್ಳ ಮಾರ್ಗವಾಗಿರುತ್ತದೆ. ಈ ಮುಖ್ಯ ಹಳ್ಳದ ಮಾರ್ಗವಾಗಿ ನೀರು ಹರಿಸಲು ತುರ್ತಗಿ ಜಾರಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲೂಕು ಐಮಂಗಳ ಹೋಬಳಿಯ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ತಿಪ್ಪೀರಣ್ಣ, ಉಪಾಧ್ಯಕ್ಷರಾದ ಎಚ್ ಸಿ ಕಾಂತರಾಜ್, ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಶಿವಣ್ಣ, ರೈತ ಮುಖಂಡರಾದ ಮೋಹನ್, ತಿಪ್ಪೇಸ್ವಾಮಿ, ಮಹೇಶ್, ಅಂಜನಪ್ಪ, ಕೃಷ್ಣಪ್ಪ, ವೀರಣ್ಣ, ಶಾಂತಣ್ಣ, ಮನು, ಸಿದ್ದಪ್ಪ, ರಂಗಸ್ವಾಮಿ, ಮಹೇಶ್, ಗುರು, ಸಿದ್ದಪ್ಪ, ಅರವಿಂದ್, ಸಿಂದೂರ್, ಆನಂದ್, ಗುರುರಾಜ್, ಹನುಮಂತರೆಡ್ಡಿ, ಪಾಪಯ್ಯ, ಯತೀಶ್, ಗೌಡ ಹಾಗೂ ಇತರರು ಇದ್ದರು.
















