ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಮೈಸೂರು; ಜಾತಿ ಗಣತಿ ವರದಿಯ ಅಂಕಿ ಅಂಶಗಳು ಬಹಿರಂಗವಾದ ಬೆನ್ನಲ್ಲೇ ಇದೀಗ ಮಾಜಿ ಸಂಸದ ಪ್ರತಾಒ್ ಸಿಂಹ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ವಿಶ್ವ ವಿಖ್ಯಾತ ಅರ್ಥ ಶಾಸ್ತ್ರಜ್ಞರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ಲಿಂಗಾಯತ ಸಂಖ್ಯೆ ಕಡಿಮೆ ಆಯ್ತು, ಒಕ್ಕಲಿಗರ ಸಂಖ್ಯೆ ಕಮ್ಮಿ ಆಯ್ತು ಅಂತ ಹೊಡೆದಾಡುವ ಎಲ್ಲಾ ನಾಯಕರಿಗೂ ನಾನು ಒಂದು ಮಾತನ್ನು ಹೇಳುವುದಕ್ಕೆ ಬಯಸುತ್ತೀನಿ. ಸಿದ್ದರಾಮಯ್ಯ ಅವರು ಹಿಂದು ಸಮಾಜವನ್ನು ಒಡೆಯುವುದಕ್ಕೆ ಹೊರಟಿದ್ದಾರೆ ಎನ್ನುವ ಕನಿಷ್ಠ ಜ್ಞಾನವನ್ನು ಇಟ್ಟುಕೊಳ್ಳದೆ, ನೀವೆಲ್ಲಾ ಜಾತಿವಾರು ಸಭೆಯನ್ನು ಕರೆಯುವುದಕ್ಕೆ ಹೊರಟಿದ್ದೀರಿ.
2011ರಲ್ಲಿ ಜಾತಿ ಗಣತಿ ಆಯ್ತು. ಆ ಬೆನ್ನಲ್ಲೇ SCCC ಡೇಟಾವನ್ನು ಕಲೆಕ್ಟ್ ಮಾಡ್ತೀರಿ. ಸಾಮಾಜಿಕವಾಗಿ, ಆರ್ಥಿಕವಾಗಿ ಯಾವೆಲ್ಲ ಜಾತಿಗಳು ಹಿಂದುಳಿದಿದ್ದಾವೆ ಅವುಗಳನ್ನ ಗಣತಿ ಮಾಡಿ ಅಂತ ಹೇಳಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ, ಸೂಚನೆಯನ್ನ ಕೊಡುತ್ತೆ. ಗ್ರಾಮಾಂತರ ಭಾಗದಲ್ಲಿ ಯಾವೆಲ್ಲಾ ಜಾತಿಗಳು ಹಿಂದುಳಿದಿದ್ದಾವೆ..? ಎಷ್ಟು ಜನರ ಅವಿದ್ಯಾವಂತರಿದ್ದಾರೆ ಎಂಬುದನ್ನ ಗಣತಿ ಮಾಡಲು ಸೂಚನೆ ನೀಡಿದ್ದರು. ಇದನ್ನ ಲೆಕ್ಕಚಾರ ಮಾಡಿ, ಗಣತಿ ಮಾಡಿ ಮಾಹಿತಿ ನೀಡಿ ಅಂತ ಕೇಂದ್ರ ಇಲಾಖೆ ಹೇಳಿದ್ದಿದ್ದು.
ಸಿದ್ದರಾಮಯ್ಯ ಅವರು ಲಿಂಗಾಯತರ ಸಂಖ್ಯೆ, ಒಕ್ಕಲಿಹರ ಸಂಖ್ಯೆ ಉಳಿದ್ದೆಲ್ಲಾ ಜಾತಿಯ ಸಂಖ್ಯೆಯನ್ನ ಸಾಬರಿಗಿಂತ ಕಡಿಮೆ ತೋರಿಸುವ ಮುಖಾಂತರ ಜಾತಿ ರಾಜಕಾರಣ ಮಾಡ್ತಾ ಇದಾರೆ. ಜಾತಿ ಉಪಜಾತಿ ಇದ್ಯಲ್ಲ, ಲಿಂಗಾಯತರಲ್ಲಿ ಉಪಜಾತಿಯನ್ನ ಲೆಕ್ಕ ಹಾಕ್ತೀರಿ, ಒಕ್ಕಲಿಗರಲ್ಲಿ, ಎಸ್ಟಿ, ಒಬಿಸಿ, ಕುರುಬರಲ್ಲೂ ಉಪಜಾತಿಯನ್ನ ಲೆಕ್ಕ ಹಾಕ್ತೀರಿ. ಹಾಗಾದ್ರೆ ಸಾಬರಲ್ಲಿ, ಕ್ರಿಶ್ಚಿಯನ್ನರಲ್ಲಿ ಜಾತಿ, ಉಪ ಜಾತಿ, ಮೇಲ್ಜಾತಿ, ಕೆಳಜಾತಿ ಇಲ್ವಾ. ಸಾಬ್ರನ್ನೇ ತೆಗೆದುಕೊಳ್ಳಿ ಅಲ್ಲಿ ಶಿಯಾ, ಸುನ್ನಿ, ಇಸ್ಮಯಿಲ್ಸ್ ಇದಾರೆ. ಇವರು ಮಾತ್ರ ಅಲ್ಲ ಕ್ರಿಶ್ಚಿಯನ್ ಜಾತಿಯಲ್ಲೂ ಉಒಜಾತಿ ಇದಾರೆ. ಮುಸಲ್ಮಾನರಲ್ಲಿ ಮಾತ್ರ ಒಗ್ಗಟ್ಟಲ್ಲಿ ನೋಡ್ತೀರಿ ಎಂದು ಹರಿಹಾಯ್ದಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್