Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಏಪ್ರಿಲ್ 2 ರಂದು ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 : ತಾಲೂಕಿನ ಬೆಳಗೆರೆ ಕೆರೆ ಏರಿ ಬುಡದಲ್ಲಿ ನೆಲೆಸಿರುವ ಭಕ್ತರನ್ನು ಕಾಪಾಡುತ್ತಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಮಾ.29 ರಿಂದ ಏಪ್ರೀಲ್ 3 ನೇ ತಾರೀಖಿನವರೆಗೆ ಅದ್ದೂರಿಯಾಗಿ ಜರುಗಲಿದೆ.

ಮಾ.29-3-2026 ಬೆಳಗ್ಗೆ ಲಕ್ಷ್ಮಿ ರಂಗನಾಥ ಸ್ವಾಮಿಗೆ ವೇದಾವತಿ ನದಿಯಲ್ಲಿ ಗಂಗಾಪೂಜೆ ನಂತರ ನಾರಾಯಣಪುರಕ್ಕೆ ತೆರಳಿ ಗೊಂಚಕಾರ ಮನೆಯಲ್ಲಿ ವಿಶೇಷ ಪೂಜೆ ಮತ್ತು ಅನ್ನದಾಸೋಹ ಏರ್ಪಡಿಸಲಾಗಿದೆ.
ದಿನಾಂಕ 30-03-2026 ರಂದು ನಾರಾಯಣಪುರದಿಂದ ಬೆಳಗೆರೆಗೆ ಪ್ರಯಾಣ ಬೆಳೆಸುತ್ತದೆ.31-03-2026 ರಂದು ಪ್ರಧಾನ ದೇವಸ್ಥಾನದಲ್ಲಿ ಹೋಮ ಹವನ ವಿಶೇಷ ಪೂಜೆ ಕಾರ್ಯಕ್ರಮಗಳು ಜರಗಲಿವೆ.

ಮಾರ್ಚ್ 01-4-2026 ಬೆಳಿಗ್ಗೆ 10:30 ರಿಂದ 11:55 ರವರೆಗೆ ಸಲ್ಲುವ ವೃಷಭ ಲಗ್ನ ಶುಭಾಂಶದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಪಾಣಿ ಗ್ರಹಣ ಅಲಂಕೃತ ಗೊಂಡ ಟ್ರ್ಯಾಕ್ಟರ್ ನಲ್ಲಿ ಸ್ವಾಮಿಯ ಉತ್ಸವ ಹಾಗೂ ಹಿಟ್ಟಿನ ಆರತಿ ಹಾಗೂ ಅರಿವೆ ಅನ್ನ.ಹಾಗೂ ವಿಶೇಷ ಪೂಜೆ ಜರಗಲಿದೆ.

ಮಾ.02-04-2026 ರ ಗುರವಾರ ಸಂಜೆ 4 ಗಂಟೆಗೆ ಸರಿಯಾಗಿ ವಿವಿಧ ಹೂಗಳಿಂದ ಅಲಂಕೃತ ಗೊಂಡ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಮತ್ತು ಪಾರಿವಾಟ ಮಾತುಗಾರಿಕೆ ಜರುಗಲಿದೆ.

03-04-2026 ರಂದು ಸಂಜೆ 4:00ಗೆ ಸರಿಯಾಗಿ ವಸಂತ ಮಹೋತ್ಸವ ಹಾಗೂ ಕಂಕಣ ವಿಸರ್ಜನೆ ನಡೆಯಲಿದೆ. ಸಂಜೆ 6:00 ಗಂಟೆಗೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವರನ್ನ ಗುಡಿ ದುಂಬಿಸುವ ಕಾರ್ಯ ಜರಗಲಿದೆ.

ಪುರೋಹಿತ ಯಾದಾಟು ವಂಶಸ್ಥರಾದ ಶ್ರೀ ಮುರಳಿದರ ಶಾಸ್ತ್ರಿ ಅವರು ಪೌರಹಿತ್ಯದಲ್ಲಿ ವಿಶೇಷ ಪೂಜೆ ‌ಜರುಗಲಿದ್ದು
ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆಗೆ ಆಂಧ್ರಪ್ರದೇಶ ತೆಲಂಗಾಣ ತುಮಕೂರು ದಾವಣಗೆರೆ ಬಳ್ಳಾರಿ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿಲಿದ್ದರೆ.

ಹೂವಿನ ಅಲಂಕಾರ ಸೇವೆಯನ್ನು ಬೆಳಗೆರೆ ಕೆಂಗಮ್ಮ ಬಿಜಿ ತಿಮ್ಮಯ್ಯ (ಗುಂಡಪ್ಪನ) ಮಕ್ಕಳು ಮತ್ತು ಮಕ್ಕಳು ನಡೆಸಿಕೊಡಲಿದ್ದಾರೆ.

ದಿನಾಂಕ 02-04-2026 ರಂದು ಉತ್ಸವದ ರಾತ್ರಿ 9:30ಕ್ಕೆ ಸರಿಯಾಗಿ ನೀನಾಸಂ ಕಲಾವಿದ ಉಪನ್ಯಾಸಕ
ಸಾಹಿತಿ ಬೆಳಗೆರೆ ‌ಕೆ. ವೆಂಕಟರಮಣ ಇವರ ವಿರುಚಿತ ಕಾಳಿಂಗನ ಗರ್ವಭಂಗ ಅರ್ಥಾತ್ ಸುಕನ್ಯಾಳ ಚೆಲ್ಲಾಟ ಎಂಬ ಸುಂದರ ಸಾಮಾಜಿಕ ನಾಟಕವನ್ನು ಗೆಳೆಯರ ಬಳಗದಿಂದ ಅಭಿನಯಿಸಲಿದ್ದಾರೆ. ( ಪ್ರಥಮ ಪ್ರಯೋಗ)

ಬೆಳಗೆರೆ ರಂಗನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್, ಬೆಳಗೆರೆ ನಾರಾಯಣಪುರ ರಂಗನಾಥಪುರ ಗ್ರಾಮದ ಗ್ರಾಮಸ್ಥರು ಹಾಗೂ ದೇವಸ್ಥಾನದ ಬುಡಕಟ್ಟಿಗೆ ಸೇರಿದ ಅಣ್ಣ-ತಮ್ಮಂದಿರರು ನೆಂಟರು ಪೂಜಾರಿಗಳು ಕೈವಾಡಸ್ತರು, ಬೆಳಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಮಾಜಿ ಉಪಾಧ್ಯಕ್ಷರು ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ದೇವಸ್ಥಾನ ಅರ್ಚಕರು ಹಾಗೂ ಅಣ್ಣತಮ್ಮಂದಿರರು ಹಾಗೂ ಬೆಳಗೆರೆ ನಾರಾಯಣಪುರ ಗ್ರಾಮದ ಮುಖಂಡರು ಗ್ರಾಮಸ್ಥರು ಈ ಜಾತ್ರೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ