Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನನಗೂ ಜಮೀನಿಲ್ಲ, ಶಫೀಗೂ ಜಮೀನಿಲ್ಲ; ಆದ್ರೂ ರೈತರಿಗಾಗಿ ಹೋರಾಡಿದ್ವಿ: ಚಿತ್ರದುರ್ಗ ಭದ್ರಾ ಹೋರಾಟದ ದಿನಗಳನ್ನು ಮೆಲುಕು ಹಾಕಿದ ಟಿ.ಶಫಿವುಲ್ಲಾ

---Advertisement---

ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು,
ಜನಾಶಯ ಪ್ರಭ
ಚಿತ್ರದುರ್ಗ
ಮೊ : 88809 99001

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 :  ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟದಲ್ಲಿ ಟಿ. ಶಫೀವುಲ್ಲಾ ಅವರು ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎಂ ಜಯಣ್ಣ ಕಾರ್ಯಾಧ್ಯಕ್ಷರಾದ ಮುರುಘರಾಜೇಂದ್ರ ಒಡೆಯರು ಅವರ ಜೊತೆಗೂಡಿ ನೀರಾವರಿ ಹೋರಾಟದ ಪ್ರತಿಯೊಂದು ಧರಣಿ, ಸತ್ಯಾಗ್ರಹ, ಜಾಥಾ ಹಾಗೂ ಬಾಗಿನ ಅರ್ಪಿಸುವ ಐತಿಹಾಸಿಕ ಸಂದರ್ಭಗಳಲ್ಲಿ ಟಿ.ಶಫಿವುಲ್ಲಾ ಅವರು ಸದಾ ನಿರಂತರವಾಗಿ ಜೊತೆಯಾಗಿರುತ್ತಿದ್ದರು.

ಟೈಲರ್ ಸಂಘಕ್ಕೆ ಹೊಸದಾಗಿ ಅಧ್ಯಕ್ಷರಾಗಿದ್ದ ಶಫಿವುಲ್ಲಾ ಅವರಿಗೆ ​ಬಾಗಿನ ಅರ್ಪಿಸುಲು ಹೊರಡಬೇಕು,
ಚಿತ್ರದುರ್ಗದ ಮಠದ ಹಟ್ಟಿಯಿಂದ ಜನ ಹೊರಡಿಸು “ನಿನಗೆ ಒಂದು ಬಸ್ ಕಳುಹಿಸುತ್ತೇವೆ, ಈ ಬಸ್‌ನಲ್ಲಿ ಜನರನ್ನು ಕರೆತರುವ ಜವಾಬ್ದಾರಿ ನಿನ್ನದು” ಎಂದು ಅವರಿಗೆ ತಿಳಿಸಲಾಗುತ್ತಿತ್ತು. ಬಾಗಿನ ಅರ್ಪಿಸುವ ಕಾರ್ಯಕ್ರಮವು ಸಂಪೂರ್ಣವಾಗಿ ಮುಗಿಯುವವರೆಗೆ ಎಲ್ಲರನ್ನೂ ಜವಾಬ್ದಾರಿಯಿಂದ ನೋಡಿಕೊಂಡು, ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ವಾಪಸ್ ಬರುತ್ತಿದ್ದರು.

ನಗರಸಭೆಯ ಪಕ್ಕದಲ್ಲಿದ್ದ ಲಕ್ಷ್ಮಣ ವಾಯ್ಸ್ ಕಚೇರಿಯಲ್ಲಿ ಪಕ್ಕದ ಕಚೇರಿಯಲ್ಲಿ ನೀರಾವರಿ ಹೋರಾಟ ಸಮಿತಿಯ ಸಭೆಗಳನ್ನು ನಡೆಸಲಾಗುತ್ತಿತ್ತು, ಆಗ ಕಚೇರಿಗೆ ಹೋಗಿ ಕಸ ಗುಡಿಸಿ, ತಾಡ್ಪಲ್ ಗಳನ್ನು ಹಾಸಿ ಸಭೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸುವಂತೆ ಶಫಿವುಲ್ಲಾ ಅವರಿಗೆ ಹೇಳಿದರೆ ಸಾಕಿತ್ತು. ಯಾವುದೇ ಮುಜುಗರವಿಲ್ಲದೆ, ತಾವಾಗಿಯೇ ಮುಂದೋಗಿ ಕಚೇರಿಯನ್ನು ಗುಡಿಸಿ, ಸಭೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರು ಶ್ರದ್ಧೆಯಿಂದ ಮಾಡುತ್ತಿದ್ದರು.

ಭದ್ರಾ ಮೇಲ್ದಂಡೆ ಯೋಜನೆ ನೆರವಾಗಲಿ ಎಂದು ಧರಣಿ ಸತ್ಯಾಗ್ರಹ ನಡೆಸುವ ಆ ಸಂದರ್ಭದಲ್ಲಿ ಮಹಿಳೆಯರನ್ನೆಲ್ಲಾ ಕರೆಸಿ ಕುರಾನ್ ಪಠಣ ಮಾಡಿಸಲಾಯಿತು.
ಚಿತ್ರದುರ್ಗ ಸಂಸತ್ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಪಿ. ಕೋದಂಡರಾಮಯ್ಯ ಅವರು ಸೋತಿದ್ದರು. ಆಗ ಅವರು ನೀರಾವರಿ ಹೋರಾಟದಿಂದ ದೂರ ಉಳಿಯುತ್ತೇನೆ ಎಂದು ಹೇಳಿದ್ದನ್ನು ಗಮನಿಸಿ ನಾವೆಲ್ಲರೂ ಹೋಗಿ ನೀವು ನೀರಾವರಿ ಹೋರಾಟಕ್ಕೆ ಬರಬೇಕೆಂದು ಒತ್ತಾಯಿಸಿದೆವು. ಅವರು, ಒಪ್ಪಲಿಲ್ಲ ಆಗ ಕಾಮ್ರೇಡ್ ಚಂದ್ರಣ್ಣ ಅವರಿಗೆ ಚಿತ್ರದುರ್ಗದಲ್ಲಿ ಜಯಣ್ಣ ಅವರನ್ನ ಅಧ್ಯಕ್ಷರನ್ನು ಮಾಡಿ ಒಡೆಯರವರನ್ನ ಕಾರ್ಯಧ್ಯಕ್ಷರನ್ನು ಮಾಡುವ ಒಂದು ಜವಾಬ್ದಾರಿಯನ್ನು ನೀಡಲಾಗಿತ್ತು ಅವರು ಅದನ್ನು ನಿಭಾಯಿಸಿದರು.

ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಚಿತ್ರದುರ್ಗಕ್ಕೆ ಭೇಟಿ ಸಂದರ್ಭ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಲಾಗುತ್ತದೆ ಎಂಬುವುದನ್ನು ಪತ್ರಕರ್ತರು ಹಾಗೂ ಹೋರಾಟಗಾರರು ಸೇರಿಕೊಂಡು ಅಂದಿನ ದಿನ ಅಘೋಷಿತ ಬಂದ್ ಮಾದರಿಯ ವಾತಾವರಣವನ್ನು ನಿರ್ಮಾಣ ಮಾಡಿದ್ದರು.

“ನನಗೂ ಜಮೀನಿಲ್ಲ, ಶಫೀಗೂ ಜಮೀನಿಲ್ಲ, ಆದರೂ ನಾವು ರೈತರ ನೀರಾವರಿಗಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ಸಮಿತಿಯ ಅಧ್ಯಕ್ಷರಾದ ಎಂ. ಜಯಣ್ಣ ಅವರು ಶಫೀವುಲ್ಲಾ ಅವರ ಸೇವೆಯನ್ನು ಆಗಾಗ್ಗೆ ಸ್ಮರಿಸುತ್ತಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now