Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಮೆರಿಕದಿಂದ ಭಾರತಕ್ಕೆ ಬಿಗ್ ರಿಲೀಫ್: ಪ್ರಮುಖ ಔಷಧಗಳ ಮೇಲಿನ ಆಮದು ಸುಂಕ ಶೂನ್ಯಕ್ಕೆ ಇಳಿಕೆ.!

---Advertisement---

ವಾಷಿಂಗ್ಟನ್.ಸೆ.29: ಭಾರತ ಸೇರಿದಂತೆ ವಿಶ್ವದ 20 ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಪ್ರಮುಖ ಔಷಧಗಳು ಹಾಗೂ ಅವುಗಳ ಕಚ್ಚಾ ವಸ್ತುಗಳ ಮೇಲೆ ಯಾವುದೇ ಮೌಲ್ಯಾಧಾರಿತ ಸುಂಕ (Ad Valorem Tariff) ವಿಧಿಸದಿರಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಮೆರಿಕದ ವಾಣಿಜ್ಯ ಇಲಾಖೆಯು ಅಧಿಕೃತ ಫೆಡರಲ್ ರಿಜಿಸ್ಟರ್‌ನಲ್ಲಿ ಅಧಿಸೂಚನೆ ಹೊರಡಿಸಿದ್ದು, ಭಾರತದ ಔಷಧ ರಫ್ತು ವಲಯಕ್ಕೆ ಇದು ಅತ್ಯಂತ ದೊಡ್ಡ ಸಮಾಧಾನ ತಂದಿದೆ.

ಅಮೆರಿಕವು ಶೂನ್ಯ ಸುಂಕ ವಿನಾಯಿತಿ ನೀಡಿರುವ ಪಟ್ಟಿಯಲ್ಲಿ ಭಾರತದೊಂದಿಗೆ ಅರ್ಜೆಂಟೀನಾ, ಬಾಂಗ್ಲಾದೇಶ, ಕಾಂಬೋಡಿಯಾ, ಈಕ್ವೆಡಾರ್, ಎಲ್ ಸಾಲ್ವಡಾರ್, ಯುರೋಪಿಯನ್ ಒಕ್ಕೂಟ, ಗ್ವಾಟೆಮಾಲಾ, ಇಂಡೋನೇಷ್ಯಾ, ಜಪಾನ್, ಜೋರ್ಡಾನ್, ಮಲೇಷ್ಯಾ, ಉತ್ತರ ಮ್ಯಾಸಿಡೋನಿಯಾ, ದಕ್ಷಿಣ ಕೊರಿಯಾ, ಸ್ವಿಟ್ಜರ್ಲೆಂಡ್, ಲಿಕ್ಟೆನ್‌ಸ್ಟೈನ್, ತೈವಾನ್, ಥೈಲ್ಯಾಂಡ್, ಬ್ರಿಟನ್ ಮತ್ತು ವಿಯೆಟ್ನಾಂ ದೇಶಗಳು ಸ್ಥಾನ ಪಡೆದಿವೆ. ಅಮೆರಿಕದೊಂದಿಗೆ ಪ್ರಸ್ತುತ ಅಥವಾ ಭವಿಷ್ಯದ ವ್ಯಾಪಾರ ಮತ್ತು ಭದ್ರತಾ ಚೌಕಟ್ಟಿನ ಒಪ್ಪಂದಗಳನ್ನು ಹೊಂದಿರುವ ಕಾರಣಕ್ಕಾಗಿ ಈ ದೇಶಗಳ ಅರ್ಹ ವೈದ್ಯಕೀಯ ಉತ್ಪನ್ನಗಳಿಗೆ ಶೂನ್ಯ ಸುಂಕದ ವಿನಾಯಿತಿ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪೇಟೆಂಟ್ ಪಡೆದ ಔಷಧಗಳು ಹಾಗೂ ಅವುಗಳ ಕಚ್ಚಾ ವಸ್ತುಗಳ ಮೇಲೆ ಶೇಕಡಾ ನೂರರಷ್ಟು ಭಾರಿ ಆಮದು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಆದೇಶಿಸಿದ್ದರು. ಈ ಕಠಿಣ ನಿಯಮವು ಈಗಾಗಲೇ ಕೆಲವು ಕಂಪನಿಗಳಿಗೆ ಜುಲೈ 31 ರಿಂದಲೇ ಅನ್ವಯವಾಗಿದ್ದು, ಉಳಿದ ಉತ್ಪನ್ನಗಳಿಗೆ ಸೆಪ್ಟೆಂಬರ್ 29 ರಿಂದ ಸಂಪೂರ್ಣವಾಗಿ ಜಾರಿಗೆ ಬರಬೇಕಿತ್ತು. ಆದರೆ, ಇಂತಹ ನಿರ್ಣಾಯಕ ಸಂದರ್ಭದಲ್ಲೇ ಅಮೆರಿಕ ವಾಣಿಜ್ಯ ಇಲಾಖೆಯು ಹೊಸ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತದಂತಹ ಪ್ರಮುಖ ಪಾಲುದಾರ ದೇಶಗಳಿಂದ ಆಮದಾಗುವ ಅಗತ್ಯ ವೈದ್ಯಕೀಯ ಸೂತ್ರೀಕರಣಗಳಿಗೆ ಶೇಕಡಾ ನೂರರಷ್ಟು ಭಾರೀ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಿದೆ.

ಈ ನೂತನ ರಿಯಾಯಿತಿಯ ಅಡಿಯಲ್ಲಿ ಬಂಜೆತನ ನಿವಾರಣೆ, ಗಂಭೀರ ಸ್ವರೂಪದ ಕಾಯಿಲೆಗಳಿಗೆ ಬಳಸುವ ಜೀವಕೋಶ ಚಿಕಿತ್ಸೆ (Cell Therapy), ಜೀನ್ ಥೆರಪಿ, ಆಂಟಿಬಾಡಿ-ಡ್ರಗ್ ಕಾಂಜುಗೇಟ್ಸ್ ಹಾಗೂ ಪ್ರಾಣಿಗಳ ಔಷಧಗಳಿಗೆ ಬಳಸುವ ನಿರ್ಣಾಯಕ ಸಾಮಗ್ರಿಗಳನ್ನು ಸೇರಿಸಲಾಗಿದೆ. ಈ ವಿಶೇಷ ಔಷಧಗಳ ತಯಾರಿಕೆಗೆ ಅತ್ಯಗತ್ಯವಾದ ಪ್ರಮುಖ ಕಚ್ಚಾ ಪದಾರ್ಥಗಳಿಗೂ ಸುಂಕದಿಂದ ಮುಕ್ತಿ ದೊರೆತಿರುವುದರಿಂದ ಉಭಯ ದೇಶಗಳ ನಡುವಿನ ಆರೋಗ್ಯ ಹಾಗೂ ಫಾರ್ಮಾ ವ್ಯಾಪಾರಕ್ಕೆ ಹೊಸ ಬಲ ಸಿಕ್ಕಂತಾಗಿದೆ.

Join WhatsApp

Join Now

Join Telegram

Join Now