Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಪತ್ನಿಗಿದ್ದ ಆ ಮಾನಸಿಕ ಕಾಯಿಲೆ ಯಾವುದು..?

---Advertisement---

ಬೆಂಗಳೂರು; ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆಯ ಬಳಿಕ ಅವರ ಪತ್ನಿ ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ಶುರು ಮಾಡಿರುವ ಪೊಲೀಸರಿಗೆ ಪಲ್ಲವಿಗೆ ಇದ್ದ ಮಾನಸಿಕ ಕಾಯಿಲೆಯ ಬಗ್ಗೆ ತಿಳಿದು ಬಂದಿದೆ. ಪಲ್ಲವಿ ಅವರು ಸ್ಕ್ರಿಜೋಫೇನಿಯಾ ಎಂಬ ಮಾನಸಿಕವಾಗಿ ರೋಹ ಇರುವುದು ಪತ್ತೆಯಾಗಿದೆ. ಈ ಕಾಯಿಲೆಯಿಂದಾಗಿ ಪಲ್ಲವಿ ಅವರು ಓಂ ಪ್ರಕಾಶ್ ಅವರ ಬಗ್ಗೆ ಇಲ್ಲ ಸಲ್ಲದ ಊಹೆ ಮಾಡಿಕೊಳ್ಳುತ್ತಿದ್ದರಂತೆ.

ಇದರಿಂದಾನೇ ಗನ್ ಹಿಡಿದು ಭಯ ಪಡಿಸ್ತಾ ಇದಾನೆ ಅಂತಾನೂ ಹೇಳಿದ್ದರು. ತಮ್ಮ ಫ್ಯಾಮಿಲಿ ವಾಟ್ಸಾಪ್ ಗ್ರೂಪ್, ಅಧಿಕಾರಿಗಳ ಗ್ರೂಪ್ ಗೆ ಈ ರೀತಿಯ ಸಂದೇಶಗಳನ್ನು ರವಾನಿಸಿದ್ದಾರೆ. ಪೊಲೀಸರ ತನಿಖೆಯಿಂದ ಈ ರೀತಿ ಆಗ್ತಾ ಇದ್ದದ್ದು ಆ ಕಾಯಿಲೆಯಿಂದಾನೇ ಅನ್ನೋದು ತಿಳಿದು ಬಂದಿದೆ. ಈ ಕಾಯಿಲೆಯಿಂದಾಗಿ ಏನೇನೋ ಕಲ್ಪನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕಾಯಿಲೆ ಬರುವುದಕ್ಕೆ ಇಂಥದ್ದೇ ಕಾರಣ ಎಂಬುದಿಲ್ಲ. ಆದರೆ ಅತಿಯಾದ ಒತ್ತಡ, ಡ್ರಗ್ಸ್, ಮದ್ಯಸೇವನೆ, ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಿಂದಾನೂ ಬರಲಿದೆ. ಹಾಗೇ ಅನುವಂಶಿಕವಾಗಿಯೂ ಬರಬಹುದು. ಈ ಕಾಯಿಲೆ ಬಂದರೆ ಮಾತನಾಡಲು ಹೆದರುತ್ತಾರೆ, ಒಂಟಿಯಾಗಿ ಬದುಕುವುದು, ಜನಸಂದಣಿ ಸ್ಥಳಕ್ಕೆ ಹೋಗಲು ಹೆದರುವುದು, ವಿಚಿತ್ರ ಭಾವನೆಗಳು ಕಾಡುತ್ತವೆ. ಹೀಗೆ ಅನೇಕ‌ ರೀತಿಯ ಸಮಸ್ಯೆಯಿಂದ ಬಳಲುತ್ತಾರೆ. ಈ ಕಾಯಿಲೆ ಇರುವವರಿಗೆ ತನಗೆ ಈ ಕಾಯಿಲೆ ಇದೆ ಅನ್ನೋದು ಅರಿವಿಗೆ ಇರುವುದಿಲ್ಲ. ಅಪರಾಧಗಳ ಮನೋಭಾವ ಕೂಡ ಅವರಲ್ಲಿ ಇರುವುದಿಲ್ಲ. ಪಲ್ಲವಿ ಅವರ ವಿಚಾರದಲ್ಲೂ ಅದೇ ರೀತಿ ಆಗಿದೆ ಎನ್ನಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment