Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದಿನಿಂದ ‘K-SET’ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ; ಅಭ್ಯರ್ಥಿಗಳಿಗೆ ಇಲ್ಲಿದೆ  ಮುಖ್ಯ ಮಾಹಿತಿ

---Advertisement---

ಬೆಂಗಳೂರು: ಕರ್ನಾಟಕದ ಸರ್ಕಾರಿ/ಅನುದಾನಿತ/ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗೆ ಅರ್ಹತೆ ಪಡೆಯಲು ನಡೆಸಲಾಗುವ ‘ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ – 2026’ (KSET-2026) ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಒಟ್ಟು 37 ವಿಷಯಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಪ್ರಮುಖ ದಿನಾಂಕಗಳು (Important Dates):

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 10.08.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.09.2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06.09.2026

ಪ್ರವೇಶ ಪತ್ರ (Hall Ticket) ಬಿಡುಗಡೆ: 01.10.2026

ಪರೀಕ್ಷಾ ದಿನಾಂಕ: 11.10.2026 (ಭಾನುವಾರ)

ಶೈಕ್ಷಣಿಕ ಅರ್ಹತೆ (Eligibility Criteria):

ಅಂಕಗಳ ಮಾನದಂಡ:

ಸಾಮಾನ್ಯ ವರ್ಗ (General Category): ಸ್ನಾತಕೋತ್ತರ ಪದವಿಯಲ್ಲಿ (Post Graduation) ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, IIA, IIB, IIIA, IIIB, ವಿಶೇಷ ಚೇತನ (PwD) ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು: ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.

ಅಂತಿಮ ವರ್ಷದ ವಿದ್ಯಾರ್ಥಿಗಳು: ಪ್ರಸ್ತುತ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ಸಹ ಷರತ್ತುಗೊಳಪಟ್ಟು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಕೆಸೆಟ್ ಪರೀಕ್ಷೆಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.

ಪರೀಕ್ಷಾ ಶುಲ್ಕ (Exam Fee):

ಸಾಮಾನ್ಯ, ಪ್ರವರ್ಗ II-A, II-B, III-A, III-B ಮತ್ತು ಇತರೆ ರಾಜ್ಯದ ಅಭ್ಯರ್ಥಿಗಳಿಗೆ: ₹ 750/-

ಪ್ರವರ್ಗ-I, SC-A, SC-B, SC-C, ST, PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹ 500/-

(ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ಡಿಡಿ ಅಥವಾ ಮನಿ ಆರ್ಡರ್ ಅಂಗೀಕರಿಸಲಾಗುವುದಿಲ್ಲ).

ಪರೀಕ್ಷಾ ವಿಧಾನ ಮತ್ತು ಮಾದರಿ (Exam Pattern):

ಪರೀಕ್ಷೆಯು ಅಕ್ಟೋಬರ್ 11, 2026 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ (ಒಟ್ಟು 3 ಗಂಟೆ) ಆಫ್‌ಲೈನ್ ಓ.ಎಮ್.ಆರ್ (OMR) ಮಾದರಿಯಲ್ಲಿ ನಡೆಯಲಿದೆ.

ಪತ್ರಿಕೆ – I (ಸಾಮಾನ್ಯ ಪತ್ರಿಕೆ): 50 ಬಹುಆಯ್ಕೆ ಪ್ರಶ್ನೆಗಳು – 100 ಅಂಕಗಳು (ಬೋಧನೆ, ಸಂಶೋಧನಾ ಸಾಮರ್ಥ್ಯ ಮತ್ತು ಸಾಮಾನ್ಯ ಜ್ಞಾನ).

ಪತ್ರಿಕೆ – II (ವಿಷಯ ಆಧಾರಿತ): 100 ಬಹುಆಯ್ಕೆ ಪ್ರಶ್ನೆಗಳು – 200 ಅಂಕಗಳು (ಅಭ್ಯರ್ಥಿ ಆಯ್ಕೆ ಮಾಡಿದ ವಿಷಯ).

ಒಟ್ಟು ಅಂಕಗಳು: 300 ಅಂಕಗಳು.

 ಪರೀಕ್ಷಾ ಕೇಂದ್ರಗಳು (Exam Centers)

ರಾಜ್ಯದ 11 ಪ್ರಮುಖ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ:

ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರು.

(ಗಮನಿಸಿ: ಕೆಲವು ನಿರ್ದಿಷ್ಟ 19 ವಿಷಯಗಳಿಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ).

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಕೊನೆಯ ನಿಮಿಷದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು KEA ಸೂಚಿಸಿದೆ.

Join WhatsApp

Join Now

Join Telegram

Join Now