ಬೆಳಗಾವಿ: ಕಾಂಗ್ರೆಸ್ ನಲ್ಲಿ ನಿನ್ನೆಯಷ್ಟೇ CLP ಸಭೆ ನಡೆದಿದೆ. ಈ ಸಭೆ ನಡೆದಿದೆ. ಈ ಸಭೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದಾರೆ. ಇದೆ ವೇಳೆ ಧರ್ಮಸ್ಥಳದ ಕೇಸ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ನಾನು ಚಾರ್ಜ್ ಶೀಟ್ ನೋಡಿಲ್ಲ ಎಂದಿದ್ದಾರೆ.
ಸಿಎಲ್ಪಿನಲ್ಲಿ ಏನು ಚರ್ಚೆ ನಡಿತು ಅಂತ ನಿಮಗೆಲ್ಲಾ ಹೇಳುವುದಕ್ಕೆ ಆಗುತ್ತಾ..? ಹೈಕಮಾಂಡ್ ಏನು ಹೇಳುತ್ತೋ ಅದೇ ಫೈನಲ್ ಎಂದಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿ ಈ ಸಿಎಂ ಕುರ್ಚಿ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೀಗಾಗಿಯೇ ಈ ವಿಚಾರ ಆಗಾಗ ಚರ್ಚೆಗೆ ಬರ್ತಾನೆ ಇರುತ್ತೆ.
ಸಿಎಂ ಕುರ್ಚಿ ಕದನ ಬೇರೆ ಹಂತಕ್ಕೆ ಹೋಗಬಾರದು ಹೈಕಮಾಂಡ್ ನಾಯಕರು ಮಧ್ಯಪ್ರವೇಶ ಮಾಡಿ, ಸಿಎಂ ಹಾಗೂ ಡಿಸಿಎಂ ಕೂತು ಸಮಸ್ಯೆಯನ್ನ ಬಗೆಹರಿಸಿಕೊಳ್ಳಿ ಎಂಬ ಮಾತನ್ನ ಹೇಳಿದ್ದರು. ಹೀಗಾಗಿಯೇ ಸಿಎಂ ಹಾಗೂ ಡಿಸಿಎಂ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ನಡೆದವು. ಇದೆಲ್ಲ ಆದ್ಮೇಲೆ ಸಿಎಂ ಹಾಗೂ ಡಿಸಿಎಂ ಇಬ್ಬರು ಸೇರಿ ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು. ಆದರೆ ಬೆಳಗಾವಿ ಅಧಿವೇಶನದಲ್ಲಿ ಈ ಸಿಎಂ ಮಂತ್ರ ಮತ್ತೆ ಜೋರಾಯ್ತು. ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಹೇಳಿದ ಒಂದೇ ಒಂದು ಹೇಳಿಕೆ ಡಿಕೆಶಿ ಬಣವನ್ನ ಕೆರಳಿಸಿತ್ತು. ತಣ್ಣಗಾಗಿದ್ದ ಸಿಎಂ ಕುರ್ಚಿ ಕದನ ಮತ್ತೆ ಪ್ರಶ್ನೆ ಕೇಳುವಂತೆ ಮಾಡಿದ್ದೇ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ. ಇದೀಗ ಹೈಕಮಾಂಡ್ ನಾಯಕರ ನಿರ್ಧಾರವೇ ಅಂತಿಮ ಅಂತ ಸಿದ್ದರಾಮಯ್ಯ ಅವರು ಮತ್ತೆ ಪಠಿಸಿದ್ದಾರೆ.










