Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೃಹಲಕ್ಷ್ಮೀಯ 5 ಸಾವಿರ‌ ಕೋಟಿ ಎಲ್ಲೋಯ್ತು ಎಂಬ ಪ್ರಶ್ನೆಗೆ ಸಂತೋಷ್ ಲಾಡ್ ಹೇಳಿದ್ದೇನು..?

---Advertisement---

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಅದರಲ್ಲೂ ಈ ಯೋಜನೆಯ ಫಲಾನುಭವಿಗಳಿಗೆ ಆಗಾಗ ಕಂತಿನ ಹಣ ಮಿಸ್ಸಾಗ್ತಾನೆ ಇರುತ್ತೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದು, ಐದು ಸಾವಿರ‌ ಕೋಟಿ ಹಣ ಮಹಿಳೆಯರಿಗೆ ತಲುಪದೆ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಪ್ರಶ್ನೆಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.

ಐದು ಸಾವಿರ ಕೋಟಿ ಹಣ ಯಾವುದು ಹಗರಣವಾಗಿಲ್ಲ. ಸುಮ್ಮನೆ ಇದೆಲ್ಲ ಮಾತನಾಡುವುದು ಸರಿಯು ಅಲ್ಲ. ಆರೋಪ ಮಾಡಬೇಕು ಒಕೆ. ಎರಡು ತಿಂಗಳಿನ ಹಣ ಹೋಗಿಲ್ಲ. ಅದಕ್ಕೆ ಐದು ಸಾವಿರ ಕೋಟಿ ಲೂಟಿ ಆದಂಗೆ ಹೇಗೆ ಆಗುತ್ತೆ. ಏನು ಟೆಂಡರ್ ಆಗಿದೆಯಾ..? ಬೇರೆ ಅಕೌಂಟ್ ಗೇನಾದರೂ ಹೋಗಿದೆಯಾ..? ನೀವುಗಳು ಆ ಪ್ರಶ್ನೆಯನ್ನ ಕೇಳಬೇಕು. ಅದಾನಿ ಹೊಡೆದುಕೊಂಡವರಲ್ಲ ಲಕ್ಷಾಂತರ ಕೋಟಿ, ಅಂಬಾನಿ ಹೊಡೆದುಕೊಂಡಿದ್ದಾರಲ್ಲ ಲಕ್ಷಾಂತರ ಕೋಟಿ ಇವರೆಲ್ಲಾ ಅವರ ಲಾಭದಾಯಕರು.

ಎಲೆಕ್ಟ್ರಲ್ ಬಾಂಡ್ ನಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದವರಲ್ಲ, ಇವರಿಗೇನಾದರೂ ಅರ್ಹತೆ ಇದೆಯಾ ನಮ್ಮ ಬಗ್ಗೆ ಮಾತನಾಡುವುದಕ್ಕೆ. 2 ತಿಂಗಳು ಹಣ ಹಾಕಿಲ್ಲ. ಲಕ್ಷ್ಮೀ ಅವರು ಬಂದು ಆ ಬಗ್ಗೆ ತಿಳಿಸಿದ್ದಾರೆ. ಲೂಟಿ ಮಾಡೋದಕ್ಕೆ ಏನಿದೆ ಅದರಲ್ಲಿ. ಸ್ವಾಮಿ ನಾವಿರೋದೆ ಮೂರು ರಾಜ್ಯದಲ್ಲಿದ್ದೀವಪ್ಪ, ಇಪ್ಪತ್ತು ರಾಜ್ಯದಲ್ಲಿ ಅವರೇ ಇದ್ದಾರೆ. ಕೇಂದ್ರ ಸರ್ಜಾರ ಅವರದ್ದೇ ಇದೆ. ವಂದೇ ಮಾತರಂ ಅಂತ ಹೇಳ್ತಾ ಇದ್ದಾರಲ್ಲ, ಎಲ್ಲಾ ಭೂಮಿಗಳನ್ನು, ಏರ್ಪೋರ್ಟ್ ಗಳು ಅದಾನಿಗೆ ಕೊಟ್ಟು ಕೂತ್ಕೊಂಡವ್ರೆ. ಇಲ್ಲಿ ಬಂದು ವಂದೇ ಮಾತರಂ ಬಗ್ಗೆ ಹಾಡು ಆಡ್ತಾರೆ ಎಂದು ಗರಂ ಆಗಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now