ಬೆಂಗಳೂರು: ಐಟಿ ದಾಳಿ ನಡೆದ ಬೆನ್ನಲ್ಲೇ ಉದ್ಯಮಿ ಸಿಜೆ ರಾಯ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಕೂಡ ಚುರುಕುಗೊಂಡಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಮಾತನ್ನಾಡಿದ್ದು, ಡಿಸೆಂಬರ್ ತಿಂಗಳಲ್ಲಿ ಅವರ ಕಂಪನಿ ಮೇಲೆ ಐಟಿ ದಾಳಿ ನಡೆದಿತ್ತು. ಅದಾದ ಮೇಲೆ 60 ದಿನದೊಳಗೆ ಚಾರ್ಜ್ ಶೀಟ್ ಹಾಕಬೇಕಿತ್ತು.
ಅದಕ್ಕಾಗಿ ರಾಯ್ ಅವರನ್ನ ಕರೆದಿದ್ದರು ಎಂದಿದ್ದರು. ಮೂರು ದಿನಗಳ ಹಿಂದೆ ದುಬೈನಿಂದ ಬಂದಿದ್ದರು. ಹೀಗಾಗಿ ಅಧಿಕಾರಿಗಳು ಅವರ ಆಫೀಸ್ ಗೆ ಹೋಗಿ, ಚರ್ಚೆ ಮಾಡಿ, ಸ್ಟೇಟ್ಮೆಂಟ್ ತೆಗೆದುಕೊಳ್ಳುವುದಕ್ಕೆ ತಿಳಿಸಿದ್ದಾರೆ. ಅದಕ್ಕೆ ಅವರ ಕಚೇರಿಗೆ ಅಧಿಕಾರಿಗಳು ಹೋಗಿದ್ರು. ಐದು ನಿಮಿಷ ಬರ್ತೀನಿ ಅಂತ ಚೇಂಬರ್ ಗೆ ಹೋಗಿದ್ದಾರೆ. ಇಪ್ಪತ್ತು ನಿಮಿಷ ಹೊರಗೆ ಬಂದಿರಲಿಲ್ಲ. ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಯಾಕೆ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಚಾರಗಳ ಬಗ್ಗೆ ತನಿಖೆ ಮಾಡುವುದಕ್ಕೆ ಹೇಳಿದ್ದೇನೆ ಎಂದಿದ್ದಾರೆ.

ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದ ಪೊಲೀಸ್ ಬಗ್ಗೆ ಮಾತನ್ನಾಡಿ, ಅವರನ್ನ ಈಗಾಗಲೇ ಸಸ್ಪೆಂಡ್ ಮಾಡಿದ್ದೇವೆ. ನನ್ನ ಗಮನಕ್ಕೆ ಬಂದ ತಕ್ಷಣ ಕಮಿಷನರ್ ಹೇಳಿ, ಅವರು ಸಸ್ಪೆಂಡ್ ಮಾಡಿದ್ದಾರೆ. ಮುಂದಿನ ಕ್ರಮ ಇಲಾಖೆಯಲ್ಲಿ ಯಾವ ರೀತಿ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ. ಈ ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಕಠಿಣವಾಗಿನೇ ಹೇಳಿದ್ದೇವೆ. ಪದೇ ಪದೇ ಇಂತಹ ಘಟನೆಗಳು ನಡೆದಾಗ, ಸರ್ಕಾರಕ್ಕೂ ನಮಗೂ ಮುಜುಗರವನ್ನ ತರಿಸುತ್ತೆ. ನಾನು ನಿರ್ದಾಕ್ಷಿಣ್ಯವಾಗಿ ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಆಗೋಕು ಮುಂಚೆ ಮನಸ್ಸಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಅನ್ನೋದೆ ನನ್ನ ಸೂಚನೆ ಎಂದಿದ್ದಾರೆ.















