Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾಸ್ಕ್ ಮ್ಯಾನ್ ಅರೆಸ್ಟ್ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು..?

---Advertisement---

ಮಂಗಳೂರು: ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನ ಕೋರ್ಟ್ ಇದೀಗ ಪೊಲೊಇಸ್ ಕಸ್ಟಡಿಗೆ ನೀಡಿದೆ. ಈ ಸಂಬಂಧ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯೆ ನೀಡಿದ್ದಾರೆ.

ಅರೆಸ್ಟ್ ಆಗಿದ್ದು ತಿಳೀತು. ಅದು ಒಳ್ಳೆ ವಿಷಯ. ಅದನ್ನ ನಾವೂ ಸ್ವಾಗತಿಸ್ತೇವೆ. ಬರೀ ಅರೆಸ್ಟ್ ಅಲ್ಲ ನ್ಯಾರ್ಕೋ ಅನಲೈಸಿಸ್ ಟೆಸ್ಟ್ ಕೂಡ ಮಾಡಬೇಕು ಅಂತ ನಾವೂ ಮನವಿ ಮಾಡಿಕೊಳ್ತೀವಿ ಅಷ್ಟೇ. ನಿನ್ನೆ ನನ್ನ ಮೇಲೆ ಎಫ್ಐಆರ್ ಆಗಿತ್ತಲ್ಲ. ಅದಕ್ಕೆ ನಾನು ಬಂದಿದ್ದೆ. ಈಗ ರಿಟರ್ನ್ ಸ್ಟೇಟ್ಮೆಂಟ್ ಕೊಟ್ಟು ಬಂದಿದ್ದೇನೆ.‌ ಷಡ್ಯಂತ್ರ ಏನೇ ಇದ್ದರು ಅದನ್ನು ಎಸ್ಐಟಿ ಅಧಿಕಾರಿಗಳು ಹೇಳ್ತಾರೆ ಎಂದಿದ್ದಾರೆ.

ಸುಜಾತ ಭಟ್ ತಮ್ಮ‌ ಮಗಳ ವಿಚಾರದಲ್ಲಿ ಗಿರೀಶ್ ಮಟ್ಟಣ್ಣನವರು ಹೇಳಿದಂತೆ ನಾನು ಕೇಳಿದೆ ಅಂತ ಹೇಳಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗಿರೀಶ್ ಮಟ್ಟಣ್ಣನವರ್, ಅದಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ. ಊಹಾಪೋಹಗಳಿಗೆ ದಯವಿಟ್ಟು ತಲೆ ಕೊಡಬೇಡಿ ಎಂದಿದ್ದಾರೆ.

ಚಿನ್ನಯ್ಯನ ಹಿಂದೆ ಸಾಕಷ್ಟು ಜನ ಇದ್ದಾರೆ ಅಂತ ಎಸ್ಐಟಿ ತನಿಖೆಯಲ್ಲಿ ತಪ್ಪೊಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗಿರೀಶ್ ಮಟ್ಟಣ್ಣನವರ್, ಎಸ್ಐಟಿ ತನಿಖೆ ನಡೆಸುತ್ತೆ. ಬಹುದು ಗಿಹುದು ಅಲ್ಲ, ಖಚಿತವಾಗಿ ಬೇಕಾದ್ರೆ ಎಸ್ಐಟಿ ನವರೇ ಉತ್ತರ ಕೊಡ್ತಾರೆ. ಎಸ್ಐಟಿ ನವರು ಕರೆದ್ರೆ ನಮಗೂ ಅವನಿಗೂ ಏನು ಸಂಬಂಧ, ಸಂಪರ್ಕ ಎಂಬುದನ್ನು ಖಂಡಿತ ನಾವೆಲ್ಲಾ ಹೇಳ್ತೀವಿ. ಈ ಸಂಬಂಧ ಎಸ್ಐಟಿನವರು ನಮ್ಮನ್ನೇನು ಸಂಪರ್ಕ ಮಾಡಿಲ್ಲ. ಮಾಡಿದ್ರೆ ಹೋಗಿ ಉತ್ತರ ಕೊಡ್ತೀನಿ. ಅರೆಸ್ಟ್ ಆಗಿರುವುದು ಒಳ್ಳೆಯ ಬೆಳವಣಿಗೆ. ನಾನು IO ಅಲ್ಲ. ಅದಕ್ಕೋಸ್ಕರ ಅಂತಾನೇ ಎಸ್ಐಟಿ ಮಾಡಿರುವುದು.

ಬಹಳ ಮುಖ್ಯವಾದ ವಿಚಾರ ದಯವಿಟ್ಟು ಸಾರ್ವಜನಿಕರ ಗಮನಕ್ಕೆ, ಈಗ ಸೌಜನ್ಯ ಪರ ಹೋರಾಟಗಾರರಾಗಲಿ, ಜನ ಸಾಮಾನ್ಯರಾಗಲಿ, ಎಸ್ಐಟಿ ಬಂಧಿಸಿದೆ ಅಂತ ಹೇಳಿದ್ರೆ ಎಸ್ಐಟಿ ಮೇಲೆ ಸಿಟ್ಟಾಗುವುದ, ಆಕ್ರೋಶ ಹೊರ ಹಾಕುವುದನ್ನು ಮಾಡಬೇಡಿ. ಎಸ್ಐಟಿಗೆ ಅದರದ್ದೇ ಆದ ಪ್ಯಾಟ್ರನ್ ಇದೆ. ಎಸ್ಐಟಿಗೆ ಪೂರ್ತಿಯಾಗಿ ಕೆಲಸ ಮಾಡುವುದಕ್ಕೆ ಬಿಡಬೇಕು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment