Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುಮಾರಸ್ವಾಮಿ ಮಗ, ಬೊಮ್ಮಾಯಿ ಮಗನನ್ನ ಸೋಲಿಸಿಲ್ವಾ ನಾವೂ : ಸಿದ್ದರಾಮಯ್ಯ

---Advertisement---

ದಾವಣಗೆರೆ : ಇಂದು ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದು, ಅಲ್ಪಸಂಖ್ಯಾತರಿಗೆ ಅತೃಪ್ತಿ ಇರುವ ಕಾರಣ ಸಮಾಧಾನ ಮಾಡಲು ಪ್ರಯತ್ನಿಸ್ತೀರಾ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಯಾರಿಗೆ ಅಸಮಾಧಾನವಿದೆ, ಆ ಅಸಮಾಧಾನವನ್ನು ಹೋಗಲಾಡಿಸುವುದಕ್ಕೆ ಪ್ರಯತ್ನ ಮಾಡ್ತೇವೆ ಎಂದಿದ್ದಾರೆ.

ಎರಡು ಕಡೆ ಗೆಲ್ಲುವ ವಿಶ್ವಾಸ 100% ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಇದನ್ನೇ ಹೇಳಿದ್ರು ಅವರು. ಬಸವರಾಜ್ ಬೊಮ್ಮಾಯಿ ಮಗ, ಕುಮಾರಸ್ವಾಮಿ ಮಗ ಅವರನ್ನೇ ಸೋಲಿಸಲಿಲ್ವಾ ನಾವೂ. ಈಗ ಹೇಳಿಕೊಳ್ಳಬೇಕು ಹೇಳ್ತಾರೆ. ನಾವೂ ನುಡಿದಂತೆ ನಡೆದಿದ್ದೇವೆ. ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಸಹ ಜಾರಿ ಮಾಡಿದ್ದೇವೆ. ಈ ರಾಜ್ಯದ ಜನ ನಮ್ಮ ಪರ ಇದ್ದಾರೆ. ಕಳೆದ ಬೈ ಎಲೆಕ್ಷನ್ ನಲ್ಲೂ ಇದನ್ನ ಸಾಬೀತು ಮಾಡಿದ್ದೇವೆ. ರೈತರು, ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು ಎಲ್ಲರೂ ಕೂಡ ನಮ್ಮ ಪರ ಇದ್ದಾರೆ. ಬಿಜೆಪಿಯವರು ಗೆಲ್ಲೋದೆ ಇಲ್ವಲ್ಲ.

ನಾವೂ ಅಧಿಕಾರದಲ್ಲಿದ್ದೀವಿ. ಈ ಚುನಾವಣೆಯಲ್ಲೂ ಗೆಲ್ತೀವಿ ಅಂತ ಇದ್ದೀವಿ. ಅಲ್ಪಸಂಖ್ಯಾತರಿಗೆ ಮನವೊಲಿಕೆ ಮಾಡುವಂತ ಕೆಲಸವನ್ನು ಮಾಡ್ತೀವಿ. ಯಾರಿಗೆ ಅಸಮಾಧಾನವಿದೆ ಅದನ್ನ ಹೋಗಲಾಡಿಸುತ್ತೀವಿ ಎಂಬ ಮಾತನ್ನ ಹೇಳಿದ್ದಾರೆ. ಸದ್ಯ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಈ ಬಾರಿಯ ಟಿಕೆಟ್ ಸಿಗಬೇಕು ಎಂದು ಸಚಿವ ಜಮೀರ್ ಅಹ್ಮದ್ ಅವರು ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೂ ಕಡೆ ಗಳಿಗೆಯಲ್ಲಿ ಶಾಮನೂರು ಕುಟುಂಬಕ್ಕೇನೆ ಟಿಕೆಟ್ ಸಿಕ್ಕಿದೆ. ಈ ಸಂಬಂಧ ಅಲ್ಲಿನ ಅಲ್ಪಸಂಖ್ಯಾತರು ಬೇಸರದಲ್ಲಿದ್ದು, ಬಂಡಾಯವೆದ್ದಿದ್ದಾರೆ. ಸ್ವತಂತ್ರವಾಗಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದಾರೆ. ಇದೊಇಗ ದಾವಣಗೆರೆಗೆ ಸಿದ್ದರಾಮಯ್ಯ ಅವರು ಎಂಟ್ರಿಯಾಗಿದ್ದು, ಯಾವ ರೀತಿ ಸಮಾಧಾನ ಮಾಡ್ತಾರೆ ಎಂಬುದನ್ನ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...