Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಚಿಂತಕುಂಟೆ ವಂಶಸ್ಥರ ‘ವಂಶಸಂಗಮ’ – ಅಪೂರ್ವ ಕಾರ್ಯಕ್ರಮಕ್ಕೆ ಡಾ. ಬಸವಕುಮಾರ ಸ್ವಾಮೀಜಿ ಶ್ಲಾಘನೆ

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 28 : ಅವಿಭಕ್ತ ಕುಟುಂಬಗಳು ಮರೆಯಾಗಿ ಪೂರ್ವಜರ ಹೆಸರುಗಳೇ ಜ್ಞಾಪಕವಿರದ ಈ ಕಾಲದಲ್ಲಿ ಒಡಹುಟ್ಟಿದವರ ನಡುವಿನ ಸಂಬಂಧಗಳೇ ಶಿಥಿಲವಾಗುತ್ತಿರುವ ಈ ಸಂದರ್ಭದಲ್ಲಿ, ಈ ರೀತಿಯ ವಂಶಸಂಗಮ ಕಾರ್ಯಕ್ರಮವನ್ನು ಏರ್ಪಡಿಸಿ ಮುಂದಿನ ಪೀಳಿಗೆಗೆ ವಂಶಸ್ಥರ ಪೂರ್ಣ ಪರಿಚಯದೊಂದಿಗೆ ಅವಿನಾಭಾವ ಸಂಬಂಧಗಳು ಮುಂದುವರೆಯಬೇಕೆಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಶ್ಲಾಘನೀಯ ಸಂಗತಿ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಪೂಜ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ವೈಭವ ಗಾರ್ಡನ್ ಸಭಾಂಗಣದಲ್ಲಿ ಜುಲೈ 25 ಮತ್ತು 26 ರಂದು ನಡೆದ ಚಿಂತಕುಂಟೆ ವಂಶಸ್ಥರ ನಾಲ್ಕನೆಯ ವಂಶಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಿಂತಕುಂಟೆ ವಂಶಸ್ಥರು ತಮ್ಮ ಐದು ತಲೆಮಾರಿನ ವಂಶಾವಳಿಯ ವಂಶವೃಕ್ಷ ಕಿರು ಹೊತ್ತಿಗೆಯನ್ನು ಹೊರತಂದಿರುವ ವಿಚಾರವು ಅಪೂರ್ವ ಸಂಗತಿಯಾಗಿದೆ,
ಇವರ ವಿವಿಧ ತಲೆಮಾರಿನ ಕುಟುಂಬಸ್ಥರನ್ನು ನೋಡುವುದೇ ಸಂತಸವಾಗುತ್ತದೆ, ಈ ಕಾರ್ಯಕ್ರಮಗಳು ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿ ಆಶೀರ್ವದಿಸಿದರು.

ಚಿಂತಕುಂಟೆ ವಂಶಸ್ಥರಾದ ತುಮಕೂರಿನ ಸಿ ಎಸ್ ಬಸವರಾಜು ಮತ್ತು ಅವರ ಸಹೋದರರು, ಸಹೋದರಿಯರು ಹಾಗೂ ಆಂಧ್ರಪ್ರದೇಶ ಮತ್ತು ಕರ್ನಾಟಕದ ಎಲ್ಲ ವಂಶಸ್ಥರೊಂದಿಗೆ ಪರಸ್ಪರ ಸೌಹಾರ್ದ ಸಂಬಂಧ ವೃದ್ದಿಗೆ ಮಾತುಕತೆ ನಡೆಸಿ, ಭೋಜನಕೂಟ ಏರ್ಪಡಿಸಿ ಸಂಭ್ರಮಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now