Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಕೆಶಿ ವಿಚಾರವಾಗಿ ನಾವು ಯಾವುದೇ ಅಪಪ್ರಚಾರ ಮಾಡಿಲ್ಲ: ಉಗ್ರಪ್ಪ

Facebook
Twitter
Telegram
WhatsApp

ಬೆಂಗಳೂರು: ನೀರಾವರಿ ಇಲಾಖೆಯಲ್ಲಿ ಆಗಿರುವ ಹಗರಣಗಳ ವಿಚಾರವಾಗಿ ಹಾಗೂ ಬಿಜೆಪಿಯವರು ಈ ರೀತಿ ಮಾತನಾಡುತ್ತಿದ್ದಾರೆ ಎಂಬ ವಿಚಾರ ಬಿಚ್ಚಿಟ್ಟರು. ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಮಾಧ್ಯಮಗೋಷ್ಟಿ ನಂತರ ಅವರಿಗೆ ವಿವರ ನೀಡಿದ್ದೇನೆ. ಡಿಕೆಶಿ ವಿಚಾರವಾಗಿ ನಾವು ಯಾವುದೇ ಅಪಪ್ರಚಾರ ಮಾಡಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಸ್ಪಷ್ಟಪಡಿಸಿದರು. ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ವ್ಯಾಪಾರ ವಹಿವಾಟಿನಿಂದ ಅವರು ಹಣ ಸಂಪಾದಿಸಿದ್ದಾರೆ. ರಾಜಕಾರಣದಿಂದ ಡಿಕೆಶಿ ಹಣ ಗಳಿಸಿಲ್ಲ. ಬದಲಾಗಿ ಕಳೆದುಕೊಂಡಿದ್ದಾರೆ ಎಂದರು.

ಸಲೀಂ ಅರ್ಧಂಬರ್ದ ಮಾಹಿತಿಯನ್ನು ನನಗೆ ನೀಡಿದಾಗ, ನಾನು ಅವರ ಮಾತನ್ನು ತಡೆದು ಸ್ಪಷ್ಟೀಕರಣ ನೀಡಿದ್ದೇನೆ. 1,800 ಕೋಟಿ ರೂಪಾಯಿ ನೀರಾವರಿ ಇಲಾಖೆಯ ಭ್ರಷ್ಟಾಚಾರದಲ್ಲಿ ಉಮೇಶ್ ಎಂಬ ವ್ಯಕ್ತಿ ಗುರುತಿಸಿಕೊಂಡಿದ್ದು, ಅವರ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ. ನಮ್ಮ ನಾಯಕರು ಯಾವುದೇ ಕಾರಣಕ್ಕೂ ಕಮಿಷನ್ ಪ್ರವೃತ್ತಿಯನ್ನು ಬೆಳೆಸಿದವರಲ್ಲ.

ಪಕ್ಷದ ರಾಜ್ಯಾಧ್ಯಕ್ಷರು ಯಾವುದೇ ಕಾರಣಕ್ಕೂ ಇಂತಹ ಕಾರ್ಯ ಮಾಡಿಲ್ಲ. ಅನಗತ್ಯವಾಗಿ ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸುವುದು ಮಾಧ್ಯಮಗಳ ಮೌಲ್ಯಕ್ಕೆ ಶೋಭೆ ತರುವಂತದ್ದಲ್ಲ.ಭ್ರಷ್ಟಾಚಾರ ಕಾಂಗ್ರೆಸ್​​​ಗೆ ದೂರ:ಕಮಿಷನ್ ಆಗಲಿ, ಭ್ರಷ್ಟಾಚಾರವಾಗಲಿ ಕಾಂಗ್ರೆಸ್​​​ಗೆ ದೂರ. ಅದರಲ್ಲೂ ಪಕ್ಷದ ಅಧ್ಯಕ್ಷರಿಗೆ ಅದು ದೂರ. ಭ್ರಷ್ಟಾಚಾರವನ್ನು ಯಾರು ಮಾಡಿದರೂ ತಪ್ಪೇ. ಮುಖ್ಯಮಂತ್ರಿ, ಪ್ರಧಾನಿ, ನಮ್ಮ ಪಕ್ಷದ ಯಾವುದೇ ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಅದು ತಪ್ಪು. ನಮ್ಮ ನಾಯಕರು ಯಾರು ಇಂತಹ ಪ್ರಯತ್ನ ಮಾಡಿಲ್ಲ. ಇದನ್ನು ಅನಗತ್ಯವಾಗಿ ಬಿಂಬಿಸುವ ಹಾಗೂ ಮುಂದುವರಿಸುವ ಪ್ರಯತ್ನ ಬೇಡ ಎಂದು ಉಗ್ರಪ್ಪ ಮನವಿ ಮಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ : ಚಿತ್ರದುರ್ಗದಲ್ಲಿ ಜೆಡಿಎಸ್ ಆಗ್ರಹ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru,   ಸುದ್ದಿಒನ್, ಚಿತ್ರದುರ್ಗ,ಮೇ.08 : ಪೆನ್

ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..!

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಆಗಿದೆ. ನಾಳೆಯೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಳೆಯೇ ತಿಳಿಯಲಿದೆ. ಮೇ 9ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ

error: Content is protected !!