Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಂದೆ-ತಾಯಿಯ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ : ಕುಮಾರಸ್ವಾಮಿ ಆಕ್ರೋಶ

---Advertisement---

 

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ನವರೇ ದೇವೇಗೌಡರಿಂದ ನೀವೂ ಬೆಳೆದಿದ್ದೀರಿ. ಅವರು ಏನಂತಾ ನನಗಿಂತ ಚೆನ್ನಾಗಿ ನೀವೂ ತಿಳಿದುಕೊಂಡಿದ್ದೀರಿ. ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದಿದ್ದಾರೆ.

ನಮ್ಮ ತಂದೆ ದೇವೇಗೌಡರಿಗೆ 92 ವರ್ಷ ವಯಸ್ಸಾಗಿದೆ. ತಾಯಿಗೆ 89 ವರ್ಷ. ಅವರು ಯಾವ ರೀತಿ ಬದುಕಿದ್ದಾರೆಂದು ಕಣ್ಣಾರೆ ಕಂಡಿದ್ದೇನೆ. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ತಂದೆ ತಾಯಿಯನ್ನು ಕಳೆದುಕೊಳ್ಳುತ್ತೇವೆ ಎನ್ನುವ ನೋವಿನಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ ಎರಡು ದಿನ ಮನೆಗೆ ಹೋಗಿದ್ದೆ. ಆದರೆ ಹೆಚ್ಡಿಕೆ, ರೇವಣ್ಣ ಕುಟುಂಬದ ಸಂಘಟಿತ ಪಾಪದ ಕೃತ್ಯ ಎಂದು ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಯಾವ ಎಸ್ಐಟಿ ತನಿಖೆ ನಡೆಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ತಂದೆ ತಾಯಿಯ ಸಂಬಂಧದ ಆತ್ಮೀಯತೆ ಹಾಗೂ ಬಾಂಧವ್ಯ ಇಲ್ಲದೆ ಇರಬಹುದು. ಆದರೆ ನಾವೂ ಆ ತರ ಬದುಕಿಲ್ಲ‌. ನಮಗೆ ನಮ್ಮ ತಂದೆ ತಾಯಿಯ ಆರೋಗ್ಯವೇ ಮುಖ್ಯ. ನಾನು ಹೊರಗಡೆ ರಾಜಕೀಯ ಪ್ರಚಾರಕ್ಕೆ ಹೋದರು, ಸಭೆ ಸಮಾರಂಭಗಳಿಗೆ ಹೋದರು ಕೂಡ ರಾತ್ರಿ ಮನೆಗೆ ವಾಪಾಸ್ ಹೋಗಿ ತಂದೆ ತಾಯಿಗೆ ಧೈರ್ಯ ಹೇಳಿ ಹೋಗುತ್ತಿದ್ದೆ. ದೇವೇಗೌಡರ ಮನೆ ಎಂದು ಹೇಳುತ್ತೀರಿ. ಆದರೆ ದೇವೇಗೌಡರಿಗೆ ಸ್ವಂತ ಮನೆಯಿಲ್ಲ. ಮಗಳ ಮನೆಯಲ್ಲಿ ಇದ್ದಾರೆ. ರೇವಣ್ಣ ಕಿಡ್ನ್ಯಾಪ್ ಮಾಡಿಸಿದ್ದಾರಾ..? ಪಾಪ ಅವರನ್ನು ತೆಗೆದುಕೊಂಡು‌ ಹೋಗಿ ಒಳಗೆ ಕೂರಿಸಿದ್ದೀರಿ. ಅನ್ಯಾಯ ಆದ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬೇಕು ಅಂದ್ರೆ ಈ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಒತ್ತಾಯಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment