ಜಾತಿ ಗಣತಿ ವರದು ರಾಜ್ಯದಲ್ಲಿ ಭುಗಿಲೆದ್ದ ವಾತಾವರಣ ನಿರ್ಮಾಣ ಮಾಡಿದೆ. ಬಹಿರಂಗವಾದ ವರದಿಯ ಪ್ರಕಾರ ಮುಸ್ಲಿಂ ಸಮುದಾಯದವರು 75 ಲಕ್ಷ ಇದ್ದಾರೆ ಎಂದು ತೋರಿಸಲಾಗುತ್ತಿದೆ. ಉಳಿದಂತೆ ಹಿಂದೂ ಸಮುದಾಯದಲ್ಲಿರುವ ಜಾತಿಗಳಲ್ಲಿ ಲಿಂಗಾಯತ ಸಮುದಾಯವೇ ಮುಸ್ಲಿಮರಿಗಿಂತ ಕಡಿಮೆ ಇದೆ. ಇದನ್ನ ಎಲ್ಲರೂ ವಿರೋಧಿಸುತ್ತಿರುವಾಗಲೇ ಸಿ.ಎಂ.ಇಬ್ರಾಹಿಂ ಇದರ ಬಗ್ಗೆ ಮಾತನಾಡಿದ್ದಾರೆ. ನಾವೂ 75 ಲಕ್ಷ ಅಲ್ಲ ಇರೋದು 1 ಕೋಟಿ ಅಂತ ಹೇಳಿದ್ದಾರೆ.
ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದೆ. ನಾವೀಗ ಇರೋದು 75 ಲಕ್ಷವಲ್ಲ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇದ್ದೇವೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಸಮೀಕ್ಷೆ ನಡೆಸಿಯೇ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಗೆ ವಿರೋಧ ಯಾಕೆ ಮಾಡ್ತಾ ಇದಾರೆ ಅನ್ನೋದು ಅರ್ಥ ಆಗ್ತಾ ಇಲ್ಲ. ಏನೋ ಜಾತಿ ಆಧಾರದ ಮೇಲೆ ಪಾರ್ಲಿಮೆಂಟ್ ಸೀಟನ್ನ ಕೊಡುವುದಾದರೇ ವಿರೋಧ ಮಾಡಲಿ. ಸುಮ್ಮನೆ ವರದಿಯನ್ನ ವಿರೋಧಿಸುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ.
ವರದಿಯ ಪ್ರಕಾರ 75 ಲಕ್ಷ ಜನಸಂಖ್ಯೆ ಇದೆ. ಆದರೆ 7 ಜನ ಮಾತ್ರ ಶಾಸಕರಿದ್ದಾರೆ. ಈ ವರದಿ ಖುಷಿಯೂ ಇಲ್ಲ ದುಃಖವೂ ಇಲ್ಲ. ಈಗ ಕುಮಾರಸ್ವಾಮಿಗೆ ಒಬ್ಬನೇ ಮಗ ನನಗೆ ಒಂಭತ್ತು ಜನ ಮಕ್ಕಳು. ಹಾಗಂತ ನನಗೆ ಒಬ್ಬನೇ ಮಗ ಅಂತ ಹೇಳೋಕೆ ಆಗುತ್ತಾ. ಯಾರೋ ಅಂಗಡಿ ತೆರೆದಿದ್ದಾರೆ ಒಳ್ಳೆಯದು ಆಗಲಿ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಈಗ ಇಷ್ಟೊಂದು ಜನ ಇದ್ದೀವಿ ಅಂತ ನಾವೇನಾದ್ರೂ ವಿಧಾನಸೌಧ ಬಿಟ್ಟುಕೊಡಿ ಅಂತ ಕೇಳಿದ್ವಾ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









