Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಮಲ್ಲಾಡಿಹಳ್ಳಿ ಗ್ರಾಮವು ಹೊಳಲ್ಕೆರೆಯಿಂದ ಹತ್ತು ಕಿಲೋಮೀಟರ್ ದೂರಕ್ಕೆ ಹೊಳಲ್ಕೆರೆ- ರಾ. ಹೆ 13 ರಲ್ಲಿ ಮಲ್ಲಾಡಿಹಳ್ಳಿ- ಚನ್ನಗಿರಿ ಮುಖ್ಯರಸ್ತೆಯಿಂದ ಉತ್ತರಕ್ಕೆ ಎರಡು ಕಿಲೋಮೀಟರ್ ದೂರದಲ್ಲಿದೆ .ರಾಷ್ಟ್ರಮಟ್ಟದ ಖ್ಯಾತಿ ಹೊಂದಿರುವ ಈ ಗ್ರಾಮ ಹಿಂದೆ ಸಾಮಾನ್ಯ ಗ್ರಾಮವಾಗಿತ್ತು.ಈ ಗ್ರಾಮಕ್ಕೆ 1943 ರಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನಿಂದ ಬಂದ ಶ್ರೀ ರಾಘವೇಂದ್ರ ಸ್ವಾಮಿಗಳು ಇಲ್ಲಿ ಅನಾಥಸೇವಾಶ್ರಮ ಸ್ಥಾಪಿಸಿ ಯೋಗದ ಮೂಲಕ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿ ಹತ್ತಾರು ರೀತಿಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮದ ಕೀರ್ತಿಯನ್ನು ರಾಷ್ಟ್ರದಾದ್ಯಂತ ಹರಡಿಸಿದರು.
64 ವರ್ಷಗಳ ಕಾಲ ಸತತವಾಗಿ ಶ್ರಮಿಸಿ ಜನರಿಗೆ ಶಿಕ್ಷಣ, ಶಿಸ್ತು ,ಯೋಗ, ಆರೋಗ್ಯ ಬೋಧಿಸಿದರು.


ಇಲ್ಲಿ ಯೋಗಾಶ್ರಮ, ಆಯುರ್ವೇದ ಆಸ್ಪತ್ರೆ ,ವಿದ್ಯಾರ್ಥಿನಿಲಯ, ವಸತಿಗೃಹ ,ಅತಿಥಿ ಮಂದಿರ ಮುಂತಾದ ಹತ್ತಾರು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಿರುಕ ಎಂಬ ಕಾವ್ಯನಾಮದಿಂದ ಅನೇಕ ನಾಟಕ, ಕಾದಂಬರಿ ವೈದ್ಯಗ್ರಂಥ, ಯೋಗಶಾಸ್ತ್ರ ಗ್ರಂಥಗಳನ್ನು ರಚಿಸಿದ್ದಾರೆ.ತಾಲೂಕಿನ ವಿಶೇಷ ,ವಿಶಿಷ್ಟ ಗ್ರಾಮವಾದ ಮಲ್ಲಾಡಿಹಳ್ಳಿಯು ಮಾದರಿ ಗ್ರಾಮವಾಗಿದೆ .ಗ್ರಾಮದ ಪ್ರತಿ ಮನೆಯಲ್ಲೂ ಶಿಕ್ಷಕರಿದ್ದು ರಾಜ್ಯದೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ.ಪ್ರತಿ ವರ್ಷ ಡಿಸೆಂಬರ್ ನಲ್ಲಿ 3 ದಿನಗಳ ರಂಗ ಚಟುವಟಿಕೆ, ನಾಟಕೋತ್ಸವ ನಡೆಯುತ್ತದೆ.ಶಿಶುವಿಹಾರದಿಂದ ಪಿಯುಸಿವರೆಗೆ ಶಿಕ್ಷಣ ಇಲ್ಲಿ ಲಭ್ಯವಿದ್ದು ,ಬಿ.ಎಡ್.ಕಾಲೇಜು ,ಡಿಪ್ಲೋಮಾ, ಐಟಿಐ ಕಾಲೇಜುಗಳಿವೆ. ಆಶ್ರಮದ ವತಿಯಿಂದ ಹತ್ತಾರು ಶೈಕ್ಷಣಿಕ ಕಾರ್ಯಾಗಾರಗಳು ನಡೆಯುತ್ತಲೇ ಇರುತ್ತವೆ.ಆಶ್ರಮದ ಆವರಣದಲ್ಲಿ ಬನಶಂಕರಿ ಮಂದಿರವಿದ್ದು ಪ್ರತಿವರ್ಷ ಬನ ಹುಣ್ಣಿಮೆಯಂದು ಇಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಗ್ರಾಮದಲ್ಲಿ ಬೀರಲಿಂಗೇಶ್ವರ ,ರಂಗನಾಥ ಸ್ವಾಮಿ, ಆಂಜನೇಯ ಮಂದಿರಗಳಿವೆ .ಗ್ರಾಮವು ಉತ್ತಮ ವಾಣಿಜ್ಯ ಕೇಂದ್ರವಾಗಿದ್ದು ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಗ್ರಾಮಕ್ಕೆ ಉತ್ತಮ ಸಾರಿಗೆ ಸಂಪರ್ಕವಿದ್ದು, ಎಲ್ಲ ಪ್ರಮುಖ ಊರುಗಳಿಗೆ ಬಸ್ ಸೌಲಭ್ಯ ಲಭ್ಯವಿದೆ. ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿ
ಹೊಳಲ್ಕೆರೆ ರೈಲು ನಿಲ್ದಾಣ ವಿದೆ. ಯೋಗ,ಆಯುರ್ವೇದ ಚಿಕಿತ್ಸೆ, ನಾಟಕ ,ಸಂಗೀತ, ಶಿಕ್ಷಣದ ಪ್ರಗತಿಗೆ ಇಲ್ಲಿನ ರಾಘವೇಂದ್ರಸ್ವಾಮಿಗಳು ಕಾರಣವಾಗಿದ್ದರು .ಯೋಗ ಶಿಕ್ಷಣಕ್ಕೆ ಹತ್ತಾರು ಜಿಲ್ಲೆಗಳ ಜನರು ಬರುತ್ತಿದ್ದರು. ಡಾ.ರಾಜಕುಮಾರ್ ,ಮಾಜಿ ಮುಖ್ಯಮಂತ್ರಿ ಗುಂಡೂರಾವ್ ,ಪ್ರಭಾಕರ್ ಗುರೂಜಿ ಮುಂತಾದವರು ಸ್ವಾಮೀಜಿಯವರಿಂದ ಯೋಗ ಕಲಿತರಾಗಿದ್ದಾರೆ. ರಾಷ್ಟ್ರಮಟ್ಟದ ನಾಯಕರಾದ ವೀರಪ್ಪ ಮೊಯ್ಲಿ, ಪಿ.ವಿ.ನರಸಿಂಹರಾವ್ ಸಹ ಇಲ್ಲಿಗೆ ಭೇಟಿ ನೀಡಿ ಆಶ್ರಮದ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now