ಬೆಂಗಳೂರು.ಆಗಸ್ಟ್.1: ರಾಜ್ಯದ ಎಲ್ಲಾ ಎಲ್ಪಿಜಿ (LPG) ಗ್ಯಾಸ್ ಗ್ರಾಹಕರು ತಮ್ಮ ಬಾಕಿ ಇರುವ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಆಗಸ್ಟ್ 15, 2026 ರ ಒಳಗಾಗಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಗ್ರಾಹಕರ ಪರಿಶೀಲನೆಯನ್ನು ಮತ್ತಷ್ಟು ಬಲಪಡಿಸುವುದು, ನಿಖರವಾದ ಫಲಾನುಭವಿಗಳ ದಾಖಲೆಗಳನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಮುಂದೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ತಡೆಯುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ.
ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರ ಎಲ್ಪಿಜಿ ಸಂಪರ್ಕವನ್ನು (Gas Connection) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ (Block) ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಲಾಗಿದೆ.
ಗ್ರಾಹಕರು ಏನು ಮಾಡಬೇಕು?
ಇದುವರೆಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಇರುವ ಗ್ರಾಹಕರು ತಕ್ಷಣವೇ ತಮಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ.
ಆಗಸ್ಟ್ 15ರ ಅಂತಿಮ ಗಡುವಿನ ಒಳಗಾಗಿ ಬಯೋಮೆಟ್ರಿಕ್ ಅಥವಾ ಅಗತ್ಯ ದಾಖಲೆಗಳನ್ನು ನೀಡಿ ಇ-ಕೆವೈಸಿ ಪೂರ್ಣಗೊಳಿಸಿ.
ಈ ಕುರಿತು ಹೆಚ್ಚಿನ ಮಾಹಿತಿ ಅಥವಾ ನೆರವಿನ ಅಗತ್ಯವಿದ್ದರೆ ನಿಮ್ಮ ಗ್ಯಾಸ್ ಏಜೆನ್ಸಿಯವರನ್ನು ತಕ್ಷಣವೇ ಸಂಪರ್ಕಿಸಬಹುದು.










