Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH: ಜಿಪ್ ಲೈನ್ ಆಟವಾಡುತ್ತಿದ್ದಾಗ 40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ: ವಿಡಿಯೋ ವೈರಲ್!

---Advertisement---

ಉತ್ತರ ಕನ್ನಡ.ಜುಲೈ.20: ಪ್ರವಾಸಿ ತಾಣವಾದ ದಾಂಡೇಲಿಗೆ ಜಿಪ್ಲೈನ್ ಸಾಹಸ ಕ್ರೀಡೆಯ ಆನಂದ ಸವಿಯಲು ಬಂದಿದ್ದ ಪ್ರವಾಸಿಯೊಬ್ಬರು, ಸುರಕ್ಷತಾ ವ್ಯವಸ್ಥೆಯ ಲೋಪದಿಂದಾಗಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಜುಲೈ 3 ರಂದು ನಡೆದಿದೆ. ಈ ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಜಯಪುರ ನಿವಾಸಿಯಾದ ಕುಬೇರ್ ಸುರಪುರ್ ಎಂಬುವರು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ‘ಸ್ಟರ್ಲಿಂಗ್ ರಿವರ್ ರೆಸಾರ್ಟ್’ಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಪ್ರಮುಖ ಆಕರ್ಷಣೆಯಾದ ಜಿಪ್ಲೈನ್ ರೈಡ್ ಮಾಡಲು ಕುಬೇರ್ ಮುಂದಾಗಿದ್ದಾರೆ.

ರೈಡ್ ಆರಂಭವಾಗಿ ಅವರು ಜಿಪ್ಲೈನ್ನಲ್ಲಿ ಸಾಗುತ್ತಿದ್ದಾಗ, ಅರ್ಧ ಹಾದಿಯಲ್ಲೇ ಸುರಕ್ಷತಾ ಲಾಕ್ (Safety Lock) ಮುರಿದುಹೋಗಿದೆ ಎನ್ನಲಾಗಿದೆ. ಪರಿಣಾಮವಾಗಿ ಕುಬೇರ್ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಎತ್ತರದಿಂದ ನೇರವಾಗಿ ಕೆಳಗೆ ಬಿದ್ದಿದ್ದಾರೆ. ಕುಬೇರ್ ಅವರ ಸಹೋದರ ಜಿಪ್ಲೈನ್ ರೈಡ್ ಅನ್ನು ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲೇ ಈ ದಾರುಣ ಘಟನೆ ಸಂಭವಿಸಿದ್ದು, ಅವರು ಕೆಳಗೆ ಬೀಳುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಬಿದ್ದ ರಭಸಕ್ಕೆ ಕುಬೇರ್ ಅವರ ಎರಡು ಕೈಗಳು ಮತ್ತು ಕಾಲುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ. ಅಪಘಾತದ ಬೆನ್ನಲ್ಲೇ ಅವರನ್ನು ತಕ್ಷಣ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಹಾಗೂ ಅಲ್ಲಿಂದ ತಜ್ಞರ ಚಿಕಿತ್ಸೆಯ ಅಗತ್ಯವಿದ್ದಿದ್ದರಿಂದ ಮಿರಾಜ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದೆ. ಚೇತರಿಸಿಕೊಳ್ಳಲು ಅವರ ಕೈ ಮತ್ತು ಕಾಲುಗಳಿಗೆ ಇನ್ನು ಹಲವು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Join WhatsApp

Join Now

Join Telegram

Join Now