Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

Viral Video: ಇದ್ದಕ್ಕಿದ್ದಂತೆ ಉಕ್ಕಿ ಹರಿದ ಬಾವಿ ನೀರು ಬೆಚ್ಚಿ ಬಿದ್ದ ಜನ : ವಿಡಿಯೋ ವೈರಲ್

---Advertisement---

ಮೊರ್ಬಿ.ಆಗಸ್ಟ್7: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ತೆರೆದ ಬಾವಿಯೊಂದರ ನೀರು ಇದ್ದಕ್ಕಿದ್ದಂತೆ ಸಮುದ್ರದ ಅಲೆಗಳಂತೆ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರಲ್ಲಿ ಭಾರಿ ಆಶ್ಚರ್ಯ ಹಾಗೂ ಆತಂಕ ಮೂಡಿಸಿದೆ. ಈ ವಿಚಿತ್ರ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಸಾಲಾಗಿ ಆಗಮಿಸುತ್ತಿದ್ದಾರೆ.

ಬಾವಿಯಲ್ಲಿನ ಈ ದಿಢೀರ್ ಬದಲಾವಣೆಯಿಂದಾಗಿ ಭೂಕಂಪ ಸಂಭವಿಸಬಹುದೇನೋ ಎಂಬ ಭಯ ಗ್ರಾಮಸ್ಥರನ್ನು ಕಾಡಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಗಾಂಧಿನಗರದ ‘ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮೋಲಾಜಿಕಲ್ ರಿಸರ್ಚ್’ (ISR) ಸಂಶೋಧಕರು ಈ ಪ್ರದೇಶದಲ್ಲಿ ಯಾವುದೇ ಭೂಕಂಪನದ ಲಕ್ಷಣಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಭೂಕಂಪದಿಂದ ಆಗುತ್ತಿರುವುದಲ್ಲ, ಬದಲಿಗೆ ನೈಸರ್ಗಿಕವಾಗಿ ಸಂಭವಿಸಿದ ವೈಜ್ಞಾನಿಕ ಪ್ರಕ್ರಿಯೆಯಾಗಿದೆ ಎಂದು ವಿವರಿಸಿದ್ದಾರೆ.

ಇತ್ತೀಚೆಗೆ ಈ ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಅಂತರ್ಜಲ ಅತ್ಯಂತ ವೇಗವಾಗಿ ಮರುಪೂರಣಗೊಂಡಿದೆ (Recharge). ಭೂಗರ್ಭದಲ್ಲಿ ನೀರು ತಟ್ಟನೆ ತುಂಬಿಕೊಂಡಾಗ, ಅಲ್ಲಿನ ಬಂಡೆಗಳ ಸಂಧಿಯಲ್ಲಿ ಸಿಲುಕಿದ್ದ ಗಾಳಿಯ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ. ಈ ಗಾಳಿಯು ಹೊರಬರಲು ಯತ್ನಿಸಿದಾಗ ಬಾವಿಯ ತಳಭಾಗದಿಂದ ನೀರನ್ನು ಮೇಲಕ್ಕೆ ತಳ್ಳುತ್ತದೆ. ಈ ಗಾಳಿ ಮತ್ತು ನೀರಿನ ತೀವ್ರ ಒತ್ತಡದಿಂದಾಗಿ ಬಾವಿಯ ಮೇಲ್ಭಾಗದಲ್ಲಿ ಅಲೆಗಳು ಸೃಷ್ಟಿಯಾಗುತ್ತಿವೆ.

ಸಾರ್ವಜನಿಕರು ಯಾವುದೇ ರೀತಿಯ ಅಫವಾಹ ಹಾಗೂ ಮೂಢನಂಬಿಕೆಗಳಿಗೆ ಕಿವಿಗೊಡಬಾರದು ಎಂದು ಮೊರ್ಬಿ ಜಿಲ್ಲಾಡಳಿತ ಮನವಿ ಮಾಡಿದೆ. ತಜ್ಞರು ನೀಡಿದ ಸ್ಪಷ್ಟನೆಯಿಂದಾಗಿ ಸ್ಥಳೀಯರ ಆತಂಕ ದೂರವಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

Join WhatsApp

Join Now

Join Telegram

Join Now