Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿದ್ಯಾರ್ಥಿಗಳೇ ಎಚ್ಚರ : ದೇಶದ 32 ವಿಶ್ವವಿದ್ಯಾಲಯಗಳು ನಕಲಿ, ಇಲ್ಲಿದೆ ಸಂಪೂರ್ಣ ಪಟ್ಟಿ

---Advertisement---

ದೆಹಲಿ.ಆಗಸ್ಟ್.7: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ದೇಶಾದ್ಯಂತ ಒಟ್ಟು 32 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಇದರೊಂದಿಗೆ, ಎಡ್‌ಟೆಕ್ (EdTech) ಸಂಸ್ಥೆಗಳ ಫ್ರಾಂಚೈಸಿ ಮಾದರಿಯ ಅಕ್ರಮ ಆನ್‌ಲೈನ್ ಹಾಗೂ ದೂರಶಿಕ್ಷಣ ಕೋರ್ಸ್‌ಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್, “ಯುಜಿಸಿ ನಿಯಮಿತವಾಗಿ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ನವೀಕರಿಸುತ್ತದೆ. ಕಾನೂನುಬಾಹಿರವಾಗಿ ಪದವಿ ನೀಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದರು.

ಕಾನೂನು ಕ್ರಮಕ್ಕೆ ಕೇಂದ್ರ ಸೂಚನೆ

ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳಿಗೆ ಯುಜಿಸಿ ಈಗಾಗಲೇ ಶೋಕಾಸ್ ನೋಟಿಸ್ ಮತ್ತು ಸಾರ್ವಜನಿಕ ಎಚ್ಚರಿಕೆ ಪತ್ರಗಳನ್ನು ರವಾನಿಸಿದೆ. ನಕಲಿ ಸಂಸ್ಥೆಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ, ಅವುಗಳನ್ನು ತಕ್ಷಣವೇ ಮುಚ್ಚಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ರಾಜ್ಯವಾರು ನಕಲಿ ವಿಶ್ವವಿದ್ಯಾಲಯಗಳ ವಿವರ:

ದೆಹಲಿ (11): ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸಸ್ (AIIPHS), ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಡಿಆರ್-ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಓಪನ್ ಯೂನಿವರ್ಸಿಟಿ, ಆಧ್ಯಾತ್ಮಿಕ ವಿಶ್ವವಿದ್ಯಾಲಯ, ವರ್ಲ್ಡ್ ಪೀಸ್ ಆಫ್ ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಇಂಜಿನಿಯರಿಂಗ್ (ಮತ್ತೊಂದು ಪ್ರತ್ಯೇಕ ಸಂಸ್ಥೆ ಸೇರಿ ಒಟ್ಟು 11).

ಉತ್ತರ ಪ್ರದೇಶ (4): ಗಾಂಧಿ ಹಿಂದಿ ವಿದ್ಯಾಪೀಠ (ಪ್ರಯಾಗ್‌ರಾಜ್), ನೇತಾಜಿ ಸುಭಾಷ್ ಚಂದ್ರ ಬೋಸ್ ಯೂನಿವರ್ಸಿಟಿ (ಅಲಿಗಢ), ಭಾರತೀಯ ಶಿಕ್ಷಾ ಪರಿಷತ್ (ಲಕ್ನೋ), ಮಹಾಮಾಯಾ ಟೆಕ್ನಿಕಲ್ ಯೂನಿವರ್ಸಿಟಿ (ನೋಯ್ಡಾ).

ಆಂಧ್ರಪ್ರದೇಶ (2): ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ.

ಪಶ್ಚಿಮ ಬಂಗಾಳ (2): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್.

ಇತರ ರಾಜ್ಯಗಳು: ಹರ್ಯಾಣ (ಮ್ಯಾಜಿಕ್ & ಆರ್ಟ್ ಯೂನಿವರ್ಸಿಟಿ), ರಾಜಸ್ಥಾನ (ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್), ಜಾರ್ಖಂಡ್ (ದಕ್ಷ ಯೂನಿವರ್ಸಿಟಿ), ಅರುಣಾಚಲ ಪ್ರದೇಶ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್), ಮಹಾರಾಷ್ಟ್ರ (ರಾಜಾ ಅರೇಬಿಕ್ ಯೂನಿವರ್ಸಿಟಿ) ಹಾಗೂ ಪುದುಚೇರಿ (ಶ್ರೀ ಬೋಧಿ ಅಕಾಡೆಮಿ) ತಲಾ 1 ನಕಲಿ ಸಂಸ್ಥೆಗಳನ್ನು ಹೊಂದಿವೆ.

ಎಡ್‌ಟೆಕ್ ಫ್ರಾಂಚೈಸಿಗಳ ಪದವಿಗೆ ಮಾನ್ಯತೆಯಿಲ್ಲ:

ಕೆಲವು ಎಡ್‌ಟೆಕ್ ಕಂಪನಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೊಂದಿಗೆ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡು ಆನ್‌ಲೈನ್ ಮತ್ತು ದೂರಶಿಕ್ಷಣ ಪದವಿಗಳನ್ನು ನೀಡುತ್ತಿರುವುದು ಯುಜಿಸಿ ಗಮನಕ್ಕೆ ಬಂದಿದೆ. ಯುಜಿಸಿ ಕಾಯ್ದೆಯಡಿ ಇಂತಹ ಯಾವುದೇ ಫ್ರಾಂಚೈಸಿ ವ್ಯವಸ್ಥೆಗೆ ಅವಕಾಶವಿಲ್ಲ. ಇಂತಹ ಅಕ್ರಮ ಒಪ್ಪಂದಗಳ ಮೂಲಕ ಪಡೆಯುವ ಪದವಿಗಳು ಸಂಪೂರ್ಣವಾಗಿ ಅಸಿಂಧುವಾಗಲಿದ್ದು, ಸಂಸ್ಥೆಗಳು ಹಾಗೂ ಎಡ್‌ಟೆಕ್ ಕಂಪನಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಿದ್ಯಾಭ್ಯಾಸಕ್ಕೆ ಸೇರುವ ಮುನ್ನ ಪರಿಶೀಲಿಸಿ:

ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಕೋರ್ಸ್‌ಗೆ ಸೇರ್ಪಡೆಯಾಗುವ ಮೊದಲು ಯುಜಿಸಿ (UGC) ಮತ್ತು ಡಿಸ್ಟೆನ್ಸ್ ಎಜುಕೇಶನ್ ಬ್ಯೂರೋ (DEB) ಅಧಿಕೃತ ಪೋರ್ಟಲ್‌ಗಳಲ್ಲಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪರಿಶೀಲಿಸಿಕೊಳ್ಳುವಂತೆ ಯುಜಿಸಿ ಸಲಹೆ ನೀಡಿದೆ.

Join WhatsApp

Join Now

Join Telegram

Join Now