ಬಾಗಲಕೋಟೆ : ಆ ಕಡೆ ದಾವಣಗೆರೆ ಈ ಕಡೆ ಬಾಗಲಕೋಟೆ. ಎರಡು ಭಾಗದಲ್ಲೂ ದೊಡ್ಡ ಮಟ್ಟದ ಪ್ರಚಾರವನ್ನೆ ಮಾಡ್ತಿದೆ ಕಾಂಗ್ರೆಸ್. ಇಂದು ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆಗೆ ಪ್ರಚಾರಕ್ಕೆಂದು ಬಂದಿದ್ದು, ಐದು ದಿನಗಳ ಕಾಲ ಪ್ರಚಾರದ ಕಾರ್ಯ ನಡೆಸಲಿದ್ದಾರೆ. ಈ ವೇಳೆ ಬಿಜೆಪಿ ನಾಯಕರ ಬಗ್ಗೆ ಮಾತನ್ನಾಡಿದ್ದಾರೆ.
ಅದರಲ್ಲೂ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸೋದಕ್ಕೆ ಕಾಂಗ್ರೆಸ್ ನವರೇ ಕೆಲಸ ಮಾಡ್ತಾ ಇದ್ದಾರೆ ಎಂದು ವಿಜಯೇಂದ್ರ ಅವರು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರೇ ನಮಗೆ ಮಾಡ್ತಾ ಇರೋದು. ಅಲ್ಟಿಮೇಟ್ಲಿ ಜನ ತೀರ್ಮಾನ ಮಾಡ್ತಾರೆ. ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು ಅಂತ. ಮೇಟಿ ಅವರ ಮಗನನ್ನೆ ಗೆಲ್ಲಿಸೋದು ಅಂತ.
ಇದೇ ವೇಳೆ ಪ್ರಹ್ಲಾದ್ ಜೋಶಿ ಅವರು ಹೇಳಿದ್ದ, ಎರಡು ಕಡೆ ವಂಶವಾಹಿನಿಗೆ ಕಾಂಗ್ರೆಸ್ ಮಣೆ ಹಾಕಿದೆ. ಎರಡು ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನ ಮನೆಗೆ ಕಳುಹಿಸ್ತಾರೆ ಅಂತ. ಆಯ್ತಪ್ಪ ವಂಶವಾಹಿನಿಗೆ ಮಣೆ ಹಾಕ್ತೀವಿ. ಅದು ಕಾಂಗ್ರೆಸ್ ಪದ್ಧತಿ. ಯಾರು ಸತ್ತಿರ್ತಾರೆ ಅವರ ಮಬೆಯವರಿಗೇನೆ ಟಿಕೆಟ್ ನೀಡುವುದು. ದಾವಣಗೆರೆಯಲ್ಲಿ ಶಿವಶಂಕರಪ್ಪ ಅವರು ಸತ್ತೋದ್ರು. ಹೀಗಾಗಿ ಅವರ ಮೊಮ್ಮಗನಿಗೆ ಟಿಕೆಟ್ ಕೊಟ್ಟೆವು. ಇಲ್ಲಿ ಹೆಚ್ ವೈ ಮೇಟಿ ಅವರು ಕಾಲವಾದ್ರು ಇಲ್ಲಿ ಅವರ ಮಗನಿಗೆ ಟಿಕೆಟ್ ಕೊಟ್ಟೆವು. ಇದು ಮೊದಲಿನಿಂದಲೂ ನಡೆದು ಬಂದ ಪದ್ಧತಿ. ಧಮ್ಕಿ ಹಾಕುವ ಸಂಸ್ಕೃತಿ ಕಾಂಗ್ರೆಸ್ ದಲ್ಲ. ಬಿಜೆಪಿಯದ್ದು. ತಿಮ್ಮಾಪುರ ಅವರು ಎಂಎಲ್ಎ ಮನೆಗೆ ಬಿಡ್ತಾರಾ. ಜನಪ್ರತಿನಿಧಿಯಾಗಿದ್ದವರು ಎಂದು ಬಿಜೆಪಿ ನಾಯಕರ ಮಾತುಗಳಿಗೆ ತಿರುಗೇಟು ಕೊಟ್ಟಿದ್ದಾರೆ.















