ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಮೈಸೂರಿಗೆ ಬಂದಿಳಿದಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ತಂಗಿದ್ದ ವಿಹಯೇಂದ್ರ ಅವರನ್ನು ನೋಡಲು ಮಾಜಿ ಸಂಸದ ಪ್ರತಾಪ್ ಸಿಂಹ ಓಡೋಡಿ ಬಂದಿದ್ದಾರೆ. ಇದು ಎಲ್ಲರಿಗೂ ಶಾಕ್ ಎನಿಸಿದೆ. ಪ್ರತಾಪ್ ಸಿಂಹ ಯಾರ ಬಣದವರು ಎಂಬ ಪ್ರಶ್ನೆ ಕೇಳುವಂತೆ ಆಗಿದೆ.
ಯಾಕಂದ್ರೆ ಪ್ರತಾಪ್ ಸಿಂಹ ಅವರು ಇತ್ತೀಚೆಗಷ್ಟೇ ಯತ್ನಾಳ್ ಬಣದಲ್ಲಿ ಹೆಚ್ಚಾಗಿ ಗುರುತಿಸಿಕೊಂಡರು. ಯತ್ನಾಳ್ ಬಣ ಹೇಗಾದ್ರೂ ಮಾಡಿ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು, ನಮ್ಮ ಬಣದ ಯಾರಾದರೊಬ್ಬರು ರಾಜ್ಯಾಧ್ಯಕ್ಷರಾಗಬೇಕು ಎಂದೇ ಯೋಜನೆ ರೂಪಿಸಿವೆ. ಹೀಗಾಗಿ ಯತ್ನಾಳ್ ಬಣ ಆಗಾಗ ಸಭೆಗಳನ್ನು ನಡೆಸಿದೆ. ಇದೇ ಪ್ರತಾಪ್ ಸಿಂಹ ಅವರು, ಯತ್ನಾಳ್ ಬಣ ಸೇರಿದ ಮೇಲೆ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಅದು ನೇರವಾಗಿಯೇ ಆಕ್ರೋಶ ಹೊರ ಹಾಕಿದ್ದರು.

ಇದೀಗ ಮೈಸೂರಿಗೆ ಪ್ರತಿಭಟನೆಗಾಗಿ ಬಂದ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ವಿಜಯೇಂದ್ರ ಅವರು ರೇಗಿಸಿದ್ದಾರೆ. ವೈಟ್ ಶರ್ಟ್ ಬಿಟ್ಟು ಪ್ರತಾಪ್ ಸಿಂಹ ಅವರು ಟೀ ಶರ್ಟ್ ಹಾಕಿಬಿಟ್ಟಿದ್ದಾರೆ. ನೋಡಿ ಇಷ್ಟು ಸಮಯ ಮಾಧ್ಯಮದವರು ಬಂದಿರಲಿಲ್ಲ. ನೀವೂ ಬಂದೊಡನೆ ಮಾಧ್ಯಮದವರೆಲ್ಲಾ ಓಡಿ ಬಂದಿದ್ದಾರೆ ಎಂದಿದ್ದಾರೆ. ಇನ್ನು ಪ್ರತಾಪ್ ಸಿಂಹ ನಡೆಯನ್ನು ಯತ್ನಾಳ್ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ. ವಿಜಯೇಂದ್ರ ಹಾಗೂ ಪ್ರತಾಪ್ ಸಿಂಹ ಭೇಟಿ ಬಗ್ಗೆ ಯಾವ ರೀತಿ ರಿಯಾಕ್ಟ್ ಮಾಡ್ತಾರೆ ನೋಡಬೇಕಿದೆ.















