ಶಾಸಕ ಚಂದ್ರಪ್ಪನವರಿಗೆ ಐದು ಬಾರಿ ಗೆಲುವು ಯೋಗದಿಂದ ಬಂದಿಲ್ಲ ಅವರ ಯೋಗ್ಯತೆಯಿಂದ ಬಂದಿದೆ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 : ಬಡವರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ವ್ಯಕ್ತಿ ಶ್ರೀಮಂತನಾಗುತ್ತಾನೆ. ಈ ದಾರಿಯಲ್ಲಿ ಚಂದ್ರಪ್ಪರವರು ಸಾಗಿದ್ದರಿಂದ ಐದು ಸಲ ಶಾಸಕರಾಗಲು ಸಾಧ್ಯವಾಗಿದೆ. ಅವರು ಗೆಲುವು ಯೋಗದಿಂದ ಬಂದಿಲ್ಲ ಅವರ ಯೋಗ್ಯತೆಯಿಂದ ಬಂದಿದೆ ಎಂದು ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.

ಜೀವಮಾನದ ಸಾಧನೆ ಮತ್ತು ಕುವೆಂಪು ವಿಶ್ವ ವಿದ್ಯಾಲಯದಿಂದ ಗ್ರಾಮೀಣಾಭೀವೃದ್ದಿ  ಹಾಗೂ ಶೈಕ್ಷಣಿಕ ಸೇವೆಗೆ ಗೌರವ ಡಾಕ್ಟರೇಟ್ ಪಡೆದಿರುವ ಹೊಳಲ್ಕೆರೆ ಶಾಸಕರಾದ ಎಂ. ಚಂದ್ರಪ್ಪರವರಿಗೆ ನಗರದ ಹೂರವಲಯದ ಬೋವಿ ಗುರುಪೀಠದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಯಾವ ಮನುಷ್ಯನಿಗೆ ಗುರಿ, ಛಲ ಇಲ್ಲದಿದ್ದರೆ ಆತ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಆದರೆ ಚಂದ್ರಪ್ಪರವರು ತಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದರಲ್ಲದೆ ಅದನ್ನು ನನಸಾಗಿ ಮಾಡಿ ತೋರಿಸಿದ್ದಾರೆ. ಇದರಿಂದ ಕ್ಷೇತ್ರ ಬಹಳಷ್ಟು ಅಭೀವೃದ್ದಿಯಾಗಿದ್ದು ಜನನಾಯಕರಾಗಿದ್ದಾರೆ. ಇದಕ್ಕೆ ಕ್ಷೇತ್ರದಲ್ಲಿನ ಮತದಾರರು ಸಹಕಾರ ನೀಡುತ್ತಿದ್ದಾರೆ. ಚಂದ್ರಪ್ಪರವರು ರಾಜಕಾರಣಿಗಳಿಗೆ ಆದರ್ಶ ರಾಜಕಾರಣಿಯಾಗಿದ್ದಾರೆ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಅಭೀವೃದ್ದಿಯನ್ನು ಮಾಡಬಹುದೆಂದು ತೋರಿಸಿದ್ದಾರೆ, ಇದನ್ನು ಬೇರೆ ರಾಜಕಾರಣಿಗಳು ಕಲಿಯಬೇಕಿದೆ ಎಂದು ಶ್ರೀಗಳು ತಿಳಿಸಿದರು.

ಚಂದ್ರಪ್ಪರವರು ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಪದ್ಮಶ್ರೀ, ಅಥವಾ ಪದ್ಮವಿಭೂಷಣ ಪ್ರಶಸ್ತಿ ಲಭ್ಯವಾಗಬೇಕಿತ್ತು. ಬಡತನದಿಂದ ಬಂದಿರುವ ಚಂದ್ರಪ್ಪರವರು ಬಡವರ ಕಷ್ಟಗಳನ್ನು ಅರಿತಿದ್ದರಿಂದ ಬಡವರ ಪರವಾಗಿ ಕೆಲಸವನ್ನು ಮಾಡಲು ಸಾಧ್ಯವಾಗಿದೆ. ಜನಾಂಗದ ಸಿದ್ದರಾಮರಂತೆ ಕ್ಷೇತ್ರದಲ್ಲಿ ಕೆರೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಜನ, ಜಾನುವಾರ ಮತ್ತು ಗಿಡಗಳಿಗೆ ನೀರನ್ನು ನೀಡಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡುವುದರ ಮೂಲಕ ಶಿಕ್ಷಣ ದಾನಿಗಳಾಗಿದ್ದಾರೆ. ತಮ್ಮ ಕಾರ್ಯದ ಜೊತೆಗೆ ಸಮಾಜದ ವಿವಿಧ ಕಾರ್ಯವನ್ನು ಮಾಡುವುದರ ಮೂಲಕ ಸಮಾಜದ ಪ್ರಗತಿಗೆ ಮುಂದಾಗಿದ್ದಾರೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.

ಕಾರ್ಯಕ್ರಮ ಸಾನಿಧ್ಯವಹಿಸಿದ್ದ ಮತ್ತೋರ್ವ ಶ್ರೀಗಳಾದ ಕುಂಚಿಟಿಗ ಮಹಾ ಸಂಸ್ಥಾನದ ಡಾ. ಶಾಂತವೀರ ಶ್ರೀಗಳು ಮಾತನಾಡಿ, ಚಂದ್ರಪ್ಪರವರು ಹೊಳಲ್ಕೆರೆ ಕ್ಷೇತ್ರ ಶಾಸಕರಾದ ಮೇಲೆ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಈ ರೀತಿಯ ಕೆಲಸದ ಹಾದಿಯಲ್ಲಿ ಅವರ ಶ್ರೀಮತಿಯವರ ಪಾಲುಗಾರಿಕೆ ಇದೆ. ಮಾನವನಿಗೆ ಹೆಂಡತಿ, ಮಕ್ಕಳ, ಗುರುಗಳ ಅಂಕುಶ ಇರಬೇಕಿದೆ ಈ ರೀತಿ ಇದ್ದವರು ಉತ್ತಮವಾದ ಪ್ರಗತಿಯನ್ನು ಸಾಧಿಸುತ್ತಾರೆ ಇದಕ್ಕೆ ಚಂದ್ರಪ್ಪರವರು ಉದಾಹರಣೆಯಾಗಿದ್ದಾರೆ. ಚುನಾವಣೆಯ ಸಮಯದಲ್ಲಿ ಭೋವಿ ಸಮಾಜಕ್ಕೆ ಕುಂಚಿಟಿತ ಸಮುದಾಯ ಬೆಂಬಲವನ್ನು ನೀಡಿದೆ. ಇಂದಿನ ಇಂಜಿನಿಯರ್‍ಗಳಿಗಿಂತ ಭೋವಿ ಜನಾಂಗದವರು ಸಮಾಜದವರು ಉತ್ತಮ ಇಂಜಿನಿಯರ್‍ಗಳಾಗಿದ್ದಾರೆ. ಎಂದರು.

ಇಮ್ಮಡಿ ಶ್ರೀಗಳು ಮಾತೃ ಹೃದಯವಂತರಾಗಿದ್ದಾರೆ. ಇವರು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹಾ ತಮ್ಮ ಜನಾಂಗಕ್ಕೆ ಆಗಬೇಕಾದ ಕೆಲಸಗಳನ್ನು ಬುದ್ದಿವಂತಿಕೆಯಿಂದ ಮಾಡಿಸುತ್ತಾರೆ. ಇವರ ಚಾಕುಚಕ್ಯತೆ ಬೇರೆ ಶ್ರೀಗಳಿಗೆ ಬರುವುದಿಲ್ಲ ಎಂದ ಶ್ರೀಗಳು ಚಂದ್ರಪ್ಪರವರಿಗೆ ಲಭ್ಯವಾಗಿ ರುವ ಡಾಕ್ಟರೇಟ್ ಪ್ರಶಸ್ತಿ ಅವರು ಮಾಡಿದ ಕಾಯಕದಿಂದ ಬಂದಿದೆ ಎಂದು ಶಾಂತವೀರ ಶ್ರೀಗಳು ತಿಳಿಸಿದರು.

ಬೋವಿ ಸಮಾಜದಿಂದ ಅಭಿನಂದನೆಯನ್ನು ಸ್ವೀಕಾರ ಮಾಡಿ ಮಾತನಾಡಿದ ಡಾ.ಎಂ.ಚಂದ್ರಪ್ಪ ಮಾತನಾಡಿ, ನನಗೆ ಡಾಕ್ಟರೇಟ್ ಸಿಗುತ್ತದೆ ಎಂದು ಕೆಲಸವನ್ನು ಮಾಡಿಲ್ಲ, ನನ್ನ ಪಾಲಿನ ಕಾಯಕವನ್ನು ಮಾಡಿದ್ದೇನೆ, ನನಗೆ ಸಿಕ್ಕ ಈ ಡಾಕ್ಟರೇಟ್‍ನ್ನು ನನ್ನ ಮತದಾರರಿಗೆ ಸಮರ್ಪಿಸುತ್ತೇನೆ, 1994ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ಕಡಿಮೆ ಆಯವ್ಯಯದಲ್ಲಿ ಬಹಳಷ್ಟು ಅನುದಾನ ಸರ್ಕಾರಿ ನೌಕರರ ವೇತನಕ್ಕೆ ಹೋಗುತ್ತದೆ ಉಳಿದ ಕಡಿಮೆ ಅನುದಾನದಲ್ಲಿ ವಿವಿಧ ಅಭೀವೃದ್ದಿ ಕಾರ್ಯವನ್ನು ಮಾಡಬೇಕಿತ್ತು ಆಗ ಗ್ರಾಮಗಳಿಗೆ ರಸ್ತೆಗಳು ಇಲ್ಲದ ಸಮಯದಲ್ಲಿ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಕುವೆಂಪು ವಿವಿ ನೀಡಿದ ಪ್ರಶಸ್ತಿಗಿಂತ ಜನತೆ ನನಗೆ ನೀಡಿದ ರಸ್ತೆ ರಾಜ ಬಿರುದು ಹೆಚ್ಚಾಗಿದೆ ಎಂದರು.

ನನ್ನ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸವನ್ನು ಮಾಡಿದ್ದರ ಫಲವಾಗಿ ಕ್ಷೇತ್ರದ ಮತದಾರರು ಐದು ಬಾರಿ ನನನ್ನು ಗೆಲ್ಲಿಸಿದ್ದಾರೆ. ನನ್ನ ಈ ಗೆಲುವಿಗೆ ಕ್ಷೇತ್ರದ ಎಲ್ಲಾ ಮತದಾರರ ಆರ್ಶೀವಾದ ಇದೆ. ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಮತ್ತು ಬಿಜೆಪಿಯ ತಪ್ಪಿನಿಂದಾಗಿ ಈ ಭಾರಿ ಸೋಲನ್ನು ಕಾಣಬೇಕಾಯಿತು. ಮೂರು ಜಿಲ್ಲೆಗಳಿಂದ ನಾನು ಒಬ್ಬನೆ ಬಿಜೆಪಿ ಶಾಸಕನಾಗಿದ್ದಾನೆ. ಸಾರ್ವಜನಿಕ ಬದುಕು ನನ್ನ ಸ್ವಂತ ಬದುಕಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಸಮಾಜಕ್ಕೆ ಯಾವುದೇ ರೀತಿಯ ಧಕ್ಕೆ ತರುವಂತ ಕಾರ್ಯವನ್ನು ಮಾಡಿಲ್ಲ, ನನ್ನ ಈ ಬೆಳವಣಿಗೆಯಲ್ಲಿ ಸಮಾಜದ ಶ್ರೀಗಳ ಪಾತ್ರ ಹೆಚ್ಚಾಗಿದೆ. ಸಾರ್ವಜನಿಕ ಜೀವನದಲ್ಲಿ ವಿವಿ ನೀಡುವ ಪ್ರಶಸ್ತಿಗಿಂತ ಜನತೆ ನೀಡುವ ಗೌರವ ನನಗೆ ಹೆಚ್ಚಾಗಿದೆ ಎಂದು ಚಂದ್ರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ, ಸಮಾಜದ ಮುಖಂಡರಾದ ನೇರ್ಲಗುಂಟೆ ರಾಮಪ್ಪ, ಶ್ರೀಮತಿ ಚಂದ್ರಕಲಾ, ಚಂದ್ರಪ್ಪ, ರಘುಚಂದನ್, ಕೃಷ್ಣಮೂರ್ತಿ, ಬಂಡೆ ರುದ್ರಪ್ಪ ವೆಂಕಟೇಶ್ ಮಂಜುನಾಥ್ ತಿಪ್ಪೇಸ್ವಾಮಿ, ಸೇರಿದಂತೆ ಇತರರು ಭಾಗವಹಿಸಿದ್ದರು.
ಸಿದ್ದೇಶ್ ಪ್ರಾರ್ಥಿಸಿದರು, ಲಕ್ಷ್ಮಣ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಿ.ಸಿ.ಮೋಹನ್ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಳೆ ಬೆಂಗಳೂರು ಬಂದ್ ಏನಿರುತ್ತೆ..? ಏನಿರಲ್ಲ..?

  ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ, ನಾಳೆ ಬೆಂಗಳೂರು ಬಂದ್ ಮಾಡಲು ರೈತ ಸಂಘಟನೆ, ಬಿಜೆಪಿ ನಾಯಕರು, ಕನ್ನಡಪರ ಸಂಘಟನೆ, ಜೆಡಿಎಸ್ ನಾಯಕರು ಸೇರಿದಂತೆ ಹಲವು ಸಂಘಟನೆಗಳು ನಿರ್ಧರಿಸಿವೆ. ಈಗಾಗಲೇ ಮಂಡ್ಯ

ವಯನಾಡ್ ಬದಲಿಗೆ ಹೈದರಾಬಾದ್ ನಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸವಾಲು

  ಸುದ್ದಿಒನ್, ಹೈದರಾಬಾದ್ : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್ ಬದಲಿಗೆ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. ದೊಡ್ಡ ದೊಡ್ಡ

ಕುಂಚಿಟಿಗ ಜಾತಿಯನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು : ರಾಜ್ಯ ಸರ್ಕಾರ ಸೇರಿದಂತೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಶ್ರೀ ಶಾಂತವೀರ ಮಹಾಸ್ವಾಮೀಜಿ

  ಸುದ್ದಿಒನ್, ಹೊಸದುರ್ಗ : ಕುಂಚಿಟಿಗ ಸಮಾಜದ  ಸಂಘಟನೆ ಸಂಸ್ಕಾರ ಸಾಮಾಜಿಕ ನ್ಯಾಯವನ್ನು ಮೀಸಲಾತಿ ಸೌಲಭ್ಯ ಕಲ್ಪಿಸುವ ಸಕಾರಾತ್ಮಕ ಸಂಕಲ್ಪದೊಂದಿಗೆ 1990 ರಿಂದ ಶ್ರೀ ಸಂಗಮೇಶ್ವರ ಜಯಂತ್ಯೋತ್ಸವ ಹಾಗೂ ಕುಂಚಿಟಿಗ ಸಮಾವೇಶ ನಡೆಸುತ್ತ ನಿರಂತರ

error: Content is protected !!