ಸುದ್ದಿಒನ್, ಬೆಂಗಳೂರು, ಏಪ್ರಿಲ್. 23 : ಎಸ್ಎಸ್ಎಲ್ಸಿ ಫಲಿತಾಂಶ ಹೊರ ಬಿದ್ದಿದ್ದು, ಮಂಡಳಿಯ ಅಧಿಕೃತ ವೆಬ್ಸೈಟ್ https://karresults.nic.in ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲ ‘karnatakaone’ ಎಂಬ ಮೊಬೈಲ್ ಆಪ್ ಮೂಲಕವೂ ಫಲಿತಾಂಶವನ್ನು ಪಡೆಯಬಹುದು. ಶಿಕ್ಷಣ ಇಲಾಖೆಗೆ ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೂ ನೇರವಾಗಿ ಫಲಿತಾಂಶ ಬರಲಿದೆ.
ಇನ್ನು ಈ ಬಾರಿ ಯಾವ್ಯಾವ ಜಿಲ್ಲೆ ಫಲಿತಾಂಶದಲ್ಲಿ ಎಷ್ಟನೆ ಸ್ಥಾನವನ್ನು ಪಡೆದಿದೆ ಎಂಬುದನ್ನು ನೋಡೋದಾದ್ರೆ, ಚಿತ್ರದುರ್ಗ 27ನೇ ಸ್ಥಾನ ಪಡೆದುಕೊಂಡಿದ್ರೆ, ಬಾಗಲಕೋಟೆ 14ನೇ ಸ್ಥಾನ, ಬೆಂಗಳೂರು ಉತ್ತರ 15ನೇ ಸ್ಥಾನ, ಗದಗ 16ನೇ ಸ್ಥಾನ, ಚಿಕ್ಕಮಗಳೂರು 17ನೇ ಸ್ಥಾನ, ಬೆಳಗಾವಿ 18ನೇ ಸ್ಥಾನ, ದಾವಣಗೆರೆ 19ನೇ ಸ್ಥಾನ, ಮೈಸೂರು 20ನೇ ಸ್ಥಾನ, ರಾಯಚೂರು 21ನೇ ಸ್ಥಾನ, ವಿಜಯಪುರ 22ನೇ ಸ್ಥಾನ, ಚಿಕ್ಕೋಡಿ 23ನೇ ಸ್ಥಾನ, ಬಳ್ಳಾರಿ 24ನೇ ಸ್ಥಾನ, ಕೊಪ್ಪಳ 25ನೇ ಸ್ಥಾನ, ರಾಮನಗರ 26ನೇ ಸ್ಥಾನ, ಬೀದರ್ 28ನೇ ಸ್ಥಾನ, ತುಮಕೂರು 29ನೇ ಸ್ಥಾನ, ಚಾಮರಾಜನಗರ 30ನೇ ಸ್ಥಾನ, ಯಾದಗಿರಿ 31ನೇ ಸ್ಥಾನವನ್ನ ಪಡೆದುಕೊಂಡಿದೆ.

ಟಾಪ್ ಐದರಲ್ಲಿ ಮೊದಲ ಸ್ಥಾನವನ್ನ ದಕ್ಷಿಣ ಕನ್ನಡ ಪಡೆದುಕೊಂಡಿದ್ದರೆ, ಎರಡನೇ ಸ್ಥಾನ ಉಡುಪಿಗೆ, ಮೂರನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ, ನಾಲ್ಕನೇ ಸ್ಥಾನ ಹಾಸನ ಜಿಲ್ಲೆಗೆ, ಐದನೇ ಸ್ಥಾನ ಮಂಡ್ಯ, ಆರನೇ ಸ್ಥಾನ ಶಿರಸಿ, ಏಳನೇ ಸ್ಥಾನ ಹಾವೇರಿ, ಎಂಟನೇ ಸ್ಥಾನ ಕೊಡಗು, ಒಂಭತ್ತನೇ ಸ್ಥಾನ ಶಿವಮೊಗ್ಗ, ಹತ್ತನೇ ಸ್ಥಾನ ವಿಜಯನಗರ, ಹನ್ನೊಂದನೇ ಸ್ಥಾನ ಬೆಂಗಳೂರು ಗ್ರಾಮಾಂತರ, ಹನ್ನೆರಡನೇ ಸ್ಥಾನ ಧಾರವಾಡ, ಹದಿಮೂರನೇ ಸ್ಥಾನವನ್ನ ಕೋಲಾರ ತೆಗೆದುಕೊಂಡಿದೆ.















