ಬೆಂಗಳೂರು: ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿಯೇ ಒಳ್ಳೆಯ ಫಲಿತಾಂಶ ಬಂದಿದೆ. ಈ ಬಾರಿ ಬಾಲಕರು ಕೂಡ ಒಳ್ಳೆ ಸಾಧನೆ ಮಾಡಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಾಲಕರಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ. ಕಳೆದ ಮೂರು ಪರೀಕ್ಷೆಗಳನ್ನ ಹೋಲಿಕೆ ಮಾಡಿ, ಈ ಬಾರಿಯ ಪರೀಕ್ಷೆಯಲ್ಲಿ ಬಾಯ್ಸ್ ಮಾಡಿದ ಸಾಧನೆಗೆ ಕಂಗ್ರಾಟ್ಸ್ ಹೇಳಿದ್ದಾರೆ. ಶೇಕಡವಾರು ವಿಚಾರದಲ್ಲಿ ಬಾಲಕಿಯರು 96% ಸಾಧನೆ ಮಾಡಿದ್ದು, ಬಾಲಕರಿಗೆ ಕಳೆದ ಬಾರಿ ಮೂರು ಪರೀಕ್ಷೆ ಸೇರಿ 74% ಇದ್ರು. ಆದರೆ ಈ ಸಲ 91.94% ಸಕ್ಸಸ್ ಕೊಟ್ಟಿದ್ದಾರೆ.
ಗ್ರಾಮೀಣ ಭಾಗ ಮತ್ತು ನಗರದ ಫಲಿತಾಂಶ ಹೋಲಿಕೆ ಮಾಡಿದರೆ ಈ ಬಾರಿ ಗ್ರಾಮಾಂತರ ಭಾಗದ ಮಕ್ಕಳು 94% ತಲುಪಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಫಲಿತಾಂಶ ಕಡಿಮೆ, ಫೇಲ್ ಆಗ್ತಾರೆ ಎಂಬ ಮಾತನ್ನ ತಳ್ಳಿ ಹಾಕಿದ ಮಕ್ಕಳು, 93.97% ಫಲಿತಾಂಶ ಬಂದಿದೆ. ಈ ಮೂಲಕ ಸರ್ಕಾರಿ ಶಾಲೆ ಮಕ್ಕಳು ಒಳ್ಳೆಯ ಫಲಿತಾಂಶ ಪಡೆದಿದ್ದಾರೆ.

ಒಂದು ವಿಷಯದಲ್ಲಿ ಫೇಲ್ ಆದವರು ಈ ಬಾರಿ ಇಪ್ಪತ್ತು ಸಾವಿರ ಇದ್ದಾರೆ. ಕಳೆದ ಬಾರಿಗಿಂತ ಜಾಸ್ತಿ ಆಗಿದ್ದಾರೆ. 2 ವಿಷಯದಲ್ಲಿ 10,500 ವಿದ್ಯಾರ್ಥಿಗಳು, 3 ವಿಷಯದಲ್ಲಿ ಫೇಲ್ ಆದವರು 6100, ನಾಲ್ಕು ವಿಷಯದಲ್ಲಿ ಫೇಲ್ ಆದವರು 3800, ಐ್ಉ ವಿಷಯದಲ್ಲಿ 2500, ಆರು ವಿಷಯದಲ್ಲಿ ಫೇಲ್ ಆದವರು 7,400 ಮಕ್ಕಳಿದ್ದಾರೆ. ಈ ಬಾರಿ ಫೇಲ್ ಆದ ಮಕ್ಕಳಿಗೆ ಮೂರನೇ ಪರೀಕ್ಷೆ ಇರುವುದಿಲ್ಲ. ಎರಡು ಅಟೆಮ್ಟ್ ಇರುತ್ತದೆ. ಹಾಗೇ ಮತ್ತೊಂದು ಖುಷಿಯ ವಿಚಾರ ಅಂದ್ರೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ.















