ಬೆಳಗಾವಿ: ಲೆಕ್ಕಕೊಡಿ ಅಭಿಯಾನ ದೊಡ್ಡ ಮಟ್ಟದಲ್ಲಿ ಶುರುವಾದ ಬೆನ್ನಲ್ಲೇ ಮಠದ ಟ್ರಸ್ಟ್ ಗಳು ಎಲ್ಲರು ಸೇರಿ, ವಚನಾನಂದ ಸ್ವಾಮಿಗಳನ್ನ ಉಚ್ಛಾಟನೆ ಮಾಡಿದರು. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಆ ಎರಡು ಟ್ರಸ್ಟ್ ಗಳು ಹಾಗೆ ಇದಾವೆ. ಎರಡು ಟ್ರಸ್ಟ್ ಒಳಗೂ ಹಗರಣ ಇದಾವೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಆ ಟ್ರಸ್ಟ್ ಗಳು ಏನ್ ಮಾಡಿದಾವೆ, ಸ್ವಂತ ಆಸ್ತಿ ಅಂದ್ರೆ ಖಾಸಗಿ ಆಸ್ತಿ ಮಾಡಿಕೊಂಡಿದ್ದಾವೆ. ಅದು ಸಮಾಜದ ಆಸ್ತಿ ಇಲ್ಲ. ಹೀಗಾಗಿ ಜನರಿಗೆ ಅದರ ಮೇಲೆ ಏನು ವಿಶ್ವಾಸ ಉಳಿಸಿಕೊಂಡಿಲ್ಲ ಎಂಬ ಮಾತನ್ನ ಹೇಳಿದ್ದಾರೆ.
ಇದೇ ವೇಳೆ ರಮೇಶದ ಜಾರಕಿಹೊಳಿ ಅವರು ಜೆಡಿಎಸ್ ಪಕ್ಷ ಸೇರ್ತಾರಾ ಎಂಬ ಮಾತಿಗೆ, ಅದೆಲ್ಲಾ ಊಹಾಪೋಹದ ಮಾತು. ಅವರ್ಯಾಕೆ ಜೆಡಿಎಸ್ ಹೋಗ್ತಾರೆ. ಸುಮ್ನೆ (ಲಕ್ಷ್ಮಣ್ ಸವದಿ) ಅವರಿಗೆ ಇವರು ಹೇಳ್ತಾರೆ, ಇವರುಗೆ ಅವರು ಹೇಳ್ತಾರೆ. ರಮೇಶ್ ಜಾರಕಿಹೊಳಿ ಅವರು ನಾವೆಲ್ಲಾ ಒಂದೇ ಕಡೆ ಇರ್ತೀವಿ. ಯಾರೂ ಜೆಡಿಎಸ್ ಗೂ ಹೋಗೋದಿಲ್ಲ, ಕಾಂಗ್ರೆಸ್ ಗೂ ಹೋಗೋದಿಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನ ನೋಡೋಣಾ ಎಂಬ ಮಾತನ್ನ ಹೇಳಿದ್ದಾರೆ.
ಸದ್ಯ ಬಿಜೆಪಿ ಪಕ್ಷದಿಂದ ಉಚ್ಛಾಟನೆಯಾಗಿರುವ ಶಾಸಕ ಯತ್ನಾಳ್ ಅವರಿಗೆ ಬಾಗಲಕೋಟರ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರೇ ಆಫರ್ ನೀಡಿದ್ದರು. ನಮ್ಮ ಪಕ್ಷದ ಪರ ಪ್ರಚಾರ ಮಾಡುವುದಕ್ಕೆ ಯಾವುದೇ ಬೇಸರ ಇಲ್ಲ ಎಂದಿದ್ದರು. ಇದರ ನಡುವೆ ಯತ್ನಾಳ್ ಅವರು ಕೂಡ ನಾನು ಹೊಸ ಪಕ್ಷ ಕಟ್ಟುತ್ತೇನೆ ಎಂಬ ಮಾತನ್ನು ಸಹ ಹೇಳಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








