Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

UPSC ಟಾಪರ್ ಲೀಸ್ಟ್ ಔಟ್ ; ಕರ್ನಾಟಕದವರು ಯಾರೆಲ್ಲಾ ಇದಾರೆ..?

---Advertisement---

ಬೆಂಗಳೂರು; 2024ನೇ ಸಾಲಿನ ಯುಪಿಎಸ್ಸಿ ಟಾಪರ್ ಲೀಸ್ಟ್ ಔಟ್ ಆಗಿದೆ. ಈ ಪರೀಕ್ಷೆಯಲ್ಲಿ ಪ್ರಯಾಗ್ ರಾಜ್ ನ ಶಕ್ತಿ ದುಬೆ ಅವರು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. 1,009 ಅಭ್ಯರ್ಥಿಗಳಲ್ಲಿ ಕರ್ನಾಟಕ ರಾಜ್ಯದವರು ಸೇರಿದ್ದಾರೆ. ಟಾಪ್ 50 ರ್ಯಾಂಕ್ ನಲ್ಲಿ ಸ್ಥಾನ ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗವು ಇಂದು ಪ್ರಕಟಿಸಿದ ಫಲಿತಾಂಶದಲ್ಲಿ ಕರ್ನಾಟಕದಿಂದ 29 ಅಭ್ಯರ್ಥಿಗಳು UPSC ಸೇವೆಗೆ ಆಯ್ಕೆ ಆಗಿದ್ದಾರೆ. 2024ನೇ ಸಾಲಿನಲ್ಲಿ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ 20 ರ್ಯಾಂಕ್ ಗಳು ಲಭಿಸಿವೆ.

ಯುಪಿಎಸ್ಸಿ ಟಾಪ್ 50ರಲ್ಲಿ ನಮ್ಮ ಕರ್ನಾಟಕದ ಆರ್.ರಂಗ ಮಂಜುಗೆ 24ನೇ ರ್ಯಾಂಕ್ ಸಿಕ್ಕಿದೆ. ರಂಗ ಮಂಜು ಅವರು ಇನ್ಸೈಟ್ ಐಎಎಸ್ ವಿದ್ಯಾರ್ಥಿ ಆಗಿದ್ದಾರೆ. ಇನ್ನು ಸಚಿನ್ ಬಸವರಾಜ್ ಗುತ್ತೂರ್ ಅವರು 41ನೇ ಸ್ಥಾನಕ್ಕೆ ಬಂದಿದ್ದಾರೆ. ಅಕ್ಕ ಐಎಎಸ್ ಅಕಾಡೆಮಿ ಮೂಲಕ ಈ ಅಬರಿ ಒಟ್ಟು ಎಂಟು ಅಭ್ಯರ್ಥಿಗಳು ಯುಪಿಎಸ್ಸಿ ಪಾಸ್ ಮಾಡಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಹೆಮ್ಮೆ ಪಡುವಂತ ವಿಚಾರವಾಗಿದೆ.

ಈ ಬಾರಿಯ UPSC ಪರೀಕ್ಷೆಯಲ್ಲಿ ರಾಜ್ಯದಲ್ಲಿ ಟಾಪ್ ಬಂದವರ ಹೆಸರು ಹೀಗಿದೆ, ಆರ್. ರಂಗ ಮಂಜು, ಬಸವರಾಜ್ ಗುತ್ತೂರ್, ಬಿ.ಎಂ. ಮೇಘನಾ, ಭರತ್ ಸಿ ಯಾರಂ, ಡಾ.ಬಾನುಪ್ರಕಾಶ್, ನಿಖಿಲ್ ಎಂ.ಆರ್, ಟಿ. ವಿಜಯ್ ಕುಮಾರ್, ಹನುಮಂತಪ್ಪ ನಂದಿ, ಮೋಹನ್ ಪಾಟೀಲ್ ರಾಜ್ಯಕ್ಕೆ ಟಾಪರ್ ಬಂದಿದ್ದಾರೆ. ಇವರ ಯಶಸ್ಸಿನಿಂದಾಗಿ ಇಡೀ ಕುಟುಂಬಸ್ಥರು ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಭ್ಯರ್ಥಿಗಳು ಕೂಡ ಕನಸು ನನಸಾದ ಖುಷಿಯಲ್ಲಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment