Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗೆ ಟ್ವಿಸ್ಟ್ : ದೂರು ನೀಡಿದ ಮಹಿಳೆ ಸರಿಯಿಲ್ಲ ಎಂದ ಮಹಿಳೆ..!

---Advertisement---

ಹಾಸನ: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಸಂತ್ರಸ್ತೆಯ ಗಂಡನ ತಾಯಿ ಗೌರಮ್ಮ ಸುದ್ದಿಗೋಷ್ಠಿ ನಡೆಸಿ, ಸೊಸೆಯೇ ಸರಿ ಇಲ್ಲ ಎಂದು ಹೇಳುವ ಮೂಲಕ ರೇವಣ್ಣ ಅಂಡ್ ಫ್ಯಾಮಿಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿರುವ ಗೌರಮ್ಮ, ಐದು ವರ್ಷದಿಂದ ಸುಮ್ಮನೆ ಇದ್ದು, ಈಗ ಯಾಕೆ ದೂರು ನೀಡಿದ್ದು.? ಭವಾನಿ ಅಮ್ಮ ನಮ್ಮ ಕುಟುಂಬಕ್ಕೆ ತುಂಬಾನೇ ಸಹಾಯ ಮಾಡಿದ್ದಾರೆ. ನಾವೂ ಶ್ರೀರಾಮಪುರದಲ್ಲಿ ಒಟ್ಟಿಗೆ ಇದ್ದೆವು. ಚುನಾವಣಾ ಸಮಯದಲ್ಲಿ ಕೆಟ್ಟ ಹೆಸರು ತರುವುದಕ್ಕೇನೆ ಈ ರೀತಿ ಮಾಡಿದ್ದಾರೆ. ರೇವಣ್ಣ ಕುಟುಂಬಸ್ಥರು ನಮಗೆ ಸಂಬಂಧಿಕರು. ದುರೂ ನೀಡಿರುವ ಮಹಿಳೆ ಸರಿಯಿಲ್ಲ ಎಂದಿದ್ದಾರೆ.

ಆಕೆ ತುಂಬಾ ಸಾಲ ಮಾಡಿಕೊಂಡಿದ್ದಾಳೆ. ಜಮೀನು ಸಹ ಮಾರಾಟ ಮಾಡಿದ್ದಾರೆ. ಹೆಚ್ ಡಿ ದೇವೇಗೌಡರ ಕುಟುಂಬಕ್ಕೆ ಕಪ್ಪು ಚುಕ್ಕೆ ತರುವುದಕ್ಕೆ ದೂರು ನೀಡಿದ್ದಾರೆ. ನಮ್ಮನೆಯಿಂದ ಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ಬರಬಾರದು. ಆ ಮಹಿಳೆ ಸುಳ್ಳು ಹೇಳುತ್ತಿದ್ದಾರೆ. ಮಂಜುನಾಥ ಸ್ವಾಮಿ ಮೇಲಾಣೆ ಗೌಡರ ಕುಟುಂಬ ತಪ್ಪು ಮಾಡಿಲ್ಲ. ನಮ್ಮ ಕಷ್ಟ ಸುಖವನ್ನು ಭವಾನಿ ರೇವಣ್ಣ ನೋಡಿದ್ದಾರೆ. ದೂರುದಾರೆಯ ನಡತೆ ಕೂಡ ಸರಿಯಿಲ್ಲ. ಅವರಿಗೆ ಯಾವ ದೌರ್ಜನ್ಯವೂ ಆಗಿಲ್ಲ. ಆಕೆ ಐದು ವರ್ಷದ ಹಿಂದೆಯೇ ಮನೆ ಬಿಟ್ಟಿದ್ದಾಳೆ. ಇಂದು ಏಕೆ ಅವರ ವಿರುದ್ಧ ಮಾತನಾಡುತ್ತಿದ್ದಾಳೆ. ಟೆಕ್ನಾಲಜಿಯಿಂದ ಏನು ಬೇಕಾದರೂ ಮಾಡಬಹುದು ಎಂದು ಆ ಮಹಿಳೆಯ ವಿರುದ್ಧವೇ ಅತ್ತೆ ಹೇಳಿಕೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...