Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೆಬ್ರವರಿ 26ರಿಂದ ಪ್ರವಾಸಿ ಮೇಳ: ಪ್ರವಾಸೋದ್ಯಮ ಉದ್ದಿಮೆದಾರರು ಪಾಲ್ಗೊಳ್ಳಲು ಮನವಿ

---Advertisement---

ಚಿತ್ರದುರ್ಗ. ಫೆ.20: ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ವತಿಯಿಂದ “ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೋ-2025” ಕಾರ್ಯಕ್ರಮವನ್ನು ಇದೇ ಫೆ.26 ರಿಂದ 28 ರವರೆಗೆ ಬೆಂಗಳೂರು ಇಂಟರ್‍ನ್ಯಾಷನಲ್ ಕನ್‍ವೆನ್‍ಷನ್ ಸೆಂಟರ್‍ನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೋಟೆಲ್ ಉದ್ದಿಮೆದಾರರು, ಟ್ರಾವೆಲ್ ಏಜೆನ್ಸಿ, ಹೋಂ-ಸ್ಟೇ, ಕರ-ಕುಶಲಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ಹೋಲ್ಡ್‍ರ್‍ಗಳಿಗೆ ವ್ಯಾಪಾರ-ವಹಿವಾಟು ಮಾಡಿಕೊಳ್ಳಲು ಸುಮಾರು ನೂರಾರು ವಿದೇಶಿ ಸಂಸ್ಥೆಗಳು-ದೇಶದ ಎಲ್ಲಾ ಭಾಗದ ಪಾಲದಾರರ ಸಂಸ್ಥೆಗಳಿಗೆ ಬಿಸಿನೆಸ್ ಟು ಬಿಸಿನೆಸ್ ಭಾಗವಹಿಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಹೋಟೆಲ್ ಉದ್ದಿಮೆದಾರರು, ಟ್ರಾವೇಲ್ ಏಜೆನ್ಸಿ ಹೋಂ-ಸ್ಟೇ ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ ಹೋಲ್ಡರ್‍ಗಳಿಗೆ ತಮ್ಮ ಉದ್ದಿಮೆಗಳನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಐ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡಲು ಸುವರ್ಣಾವಕಾಶ ಇರುತ್ತದೆ.

ಈ ಕಾರ್ಯಕ್ರಮದಲ್ಲಿ ವ್ಯಾಪಾರ ಮಳಿಗೆಗಳನ್ನು ಕಾಯ್ದಿರಿಸಲು ಆಸಕ್ತಿ ಹೊಂದಿರುವ ಉದ್ದಿಮೆದಾರರು ಕೂಡಲೇ, ಚಿತ್ರದುರ್ಗ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಹೆಚ್.ಶಶಿಕುಮಾರ್ ಅವರನ್ನು ಸಂಪರ್ಕಿಸಬಹುದು.

ಹೆಚ್ಚಿನ ವಿವರಗಳಿಗೆ ಜಾಲತಾಣ https://www.karnatakatravelexpo.org  ಮತ್ತು https://register.karnataka travelexpo.org/ Users ಗೆ ಭೇಟಿ ನೀಡಿ ಮತ್ತು ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಚಿತ್ರದುರ್ಗ ಕಛೇರಿಯನ್ನು ಹಾಗೂ ಜಿಲ್ಲಾ ಸಮಲೋಚಕರು (ಡಿಟಿಸಿ) ಅವರ ಮೊಬೈಲ್ ಸಂಖ್ಯೆ 9901948850, ಕಚೇರಿ ಸಂಖ್ಯೆ 08194-234466 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...