ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.29 : ಅಕ್ಷಯ ತೃತೀಯ ಎಂದರೆ ಭಾರತೀಯರಿಗೆ ವಿಶೇಷವಾದ ದಿನ. ಅಂದು ಯಾವುದೇ ವಸ್ತುಗಳನ್ನು ತಂದರು ಅಕ್ಷಯವಾಗಲಿದೆ ಎಂಬ ನಂಬಿಕೆ. ಹೀಗಾಗಿಯೇ ಹೆಚ್ಚಾಗಿ ಚಿನ್ನ ತರುವುದಕ್ಕೆ ಇಷ್ಟ ಪಡುತ್ತಾರೆ. ಈ ವರ್ಷ ಏಪ್ರಿಲ್ 30 ರಂದು ಅಕ್ಷಯ ತೃತೀಯ ಬಂದಿದೆ. ಅಕ್ಷಯ ತೃತೀಯ ಪ್ರಯುಕ್ತ ಚಿತ್ರದುರ್ಗ ನಗರದ ಪ್ರತಿಷ್ಠಿತ ಆಭರಣ ಮಳಿಗೆ ಶ್ರೀ ಕಂಠೇಶ್ವರ ಜ್ಯವೆಲರ್ಸ್ ಬಗೆ ಬಗೆಯ ವಿನ್ಯಾಸದ ಆಕರ್ಷಕ ಆಭರಣಗಳ ಸಂಗ್ರಹದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ನಾಳೆ ಬೆಳಿಗ್ಗೆ 7 : 30 ರಿಂದಲೇ ಮಳಿಗೆ ತೆರೆಯಲಿದೆ.
ಚಿನ್ನ, ಬೆಳ್ಳಿಯಲ್ಲಿ ಅಪರೂಪದ ಡಿಸೈನ್ ಗಳು ಈ ಮಳಿಗೆಯಲ್ಲಿ ನಿಮಗೆ ಸಿಗಲಿವೆ. ಜೊತೆಗೆ ನೀವೆ ಆರ್ಡರ್ ಕೊಟ್ಟ ಡಿಸೈನ್ ಅನ್ನು ಮಾಡಿ ಕೊಡಲಿದೆ. ಈ ಏಪ್ರಿಲ್ 10 ರಿಂದಲೇ ಈ ಆಫರ್ ನಡೆಯುತ್ತಿದೆ. ಮತ್ತೆ ಕೆಲವರು ಈ ಬಾರಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಈ ವರ್ಷ ಮುಂಗಡ ಬುಕ್ಕಿಂಗ್ ಹಿಂದೆಂದಿಗಿಂತಲೂ ಹೆಚ್ಚಿನ ಜನರು ಚಿನ್ನಾಭರಣಗಳನ್ನು ಖರೀದಿಸಿ ಕಾಯ್ದಿಟ್ಟಿದ್ದಾರೆ. ಏಕೆಂದರೆ ಇಲ್ಲಿ ಖರೀದಿಸುವವರಿಗೆ ಆಭರಣಗಳ ಮೇಲೆ ಯಾವುದೇ ಮೇಕಿಂಗ್ ಚಾರ್ಜಸ್ ಕೂಡಾ ಇರುವುದಿಲ್ಲ. ಬೇರೆ ಕಡೆ ಮೇಕಿಂಗ್ ಚಾರ್ಜಸ್ ಅನ್ನೇ ಬಹಳ ಕಡೆ ಹೆಚ್ಚು ನೀಡುತ್ತೇವೆ. ಇಲ್ಲಿ 0 ಮೇಕಿಂಗ್ ಚಾರ್ಜಸ್ ಆಫರ್ ನೀಡಿದ್ದಾರೆ. ಹಾಗೇ ವೇಸ್ಟೇಜ್ 6% ರಿಂದ 13% ಮಾತ್ರ. 1 ಗ್ರಾಂ ಚಿನ್ನದ ಆಭರಣ ಖರೀದಿಗೆ 1 ಗ್ರಾಂ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ.
ಈ ಆಫರ್ ಮಿಸ್ ಮಾಡಿಕೊಳ್ಳದೆ ಚಿತ್ರದುರ್ಗದ ಲಕ್ಷ್ಮೀ ಬಜಾರ್ ನ 1ನೇ ಅಡ್ಡರಸ್ತೆಯಲ್ಲಿರುವ ಶ್ರೀಕಂಠೇಶ್ವರ ಜ್ಯುವೆಲರ್ಸ್ ಗೆ ಭೇಟಿ ನೀಡಿ. ಈ ಅಕ್ಷಯ ತೃತೀಯವನ್ನು ಸಂಭ್ರಮಿಸಿ. ವಿವಿಧ ಕಾರಣಗಳಿಗೆ ಚಿನ್ನದ ದರದಲ್ಲಿ ಏರಿಕೆ ಆಗುತ್ತಲೇ ಇದೆ. ಹಾಗೆಂದು ಖರೀದಿಯಲ್ಲಿ ತುಂಬಾ ವ್ಯತ್ಯಾಸವೇನೂ ಕಂಡು ಬಂದಿಲ್ಲ. ಶುಭ ಸಮಾರಂಭಗಳಿಗೆ ಆಭರಣ ಕೊಳ್ಳುವವರ ಸಂಖ್ಯೆ ಕಡಿಮೆ ಆಗಿಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮಲ್ಲಿ ಸಿಗುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ವಿಶೇಷ ಬೇಡಿಕಡಯಿದೆ. ಏಕೆಂದರೆ ನಾವು ಕೊಡುವ ಉನ್ನತ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರದಿಂದ ಗ್ರಾಹಕರು ನಮ್ಮ ಮೇಲೆ ಹೆಚ್ಚು ಭರವಸೆಯನ್ನು ಹೊಂದಿದ್ದಾರೆ. ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳಿಗೆ ನಮ್ಮಲ್ಲಿ ದೊರೆಯುವ ವಿಶೇಷ ಡಿಸೈನ್ ಗಳು ಬೇರೆಲ್ಲಿ ಸಿಗದೇ ಇರುವುದರಿಂದ ಮತ್ತು ದರ ಕೂಡಾ ಕಡಿಮೆ ಎನಿಸುವುದರಿಂದ ಗ್ರಾಹಕರ ಮೊದಲ ಆಯ್ಕೆಯೇ ನಮ್ಮ ಶ್ರೀ ಕಂಠೇಶ್ವರ ಜ್ಯೂವೆಲರ್ಸ್ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ನಮ್ಮಲ್ಲಿ ಚಿನ್ನಾಭರಣ ಮತ್ತು ಬೆಳ್ಳಿಯನ್ನು ಖರೀದಿಸಲು ಬರುತ್ತಾರೆ ಎನ್ನುತ್ತಾರೆ ಮಾಲೀಕರಾದ ಎ.ಆರ್. ಯೋಗೀಶ್ ರವರು.


