Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಂಗಲೆ ಮುಂದೆ ಹೋದ್ರೆ ಗೇಟ್ ಲಾಕ್ ಹಾಕ್ತಾರೆ : ಎಸ್ ಎಸ್ ಮಲ್ಲಿಕಾರ್ಜುನ್ ಕುಟುಂಬದ ವಿರುದ್ಧ ವಿಜಯೇಂದ್ರ ಆಕ್ರೋಶ

---Advertisement---

ದಾವಣಗೆರೆ: ದಕ್ಷಿಣ ಕ್ಚೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಬಿವೈ ವಿಜಯೇಂದ್ರ ಅವರು ಭಾಗಿಯಾಗಿದ್ದು, ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬದ ನಡೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆಯಲ್ಲಿ ಭಾಷಣ ಮಾಡುತ್ತಾ, ನಾವು ಇವತ್ತು ಯಾರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ, ಬಡ ಕುಟುಂಬದಿಂದ ಬಂದಂತ ಶ್ರೀನಿವಾಸ್ ದಾಸರಿಕರಿಯಪ್ಪ ಅವರನ್ನ ಮಾಡಿದ್ದೇವೆ.

ನಮ್ಮ ಜನ ಇಂದು ಏನು ಯೋಚನೆ ಮಾಡಬೇಕು ಅಂದ್ರೆ, ನಾವೀವತ್ತು ಗೆಲ್ಲಿಸುವ ಶಾಸಕರು, ನಮಗೆ ಸಮಸ್ಯೆ ಅಂತ ಬಂದಾಗ ಮನೆ ಬಳಿ ಹೋದಾಗ, ಗೇಟ್ ಹಾಕಿಕೊಂಡು ಮನೆಯವ ಹೊರಗೆ ನಿಲ್ಲಿಸುವ ಶಾಸಕರು ಬೇಡ. ನಮಗೆ ಸಮಸ್ಯೆ ಬಂದಾಗ, ದಾವಣಗೆರೆಯ ದಕ್ಷಿಣ ಕ್ಷೇತ್ರ ಅಭಿವೃದ್ಧಿ ಆಗಬೇಕು ಅಂತಾದ್ರೆ, ನೇಕಾರರ ಅಭಿವೃದ್ಧಿ ಆಗಬೇಕು ಅಂತಾದ್ರೆ,ಈ ಉಪಚುನಾವಣೆಯಲ್ಲಿ ಗೆಲ್ಲುವ ಶಾಸಕರು ನನ್ನ ಬಡವರ ಮನೆ ಬಾಗಿಲಿಗೆ ಬರಬೇಕು. ಅಂಥ ವ್ಯಕ್ತಿ ಗೆದ್ದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೂ ಒಳ್ಳೆಯದ್ದೇ ಆಗುತ್ತೆ.

ನಾನು ಯಾರ ಮೇಲೂ ದ್ವೇಷ ಸಾಧಿಸುವುದಕ್ಕೆ ಬಂದಿಲ್ಲ. ಕಾಂಗ್ರೆಸ್ ನವರ ಕುಟುಂಬವಾಗಿದೆ. ಆ ಕುಟುಂಬದಲ್ಲಿ ಸಚಿವರಿದ್ದಾರೆ, ಸಂಸದರಿದ್ದಾರೆ, ಇನ್ನು ಎಷ್ಟು ಬೇಕು ಸ್ವಾಮಿ ಹಾಗಾದ್ರೆ. ಸಚಿವರಿದ್ದರು, ಸಂಸದರಿದ್ದರು ದಾವಣಗೆರೆ ದಕ್ಷಿಣ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೊಡುವುದಕ್ಕೆ ಸಾಧ್ಯ ಆಯ್ತಾ. ಈ ಕ್ಷೇತ್ರದ ಸಮಸ್ಯೆಯನ್ನ ಬಗೆಹರಿಸಿದ್ದಾರಾ ಎಂದು ಕಾಂಗ್ರೆಸ್ ಅಭ್ಯರ್ಥಿಯ ಮನೆಯಲ್ಲಿರುವ ಸಚಿವರು, ಸಂಸದರಿಗೆ ವಿಜಯೇಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಇಂದು ತಮ್ಮ ಬಿಜೆಪಿ ಅಭ್ಯರ್ಥಿ‌ ಪರ ಬಿ ವೈ ವಿಜಯೇಂದ್ರ ಅವರು ಮತಯಾಚನೆಗೆ ದಾವಣಗೆರೆಗೆ ಹೋಗಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now