ಗುರು ಪೌರ್ಣಿಮೆ ಅಂದ್ರೆ ಎಲ್ಲರೂ ಭಕ್ತಿ ಭಾವದಿಂದ ಆಚರಿಸುವ ದಿನವಾಗಿದೆ. ಅದರಲ್ಲೂ ಈ ದಿನಗುರುಗಳಿಗೆ ವಿಶೇಷ ಪೂಜೆ ಮಾಡುವುದು ಸಂಸ್ಕೃತಿ. ಹಾಗಾದ್ರೆ ಇಂದಿನ ಗುರು ಪೌರ್ಣಿಮೆಯನ್ನ ಹೇಗೆ ಮಾಡಬೇಕು ಎಂಬ ವಿವರಣೆ ಇಲ್ಲಿದೆ. ಪ್ರತಿ ವರ್ಷ ಆಷಾಢಮಾಸದ ಹುಣ್ಣಿಮೆಯಂದು ಆಚರಿಸುವ ದಿನವೇ ಗುರು ಪೌರ್ಣಿಮೆ. ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಒಂದು ಶುಭ ದಿನ ಇದಾಗಿದೆ.
ಈ ದಿನವನ್ನು ವೇದವ್ಯಾಸರ ಜನ್ಮ ದಿನವನ್ನಾಗಿಯೂ ಆಚರಣೆ ಮಾಡುತ್ತಾರೆ. ಮಹಾಭಾರತ ರಚಿಸಿದ ವೇದವ್ಯಾಸರ ಜ್ಞಾನ ಹಾಗೂ ಮಾರ್ಗದರ್ಶನದಿಂದ ಅನೇಕರು ಅನೇಕ ಪ್ರಯೋಜನಗಳನ್ನು ಪಡೆದಿದ್ದಾರೆ. ಈ ಗುರು ಪೌರ್ಣಿಮೆಯ ದಿನದಂದು ಗುರುಗಳ ಆಶೀರ್ವಾದ ಪಡೆಯುವುದು, ಪೂಜೆ ಮಾಡುವುದು, ಗುರಿ ದಕ್ಷಿಣೆ ನೀಡುವುದು ಹೀಗೆ ವಿಶೇಷವಾದ ಕೆಲಸಗಳನ್ನು ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ಗುರು ಪೌರ್ಣಿಮೆಯಂದು ಹಾಲು, ಮೊಸರು, ಅನ್ನ ದಾನ ಮಾಡುವುದು ಒಳ್ಳೆಯದು ಎಂದಿದ್ದಾರೆ.
ಗುರು ಪೂರ್ಣಿಮೆ ಆಚರಣೆ ಮಾಡುವುದರಿಂದ ಮನುಷ್ಯನಿಗೂ ಒಳ್ಳೆಯದು. ಗ್ರಹ ಕಾಟಗಳು ಕಡಿಮೆಯಾಗುತ್ತವೆ, ಆರೋಗ್ಯ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸವೂ ಹೆಚ್ಚಿಗೆಯಾಗುತ್ತದೆ. ಹೀಗಾಗಿ ಮನೆಯಲ್ಲಿ ಪೂಜೆ ಮಾಡಿ, ದೇವಸ್ಥಾನಗಳಿಗೆ ಹೋಗುತ್ತಾರೆ ಜನ. ಅದರಲ್ಲೂ ಇಂದು ರಾಯರು ಹಾಗೂ ಬಾಬಾ ದೇವಸ್ಥಾನಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅವರು ಕೂಡ ಇತಿಹಾಸದಲ್ಲಿ ಗುರುಗಳಾಗಿದ್ದವರು ಎಂಬುದು ಎಲ್ಲರೂ ಓದಿದ್ದಾರೆ. ಅದರಲ್ಲೂ ಗುರು ರಾಘವೇಂದ್ರಸ್ವಾಮಿಗಳಿಗೆ ಭಕ್ತರೆರನು ಕಡಿಮೆ ಇಲ್ಲ. ಇಂದು ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆಯು ಹೆಚ್ಚಾಗಿರುತ್ತದೆ. ರಾಯರ ದರ್ಶನ ಪಡೆದು, ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ಸಾಯಿ ಬಾಬಾ ಭಕ್ತರು ಶಿರಡಿಗೆ ಹೋಗುವುದಕ್ಕೆ ಆಗದೆ ಹೋದರು, ದೇವಸ್ಥಾನಗಳಿಗೆ ಹೋಗುವ ಮೂಲಕ ಗುರು ಪೌರ್ಣಿನೆಯನ್ನು ಆಚರಿಸುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















