Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆರೋಗ್ಯಕ್ಕೆ ಅಮೃತ ಈ ಬೆಟ್ಟದ ನೆಲ್ಲಿಕಾಯಿ; ದಿನಾ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿದರೆ ನೀವು ಫಿಟ್!

---Advertisement---

ದಿನಕ್ಕೊಂದು ನೆಲ್ಲಿಕಾಯಿ ತಿಂದರೆ ಯಾವುದೇ ಕಾಯಿಲೆ ಹತ್ತಿರ ಸುಳಿಯುವುದಿಲ್ಲ ಎಂಬುದು ನಮ್ಮ ಭಾರತೀಯ ಪರಂಪರೆ ಮತ್ತು ಆಯುರ್ವೇದ ನಂಬಿಕೆ. ಪ್ರಕೃತಿ ನಮಗೆ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಬೆಟ್ಟದ ನೆಲ್ಲಿಕಾಯಿ ಪ್ರಮುಖವಾದದ್ದು. ಆಯುರ್ವೇದದಲ್ಲಿ ಇದನ್ನು ಅಮೃತಫಲ ಎಂದೇ ಕರೆಯಲಾಗುತ್ತದೆ. ವಿಶೇಷವಾಗಿ ಈ ಚಳಿಗಾಲದ ಅವಧಿಯಲ್ಲಿ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅಪಾರ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ನೆಲ್ಲಿಕಾಯಿಯಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಬಲ ಇಂಧನದಂತೆ ಕೆಲಸ ಮಾಡುತ್ತದೆ. ಕೇವಲ ಕಾಲೋಚಿತ ಕಾಯಿಲೆಗಳಿಂದ ರಕ್ಷಿಸುವುದು ಮಾತ್ರವಲ್ಲದೆ, ಕೂದಲು ಉದುರುವುದನ್ನು ತಡೆದು, ಚರ್ಮವನ್ನು ಯವ್ವನಯುತವಾಗಿ ಹಾಗೂ ಹೊಳೆಯುವಂತೆ ಮಾಡಲು ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ದೂರವಿಡುತ್ತದೆ. ಇದರೊಂದಿಗೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಸಂರಕ್ಷಿತ ರೆಡಿಮೇಡ್ ನೆಲ್ಲಿಕಾಯಿ ಜ್ಯೂಸ್‌ ಗಳಿಗಿಂತ, ಮನೆಯಲ್ಲೇ ತಾಜಾವಾಗಿ ಜ್ಯೂಸ್ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ಅತ್ಯುತ್ತಮ.

ಮನೆಯಲ್ಲೇ ನೆಲ್ಲಿಕಾಯಿ ಜ್ಯೂಸ್ ತಯಾರಿಸುವುದು ಹೇಗೆ?

ಮೊದಲು 7 ತಾಜಾ ಹಸಿರು ನೆಲ್ಲಿಕಾಯಿಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅವುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಒಳಗಿನ ಬೀಜಗಳನ್ನು ಬೇರ್ಪಡಿಸಿ.ಈ ನೆಲ್ಲಿಕಾಯಿ ತುಂಡುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ, ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಯ ಮೇಲೆ ಕ್ಲೀನ್ ಆದ ಬಟ್ಟೆ ಅಥವಾ ಸೋಸುವ ಜರಡಿ ಇಟ್ಟು ಚೆನ್ನಾಗಿ ಹಿಂಡಿ ರಸವನ್ನು ಬೇರ್ಪಡಿಸಿ. ಬಟ್ಟೆಯಾದರೆ ರಸವನ್ನು ಸುಲಭವಾಗಿ ಹಿಂಡಬಹುದು.ರಸ ತೆಗೆದ ನಂತರ ಉಳಿಯುವ ಸಿಪ್ಪೆಯಲ್ಲೂ ಪೋಷಕಾಂಶ ಇರುವುದರಿಂದ, ಅದನ್ನು ಮತ್ತೆ ಮಿಕ್ಸಿ ಜಾರ್‌ ಗೆ ಹಾಕಿ 2-4 ಚಮಚ ನೀರು ಸೇರಿಸಿ ಮತ್ತೊಮ್ಮೆ ಗ್ರೈಂಡ್ ಮಾಡಿ ಹಿಂಡಿಕೊಳ್ಳಿ. ಇದರಿಂದ ನೆಲ್ಲಿಕಾಯಿಯ ಕೊನೆಯ ಹನಿಯೂ ವ್ಯರ್ಥವಾಗುವುದಿಲ್ಲ. ಈಗ ತಾಜಾ ನೆಲ್ಲಿಕಾಯಿ ಜ್ಯೂಸ್ ಸಿದ್ಧ.

ಸೇವಿಸುವ ವಿಧಾನ:

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಕುಡಿಯುವುದರಿಂದ ಅದ್ಭುತ ಫಲಿತಾಂಶಗಳನ್ನು ಕಾಣಬಹುದು. ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 1 ರಿಂದ 2 ನೆಲ್ಲಿಕಾಯಿಗಳ ಪ್ರಮಾಣದ ಜ್ಯೂಸ್ ಸೇವಿಸುವುದು ಉತ್ತಮ. ದುಬಾರಿ ಔಷಧಿಗಳಿಗಿಂತ ನಿಮ್ಮ ಅಡುಗೆಮನೆಯಲ್ಲೇ ತಯಾರಾಗುವ ಈ ನೈಸರ್ಗಿಕ ಪಾನೀಯ ನಿಮ್ಮ ಚರ್ಮ, ಕೂದಲು ಮತ್ತು ಒಟ್ಟಾರೆ ದೈಹಿಕ ಆರೋಗ್ಯಕ್ಕೆ ಸಂಜೀವಿನಿಯಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now