Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೆದುಳು ಚುರುಕಾಗಲು ಸೇವಿಸಬೇಕಾದ ಆಹಾರಗಳು ಇವೇ!

---Advertisement---

ವಯಸ್ಸಾಗುತ್ತಿದ್ದಂತೆ ನಮ್ಮ ಶರೀರದಲ್ಲಿ ಮಾತ್ರವಲ್ಲದೆ, ಮೆದುಳಿನ ಕಾರ್ಯಕ್ಷಮತೆಯಲ್ಲೂ ಬದಲಾವಣೆಗಳು ಕಂಡುಬರುವುದು ಸಹಜ. ವೃದ್ಧಾಪ್ಯದಲ್ಲಿ ಮತಿಮರವು (ನೆನಪಿನ ಶಕ್ತಿ ಕಡಿಮೆಯಾಗುವುದು) ಕಾಡದಿರಲು ಮತ್ತು ಮಾನಸಿಕವಾಗಿ ಸದಾ ಚುರುಕಾಗಿರಲು ನಿಯಮಿತ ವ್ಯಾಯಾಮ, ಒಳ್ಳೆಯ ನಿದ್ದೆ ಮತ್ತು ಸಮಾಜದಲ್ಲಿ ಜನರೊಂದಿಗೆ ಬೆರೆಯುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ನಾವು ಸೇವಿಸುವ ಆಹಾರ.

ಆರೋಗ್ಯ ತಜ್ಞರ ಪ್ರಕಾರ, ಮೆದುಳಿನ ಆರೋಗ್ಯಕ್ಕೆ ‘ಒಮೆಗಾ-3 ಫ್ಯಾಟಿ ಆಸಿಡ್ಸ್’ (ಕೊಬ್ಬಿನಾಮ್ಲಗಳು) ಬ್ರಹ್ಮಾಸ್ತ್ರದಂತೆ ಕೆಲಸ ಮಾಡುತ್ತವೆ. ಮೆದುಳಿನ ಕೋಶಗಳ ರಚನೆಗೆ ಇವು ಅತ್ಯಗತ್ಯ. ಇದರೊಂದಿಗೆ ವಿಟಮಿನ್ ಬಿ6, ಬಿ9 (ಫೋಲೇಟ್) ಮತ್ತು ಬಿ12 ಮೆದುಳಿನ ಕ್ಷೀಣತೆಯನ್ನು ತಡೆಯುತ್ತವೆ. ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳು ನರಮಂಡಲವನ್ನು ಶಾಂತಗೊಳಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆ.

ನಿಮ್ಮ ಮೆದುಳಿಗೆ ಅಪ್ರತಿಮ ಶಕ್ತಿಯನ್ನು ನೀಡುವ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಕೆಲವು ಪ್ರಮುಖ ಆಹಾರಗಳು ಇಲ್ಲಿವೆ
ಪಿಸ್ತಾ ತರಹದ ಒಣಫಲಗಳು: ಆ್ಯಂಟಿಆಕ್ಸಿಡೆಂಟ್‌ ಗಳ ಆಗರವಾಗಿರುವ ಪಿಸ್ತಾ ಆಹಾರಗಳು ಸಸ್ಯ ಆಧಾರಿತ ಪ್ರೋಟೀನ್ ನೀಡುತ್ತವೆ. ಇವು ಮೆದುಳಿನ ಕೋಶಗಳು ಬೇಗನೆ ವಯಸ್ಸಾಗದಂತೆ ಮತ್ತು ರೋಗಗಳ ಬಾರಿಗೆ ಸಿಲುಕದಂತೆ ರಕ್ಷಿಸುತ್ತವೆ.

ಸಾಲ್ಮನ್ ಮತ್ತು ಟ್ರೌಟ್ ಮೀನುಗಳು: ಮೀನು ತಿನ್ನುವ ಅಭ್ಯಾಸ ಇರುವವರಿಗೆ ಇವು ವರದಾನ. ಇವುಗಳಲ್ಲಿ ಮೆದುಳಿಗೆ ಬೇಕಾದ EPA ಮತ್ತು DHA ಎಂಬ ಒಮೆಗಾ-3 ಅಂಶಗಳು ಯಥೇಚ್ಛವಾಗಿವೆ. ಇವು ನೆನಪಿನ ಶಕ್ತಿ ಹೆಚ್ಚಿಸುವುದಲ್ಲದೆ, ಖಿನ್ನತೆಯನ್ನು ದೂರ ಇಡುತ್ತವೆ.
ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್‌ ನಲ್ಲಿರುವ ಕೋಕೋ ಪಾಲಿಫೆನಾಲ್ಸ್‌ಗಳು ಮೆದುಳಿಗೆ ರಕ್ತ ಪರಿಚಲನೆಯನ್ನು ಸುಧಾರಿಸಿ, ಆಲೋಚನಾ ಶಕ್ತಿ ಮತ್ತು ಕಲಿಯುವ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.

ಬ್ಲೂಬೆರ್ರಿ ಹಣ್ಣುಗಳು: ದಿನವೂ ಬ್ಲೂಬೆರ್ರಿಗಳನ್ನು ಸೇವಿಸುವುದರಿಂದ ವಯಸ್ಸಾಗುವಾಗ ಬರುವ ಮರೆವುವನ್ನು ಸುಲಭವಾಗಿ ಜಯಿಸಬಹುದು.
ಹಸಿರು ಎಲೆ ತರಕಾರಿಗಳು: ಪಾಲಕ್ ಸೇರಿದಂತೆ ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಕೆ, ಲ್ಯೂಟಿನ್ ಮತ್ತು ಫೋಲೇಟ್ ಇರುತ್ತವೆ. ಮೆದುಳಿನ ಬೆಳವಣಿಗೆಗೆ ಅತ್ಯಗತ್ಯವಾದ ‘ಕೋಲಿನ್’ ಎಂಬ ಪೋಷಕಾಂಶ ಮೊಟ್ಟೆಯಲ್ಲಿದೆ. ಇದು ಜೀವಿತಾವಧಿಯವರೆಗೆ ನೆನಪಿನ ಶಕ್ತಿಯನ್ನು ಸುಭದ್ರವಾಗಿಡಲು ಸಹಾಯ ಮಾಡುತ್ತದೆ.

ಕುಂಬಳಕಾಯಿ: ಜಿಂಕ್, ಐರನ್, ಕಾಪರ್, ಮೆಗ್ನೀಸಿಯಮ್ ಮತ್ತು ಒಮೆಗಾ-3 ಅಂಶಗಳುಳ್ಳ ಈ ಬೀಜಗಳು ಮೆದುಳನ್ನು ಆರೋಗ್ಯವಾಗಿಡುತ್ತವೆ.
ಬೀನ್ಸ್ ಮತ್ತು ಜೋಳ: ಬೀನ್ಸ್‌ ನಲ್ಲಿರುವ ಕಬ್ಬಿಣದಂಶವು ಮೆದುಳಿಗೆ ಆಮ್ಲಜನಕದ ಸರಬರಾಜನ್ನು ಹೆಚ್ಚಿಸಿದರೆ, ಜೋಳದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮೆದುಳಿಗೆ ರಕ್ಷಣೆ ನೀಡುತ್ತವೆ.

ಗ್ರೀನ್ ಟೀ ಮತ್ತು ನೀರಿನಾಂಶವಿರುವ ಆಹಾರಗಳು: ಗ್ರೀನ್ ಟೀನಲ್ಲಿರುವ ಕೆಫೀನ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಇದರೊಂದಿಗೆ ಮೆದುಳು ಯಾವಾಗಲೂ ಹೈಡ್ರೇಟ್ ಆಗಿರಲು ಸಾಕಷ್ಟು ನೀರು ಕುಡಿಯುವುದು ಮತ್ತು ಟೊಮೆಟೊ, ಸೌತೆಕಾಯಿ, ಕಲ್ಲಂಗಡಿಯಂತಹ ರಸಭರಿತ ಹಣ್ಣು-ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ.

Join WhatsApp

Join Now

Join Telegram

Join Now