Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾಯುವ ತನಕ ಈ ಕನಕಪುರ ಬಂಡೆ ಸಿದ್ದರಾಮಯ್ಯ ಅವರ ಜೊತೆಗಿರುತ್ತೆ : ಡಿಕೆ ಶಿವಕುಮಾರ್

---Advertisement---

ಹಾಸನ: ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಇಂದು ಜನಕಲ್ಯಾಣ ವೇದಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತು ಶುರು ಮಾಡಿದರು. ಸಿದ್ದರಾಮಯ್ಯ ಎಂದಾಕ್ಷಣ ಕೇಕೆ ಹಾಕುವುದನ್ನು ನಿಲ್ಲಿಸಲಿಲ್ಲ ಜನ. ಆಗ ಡಿಕೆ ಶಿವಕುಮಾರ್ ಅವರು ಆಯ್ತು.. ಆಯ್ತು ಎಂದು ಹೇಳಿ ತಮ್ಮ ಭಾಷಣ ಶುರು ಮಾಡಿದರು. ಆರಂಭದಲ್ಲಿಯೇ ತಲೆ ಕೆಡಿಸಿಕೊಳ್ಳಬೇಡಿ ಈ ಬಂಡೆ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತೆ ಅಂತ ಹೇಳಿದ್ದೆ. ಇಂದು ಇರ್ತೀನಿ, ನಾಳೆಯು ಇರ್ತೀನಿ, ಸಾಯುವ ತನಕ ಇರ್ತೀನಿ. ಎಲ್ಲಿ ಕೆಲಸ ಮಾಡ್ತೀನೋ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಇರುವುದು ನನ್ನ ಗುಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

 

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ ಎಂದು ಹೇಳ್ತಾ ಇರ್ತೀನಿ. ಈ ಹಾಸನದ ಜನತೆ ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿ, ಸಂಸತ್ ನಲ್ಲಿ ಮಾತನಾಡುವಂತೆ ಮಾಡಿದ್ದೀರಿ. ನೊಂದ ತಾಯಂದಿರಿಗೆ ನ್ಯಾಯ ಕೊಡುವಂತೆ ಮಾಡಿದ್ದೀರಿ. ಜೆಡಿಎಸ್ ಮತ್ತು ಬಿಜೆಪಿಯ ಸುಳ್ಳು ಮಾಲೆಗಳು ಸಂಡೂರು, ಶಿಗ್ಗಾಂವಿಯಲ್ಲಿ ಉತ್ತರ ಕೊಟ್ಟಿದೆ.

ಚುನಾವಣೆಯ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ.. ತೆನೆ ಹೊಲದಲ್ಲಿದ್ದರೆ ಚೆಂದ.. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚಂದ ಎಂದಿದ್ದೆ. ಈ ಕೈ ಅಧಿಕಾರದಲ್ಲಿರೋ ಕಾರಣ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಿ, ಜನರ ಸಂಕಲ್ಪ ಕಲ್ಯಾಣ ಮಾಡಿ, ಈ ರಾಜ್ಯಕ್ಕೆ ಸಂದೇಶವನ್ನು ಕೊಟ್ಟಿದ್ದೇವೆ‌. ಚನ್ನಪಟ್ಟಣದಲ್ಲಿ, ಮೈಸೂರಲ್ಲಿ, ಮಂಡ್ಯದಲ್ಲಿ ಗೆದ್ದಿದ್ದೇವೆ. ಮುಂದೆ ಹಾಸನದಲ್ಲೂ ಗೆದ್ದೆ ಗೆಲ್ಲುತ್ತೇವೆ ಎಂಬ ನಂಬಿಕೆಯಿಂದ ಇಲ್ಲಿಗೆ ಬಂದಿದ್ದೇವೆ. ನೀವೂ ಆಶೀರ್ವದಿಸಬೇಕು. ಹೆಣ್ಣು ಮಕ್ಕಳ ಗೋಳು ಕಳೆದು ಹಾಸನಾಂಬೆ ತಾಯಿ ಕಳೆಯಬೇಕು ಎಂದು ಬೇಡಿಕೊಳ್ಳುತ್ತೇನೆ. ಇದು ಹಾಸನದ ದೊಡ್ಡ ಇತಿಹಾಸ ಎಂದು ಡಿಕೆ ಶಿವಕುಮಾರ್ ಅಬ್ಬರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment