ಬೆಂಗಳೂರು: ಕಾಂಗ್ರೆಸ್ ನಾಯಕರು ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ಹಲವು ರೀತಿಯ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಪೇ ಸಿಎಂ ಅಭಿಯಾನ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ನಗರದ ಪ್ರಮುಖ ಗೋಡೆಗಳೆಲ್ಲಾ ಪೇ ಸಿಎಂ ಪೋಸ್ಟರ್ ಗಳೇ ರಾರಾಜಿಸುತ್ತಿತ್ತು. ಇದೀಗ ಕ್ರೈಂ ಸಿಎಂ ಅಭಿಯಾನ ಜೋರಾಗಿದೆ.
ಪ್ರಿಯಾಂಕ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಕ್ರೈ ಸಿಎಂ ಅಭಿಯಾನ ಆರಂಭವಾಗಿದೆ. ನಿನ್ನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಪ್ರಿಯಾಂಕ ಗಾಂಧಿ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಬಗ್ಗೆ ಮಾತನಾಡಿ, ನನ್ನ ಜೀವನದಲ್ಲಿ ನೋಡಿದ ಮೊದಲ ಪ್ರಧಾನಿ ಇವರು. ಜನರ ಕಷ್ಟ ಕೇಳೋದು ಬಿಟ್ಟು, ತಮ್ಮ ಕಷ್ಟ ಹೇಳುವ ಪ್ರಧಾನಿ ಇವರೆ.
ಮೋದು ಅವರು ತಮ್ಮನ್ನು ಯಾರು ಬೈಯ್ಯುತ್ತಾರೆ ಎಂದು ಲೀಸ್ಟ್ ಮಾಡುತ್ತಾರೆ. ಇವರನ್ನು ಬೈದಿದ್ದು ಏನೇನು ಅಲ್ಲ. ಗಾಂಧಿ ಕುಟುಂಬಕ್ಕೆ ಅವರು ಬೈದಿದ್ದನ್ನು ಪಟ್ಟಿ ಮಾಡಿದ್ರೆ ಒಂದು ಪುಸ್ತಕವನ್ನೇ ಮಾಡಬಹುದು. ಧೈರ್ಯ ಮಾಡ್ರಿ ಮೋದಿ ಅವರೇ. ಬೈಗುಳ ಅಷ್ಟೇ ಅಲ್ಲ ಗುಂಡು ಹಾರಿಸಿದರೂ ಎದುರು ನಿಲ್ಲಲು ರೆಡಿ ಎಂದಿದ್ದರು.





GIPHY App Key not set. Please check settings