ಬೆಂಗಳೂರು : ಸಚಿವ ಡಿ ಸುಧಾಕರ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಬಗ್ಗೆ ಶಾಸಕ ರಂಗನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾರೂ ಕೂಡ ಸರಿಯಾಗಿ ಹೇಳ್ತಿಲ್ಲ. ಡಾಕ್ಟರ್ ಆಗಿ ಆರೋಗ್ಯದ ಬಗ್ಗೆ ಹೇಳ್ತೀನಿ. ಬಲಗಾಲು ಪ್ರೆಶರ್ ಜಾಸ್ತಿ ಆಗಿ ಆಸ್ಟಿ ಆರ್ಥರೈಟೀಸ್ ಆಗಿತ್ತು, ನೀ ಜಾಯಿಂಟ್.
ಮಂಡಿನೋವಿಗೆ ಮೂರ್ನಾಲ್ಕು ಕಡೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸರ್ಜರಿ ಮಾಡಿಸಿಕೊಳ್ಬೇಕು ಅಂತ ಸಲಹೆ ನೀಡಿದ್ದರು. ನನ್ನ ಬಳಿಯೂ ಸಲಹೆಯನ್ನು ಕೇಳಿದ್ದರು ನೀ ರಿಪ್ಲೇಸ್ಮೆಂಟ್ ಮಾಡಿಸಿಕೊಳ್ಳೋದಾ ಹೇಗೆ ಅಂತ. ನಾನು ಸ್ವಲ್ಪ ಕಾಯೋಣಾ ಅಂತಾನೂ ಹೇಳಿದ್ದೆ. ಅಷ್ಟರಲ್ಲಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಿಮಗೂ ಎಲ್ಲಾ ಗೊತ್ತಿದೆ. ಅವರು ಸರ್ಜರಿ ಮಾಡಿಸಿಕೊಂಡ ಎರಡು ದಿನ ಚೆನ್ನಾಗಿದ್ರು. ಆ ನಂತರ ಸಡನ್ ಆಗಿ ಆಕ್ಸಿಜನ್ ಕಡಿಮೆ ಆಗಿದೆ.

ಆಕ್ಸಿಜನ್ ಕೊಡುವಾಗ ಆರು ಗಂಟೆಗಳ ಕಾಲ ಆಕ್ಸಿಜನ್ ರಿಕವರಿ ನಾರ್ಮಲ್ ಬರದೆ ಇದ್ದಂತ ಸಂದರ್ಭದಲ್ಲಿ ವೆಂಟಿಲೇಟರ್ ಹಾಕಿದ್ದಾರೆ. ವೆಂಟಿಲೇಟರ್ ನಲ್ಲಿ ದಿನವಿಡೀ ನೋಡಿದ್ರು. ಅಲ್ಲಿಯೂ ಆಕ್ಸಿಜನ್ ಅಷ್ಟು ರೀಚ್ ಆಗಿ ಎಂದ ತಕ್ಷಣವೇ ಎಕ್ಮೋ ಅಂತ ಮಿಷನ್ ಬರುತ್ತೆ. ಲಂಗ್ ಮತ್ತು ಹಾರ್ಟ್ ಸಪೋರ್ಟ್ ಮಾಡುವಂತ ಮಷಿನ್. ಆ ಮಷಿನ್ ಹಾಕಿ ಆರು ವಾರಗಳು ಆಗಿದೆ. ಆದರೂ ಚೇತರಿಕೆ ಅಷ್ಟು ಕಾಣಿಸ್ತಾ ಇಲ್ಲ. ಲಂಗ್ ನಲ್ಲಿ ಒಂದು ರೀತಿಯ ಸೋಂಕು ಕಾಣಿಸಿಕೊಂಡಿದೆ. ಚೇತರಿಕೆ ಆಗದೆ ಇರುವ ಕಳವಳ ಇದೆ. ಬೇಗ ಹುಷಾರಾಗಲಿ ಎಂದು ನಾವೂ ಬಯಸ್ತಾ ಇದ್ದೇವೆ ಎಂದಿದ್ದಾರೆ.



















