Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೌರವ ಮರ್ಯಾದೆ ಇಲ್ಲದೆ ಬೇಸತ್ತು ನಮ್ಮ ಪಕ್ಷಕ್ಕೆ ಬಂದಿದ್ದಾರೆ : ಸಚಿವ ಮಲ್ಲಿಕಾರ್ಜುನ್

---Advertisement---

ದಾವಣಗೆರೆ: ಸಂಸದರಾಗಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಮೋದಿ ಫೋಟೋ ಇಟ್ಟುಕೊಂಡು ತೋರಿಸುತ್ತಾರೆ ವೈಯಕ್ತಿಕವಾಗಿ ಅಭಿವೃದ್ಧಿ ಶೂನ್ಯ ಎಂದು ಸಂಸದರ ಸಿದ್ದೇಶ್ವರ್ ವಿರುದ್ಧ ಸಚಿವ ಮಲ್ಲಿಕಾರ್ಜುನ್ ಗರಂ ಆಗಿದ್ದಾರೆ.

 

ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದು, ಜನರ ಒಲವು ಕಾಂಗ್ರೆಸ್ ಪರ ಇದೆ. ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಬಡವರಿಗೆ ಮಹಿಳೆಯರಿಗೆ ಅನುಕೂಲ ಆಗಲಿದೆ. ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ನಾವು ಕೆಲಸ ಮಾಡಿದ್ದೇವೆ ವೋಟ್ ಕೊಡಿ ಅಂತಾ ಕೇಳುತ್ತಿದ್ದೇವೆ. ನಮ್ಮ ಯೋಜನೆಗಳಿಂದ ಆರ್ಥಿಕವಾಗಿ ಜನರು ಸುಧಾರಣೆ ಆಗುತ್ತಾರೆ. ನಾವು ಯಾರನ್ನು ಆಪರೇಷನ್ ಮಾಡಿ ಪಕ್ಷಕ್ಕೆ ಕರ್ಕೊಂಡಿಲ್ಲ.

 

ಅವರ ದರ್ಪ ದೌಲತ್ತು ಬಿಡಬೇಕು. ಹಣದಿಂದ ಖರೀದಿ ಮಾಡಲು ಹೋದ್ರೆ ಇದೆ ತರಹ ಆಗೋದು. ಅವರಿಗೆ ಗೌರವ ಮರ್ಯಾದೆ ಇಲ್ಲದೆ ಬೇಸತ್ತು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಹಿರಿಯ ಮುಖಂಡರಿಗೂ ಅಸಮಾಧಾನ ಇದೆ. ಯಡಿಯೂರಪ್ಪ ಬಂದು ರಾಜೀ ಸಂಧಾನ ಮಾಡಿದ್ರು. ಜಾತಿಗೆ ಒಬ್ಬರಂತೆ ಮುಖಂಡರನ್ನು ಕರೆಸುತ್ತಿದ್ದಾರೆ. ವೈಯಕ್ತಿಕವಾಗಿ ಬೇಜಾರಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ.

ಸಂಸದರಾಗಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಮೋದಿ ಫೋಟೋ ಇಟ್ಟುಕೊಂಡು ತೋರಿಸುತ್ತಾರೆ. ವೈಯಕ್ತಿಕವಾಗಿ ಅಭಿವೃದ್ಧಿ ಶೂನ್ಯ. ವೈಯಕ್ತಿಕವಾಗಿ ಈ ಮನುಷ್ಯ ಚೆoಬೆ. ನನ್ನ ಹೆಸರಿನಲ್ಲೂ ಹಿಂದೆ ನಾಮಪತ್ರ ಹಾಕಿಸಿದ್ದರು. ಯಾರೊ ವೈಯಕ್ತಿಕವಾಗಿ ನಾಮ ಪತ್ರ ಸಲ್ಲಿಸಿರಬಹುದು. ಕರೋನ ಸಮಯದಲ್ಲಿ ಜನರ ಪ್ರಾಣ ತೆಗೆದಿದ್ದಾರೆ ಮನುಷ್ಯತ್ವ ಇದೆಯಾ. ಹಿಂದೆ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಮಂತ್ರಿಗಳು ಆಗಲು ಬಿಡಲಿಲ್ಲ. ದುಡ್ಡಿನ ಭ್ರಮೆಯಲ್ಲಿ ಗೆಲ್ಲುತ್ತೆವೆ ಎಂದು ಕೊಂಡಿದ್ದಾರೆ ಜನರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...