Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

IPL ನಲ್ಲಿದೆ ಶ್ಲೋಕ : ಅದರ ಅರ್ಥವೇನು ಗೊತ್ತಾ..?

---Advertisement---

 

 

ಚೆನ್ನೈ: ಬಹು ನಿರೀಕ್ಷೆಯಿಂದ ಕಾಯುತ್ತಿದ್ದಂತ ಐಪಿಎಲ್ ಗೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಮುಖಾಮುಖಿಯಾಗಲಿವೆ. ಈ ಬಾರಿ ಹೆಣ್ಣು ಮಕ್ಜಳು ಕಪ್ ಗೆದ್ದಾಗಿದೆ, ಗಂಡು ಮಕ್ಕಳು ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಈಗಾಗಲೇ ದೇವರಿಗೆ ಪೂಜೆ ಪುನಸ್ಕಾರಗಳನ್ನು ಶುರು ಮಾಡಿದ್ದಾರೆ. ಆದ್ರೆ ಇದೀಗ ಐಪಿಎಲ್ ಟ್ರೋಫಿ ಕಡೆಗೆ ಎಲ್ಲರ ಚಿತ್ತ ಗಮನ ಸೆಳೆದಿದೆ.

 

ಈ ಟ್ರೋಫಿಯಲ್ಲಿ ಸಂಸ್ಕೃತ ಶ್ಲೋಕವೊಂದಿದೆ. ‘ಯಾತ್ರಾ ಅವಸರ ಪ್ರಾಪ್ನೋತಿಹಿ’ ಎಂಬ ಶ್ಲೋಕವನ್ನು ಬರೆಯಲಾಗಿದೆ. ಇದರ ಅರ್ಥ ಏನಂದ್ರೆ ಎಲ್ಲಿ ಪ್ರತಿಭೆಗಳು ಇರುತ್ತವೋ ಅಲ್ಲಿ ಅವಕಾಶವೂ ಇರುತ್ತವೆ‌ ಎಂಬುದಾಗಿದೆ. ಈ ಶ್ಲೋಕವನ್ನು ಸ್ಪೂರ್ತಿಯಾಗಿಯೇ ತೆಗೆದುಕೊಳ್ಳಲಾಗಿದೆ. ಹೀಗಾಗಿ ಐಪಿಎಲ್ ಟ್ರೋಫಿ ಮೇಲೆ ಬರೆಯಲಾಗಿದೆ.

ಕಪ್ ಮೇಲೆ ಶ್ಲೋಕ ಬರೆದಿರುವುದು ನಿನ್ನೆ ಮೊನ್ನೆಯಲ್ಲ. ಅದರ ಹಿಂದೆ ಕಾರಣವೂ ಇದೆ. 1983ರಲ್ಲಿ ಕಪಿಲ್ ದೇವ್ ಸಾರಥ್ಯದ ಭಾರತದ ತಂಡ ವಿಶ್ವಕಪ್ ಆಡಲು ಲಂಡನ್ ಗೆ ತೆರಳಿತ್ತು. ಅಲ್ಲಿ ಭಾರತ ತಂಡವನ್ನು ಅತ್ಯಂತ ಕೀಳಾಗಿ‌ ಕಾಣಲಾಗಿತ್ತು. ಅಂದು ಕಪಿಲ್ ದೇವ್ ತಂಡ ವಿಶ್ವ ಕಪ್ ಗೆದ್ದಿತ್ತು. ಇತಿಹಾಸವನ್ನು ನಿರ್ಮಿಸಿತ್ತು. ಅಂದು ಆ ಕಪ್ ಮೇಲೆ ಈ ಶ್ಲೋಕವನ್ನು ಬರೆಸಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್ ಟ್ರೋಫಿ ಮೇಲೆ ಬರೆಸಲಾಗುತ್ತದೆ.

ಐಪಿಎಲ್ 2024 ನಾಳೆಯಿಂದ ಅದ್ದೂರಿ ಚಾಲನೆ ಪಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೂ ವೇದಿಕೆ ಸಿದ್ಧವಾಗಿದೆ. ಸೆಲೆಬ್ರೆಟಿಗಳು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿ ನಮ್ಮ ಆರ್ಸಿಬಿ ಕಪ್ ಯಾವುದೇ ಕಾರಣಕ್ಕೂ ಮಿಸ್ ಮಾಡುವುದೇ ಇಲ್ಲ ಎಂಬ ಭರವಸೆ ನಮ್ಮ ಕನ್ನಡಿಗರಲ್ಲಿದೆ. ನೋಡೋಣಾ ಕಾದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment