ಬೆಂಗಳೂರು, ಮಾರ್ಚ್. 19 : ಬಿಸಿಲು ಹೇಗಿದೆ ಅಂದ್ರೆ ಹೊರಗೆ ಹೋಗುವುದಕ್ಕೂ ಭಯ ಪಡುವಷ್ಟು ಇದೆ. ನೆತ್ತಿ ಸುಡುತ್ತಿದೆ, ಗಂಟಲು ಒಣಗುತ್ತಿದೆ, ಮೈಯೆಲ್ಲಾ ಬೆವರುತ್ತಿದೆ. ಈ ವರ್ಷ ಮಳೆ ಹೆಚ್ಚಾಗಿದ್ದರು, ಬೇಸಿಗೆ ನಿರೀಕ್ಷಿತ ಸಮಯಕ್ಕೂ ಮೊದಲೇ ಬಂದಿದೆ. ಈಗಿನ್ನು ಮಾರ್ಚ್, ಏಪ್ರಿಲ್ ತಿಂಗಳಿಗೆ ಹೇಗಪ್ಪ ಸಹಿಸಿಕೊಳ್ಳುವುದು ಎನ್ನುವಂತಾಗಿದೆ. ಅದರಲ್ಲೂ ಪ್ರತಿದಿನ ಏರಿಕೆಯಾಗುತ್ತಿರುವ ಉಷ್ಣಾಂಶದ ನಡುವೆ ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇಲ್ಲಂದ್ರೆ ದೇಹ ಡಿಹೈಡ್ರೇಷನ್ ಆಗಿ, ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಉಷ್ಣಾಂಶ ಇನ್ನು ಹೆಚ್ಚಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಹಾಗಾದ್ರೆ ಉಷ್ಣಾಂಶ ಎಲ್ಲೆಲ್ಲಿ..? ಎಷ್ಟಿದೆ ಎಂಬುದನ್ನು ನೋಡುವುದಾದರೆ,

ಚಿತ್ರದುರ್ಗ : 37.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಮಂಗಳೂರು ಏರ್ಪೋರ್ಟ್ – 33.4° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ಬೆಳಗಾವಿ ಏರ್ಪೋರ್ಟ್ – 37.7° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ಬೆಂಗಳೂರು ನಗರ – 35° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ಬೆಂಗಳೂರು ಹೆಚ್ಎಎಲ್ ಏರ್ಪೋರ್ಟ್ – 34.9° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ರಾಯಚೂರು – 40.6° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ಬಾಗಲಕೋಟೆ – 39.9° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ಬೀದರ್ – 38.8° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು
ವಿಜಯಪುರ – 38.6° ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ. ಹೀಗಾಗಿ ಜನರು ಈ ಬಿಸಿಲಿನ ತಾಪದಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.


















