Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಊಟದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ..!

---Advertisement---

ಹಿರಿಯೂರು : ಕ್ಷುಲ್ಲಕ ಕಾರಣಕ್ಕೆ ನಡುವೆ ಜಗಳವಾಗಿದ್ದು, ಈ ಜಗಳದಿಂದ ತಂದೆಯ ಕೊಲೆಯಾಗಿರುವ ಘಟನೆ ಕುಂದಲಗುರ ಗ್ರಾಮದಲ್ಲಿ ನಡೆದಿದೆ. 50 ವರ್ಷದ ರಂಗಸ್ವಾಮಿ ಮೃತ ದುರ್ದೈವಿಯಾಗಿದ್ದಾರೆ.

ಕೇವಲ ಊಟದ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ನಡೆದಿದೆ. ಎಷ್ಟೋ ಸಲ ಈ ಕೊಲೆಯ ವಿಚಾರಗಳು ತೀರಾ ಸಣ್ಣ ಪ್ರಮಾಣದ್ದೇ ಆಗಿರುತ್ತವೆ. ಹಾಗೇ ತಾಳ್ಮೆಯಿಂದ ಕೂತು ಯೋಚಿಸಿದರೆ ಮಾತ್ರ ಈ ವಿಚಾರ ಏನೇನು ಅಲ್ಲ ಅನ್ನೋದು ಅರ್ಥವಾಗುತ್ತದೆ. ಯಾವಾಗ ಕೋಪದ ಕೈಗೆ ಬುದ್ದಿ ಕೊಡುತ್ತಾರೋ ಆಗ ನೋಡಿ ಪ್ರಾಣಗಳ ಬೆಲೆಯೂ ಅಲ್ಲಿ ತಿಳಿಯಲ್ಲ, ಸಂಬಂಧಗಳು ಲೆಕ್ಕಕ್ಕೆ ಬರಲ್ಲ. ಈಗ ಈ ತಂದೆ ಮಗನ ವಿಚಾರವೂ ಹಾಗೇ. ಊಟದ ವಿಚಾರ ಕೊಲೆಯಲ್ಲಿ ಅಂತ್ಯವಾಗುವಂತ ವಿಚಾರ ಎನಿಸೋದೆ ಇಲ್ಲ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ರಂಗಸ್ವಾಮಿ ಹಾಗೂ ಅವರ ಮಗ ದೇವರಾಜು ವಾಸವಾಗಿದ್ದರು. ಮನೆಯಲ್ಲಿಯೇ ಊಟದ ವಿಚಾರಕ್ಕೆ ಮಾತು ಶುರುವಾಗಿದೆ. ಮಾತಿಗೆ ಮಾತು ಬೆಳೆದು ದೇವರಾಜ್ ತನ್ನ ತಂದೆ ರಂಗಸ್ವಾಮಿ ಮೇಲೆ ಹಲ್ಲೆ‌ ಮಾಡಿದ್ದಾನೆ. ಹಲ್ಲೆಯ ಪರಿಣಾಮ ರಂಗಸ್ವಾಮಿಯ ಜೀವವೇ ಹೋಗಿದೆ. ಈ ಘಟನೆ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ‌ CPI ಗುಡ್ಡಪ್ಪ, ಹಾಗೂ ಅಬ್ಬಿನಹಹೊಳೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಪೊಲೀಸರು ಇದರ ತನಿಖೆ ನಡೆಸಿದ್ದು, ಜಗಳಕ್ಕೂ ಮುನ್ನ ಏನಾಯ್ತು, ಮನೆಯಲ್ಲಿ ಯಾರೆಲ್ಲಾ ಇದ್ದರು ಎಂಬೆಲ್ಲಾ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಪೊಲೀಸರ ತನಿಖೆಯ ಬಳಿಕ ತಂದೆಯ ದುರಂತ ಅಂತ್ಯಕ್ಕೆ ಮಗನೇ ಕಾತಣವಾಗಿದ್ದಾರೂ ಯಾಕೆ ಎಂಬ ವಿಚಾರ ಬೆಳಕಿಗೆ ಬರಲಿದೆ. ಮೃತರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...