Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆಲಸ ಕೇಳಲು ಹೋದರೆ ಕಾಲಲ್ಲಿ ಒದ್ದ ಪ್ರತಿಮಾ : ಕೊಲೆ ಸತ್ಯ ಬಾಯ್ಬಿಟ್ಟ ಆರೋಪಿ

---Advertisement---

 

ಬೆಂಗಳೂರು: ಭೂವಿಜ್ಞಾನ ಇಲಾಖೆಯ ಅಧಿಕಾರಿಯ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ, ತನಿಖೆ ನಡೆಸುತ್ತಿದ್ದಾರೆ. ಪ್ರತಿಮಾ ಕಾರು ಡ್ರೈವರ್ ಆಗಿದ್ದ ಕಿರಣ್ ಈ ಕೊಲೆ ಮಾಡಿದ್ದಾನೆ. ಇದೀಗ ಈ ತನಿಖೆಯಲ್ಲಿ ಪ್ರತಿಮಾ ಕಾಲಿನಲ್ಲಿ ಒದ್ದಿದ್ದೆ ಕೊಲೆಗೆ ಕಾರಣ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರತಿಮಾ ಅವರ ಕೊಲೆಯ ಸುಳಿವೇ ಸಿಗದಂತೆ ಕೊಲೆ ಮಾಡಿದ್ದ ಕಿರಣ್, ಮಹದೇಶ್ವರ ಬೆಟ್ಟದಲ್ಲಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದ. ಪ್ರತಿಮಾ ಅವರನ್ನು ವೇಲಿನಿಂದ ಬಿಗಿದು, ಚಾಕುವಿನಲ್ಲಿ ಚುಚ್ಚಿ ಕೊಲೆ‌ ಮಾಡಿದ್ದ. ವಿಚಾರಣೆ ವೇಳೆ ಪ್ರತಿಮಾ ಅವರನ್ನು ಕೊಲೆ ಮಾಡಿದ್ದು ಯಾಕೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಕೊಲೆ ಮಾಡುವ ಉದ್ದೇಶ ಕೂಡ ಇರಲಿಲ್ಲ ಎಂದಿದ್ದಾನೆ.

ಕಿರಣ್, ಹಲವು ವರ್ಷಗಳಿಂದ ಪ್ರತಿಮಾ ಬಳಿ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಯಾವುದೋ ಆಕ್ಸಿಡೆಂಟ್ ಕಾರಣಕ್ಕೆ ಕಿರಣ್ ನನ್ನು ಕೆಲಸದಿಂದ ತೆಗೆದಿದ್ದಾರೆ. ಸರ್ಕಾರಿ ಕೆಲಸ ಎಂದೇ ಮನೆಯವರಿಗೆಲ್ಲಾ ಹೇಳಿಕೊಂಡಿದ್ದರಂತೆ ಕಿರಣ್. ಆದರೆ ಕೆಲಸ ಹೋದ ಮೇಲೆ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತೆ ಆಗಿತ್ತಂತೆ. ಗರ್ಭಿಣಿಯಾಗಿದ್ದ ಹೆಂಡತಿ ಕೂಡ ತವರಿಗೆ ಹೋಗಿ ಕೂತಿದ್ದಳಂತೆ. ಈ ಎಲ್ಲಾ ಸಮಸ್ಯೆಯಿಂದ ನೊಂದ ಕಿರಣ್, ಮತ್ತೆ ಕೆಲಸ ಕೇಳುವುದಕ್ಕೆ ಹೋಗಿದ್ದಾನೆ. ಪ್ರತಿಮಾರ ಮನೆಗೆ ಹೋಗಿ ಕಾಲು ಹಿಡಿದು ಬೇಡಿದ್ದನಂತೆ. ಆದರೆ ಪ್ರತಿಮಾ ಕಾಲಿನಲ್ಲಿಯೇ ಒದ್ದಿದ್ದಾರೆ. ಆ ಕ್ಷಣಕ್ಕೆ ಕಿರಣ್ ಕೋಪ ಜಾಸ್ತಿಯಾಗಿ ಕೊಲೆ ಮಾಡಿದ್ದಾನಂತೆ. ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದು ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment