Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪೆನ್ ಡ್ರೈವ್ ಲೀಕ್ ಮಾಡಿದ್ದು ಪ್ರಜ್ವಲ್ ರೇವಣ್ಣ ಕಾರು ಡ್ರೈವರ್..? ದೇವರಾಜೇಗೌಡ ಹೇಳಿದ್ದೇನು..?

---Advertisement---

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಈಗಾಗಲೇ ಸಾಕಷ್ಟು ಜನರ ಕೈಗೆ ಸಿಕ್ಕಿದೆ. ಮೂರು ಸಾವಿರಕ್ಕೂ ಹೆಚ್ಚು ವಿಡಿಯೋಗಳು ಇವೆ ಎನ್ನಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೂ ವಹಿಸಿದೆ. ತನಿಖೆ ಕೂಡ ನಡೆಯುತ್ತಿದೆ. ಇದರ ನಡುವೆ ಈ ವಿಡಿಯೋಗಳು ಮೊದಲಿಗೆ ಸಿಕ್ಕಿದ್ಯಾರಿಗೆ..? ಲೀಕ್ ಆಗಿದ್ದು ಹೇಗೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಅದಕ್ಕೆಲ್ಲಾ ಉತ್ತರ ವಕೀಲ ದೇವರಾಜೇಗೌಡ ನೀಡಿದ್ದಾರೆ. ಈ ಮೊದಲು ಹೆಚ್ ಡಿ ರೇವಣ್ಣ ಅವರಿಗೆ ದೇವರಾಜೇಗೌಡ ಅವರು ಪೆನ್ ಡ್ರೈವ್ ವಿಚಾರವಾಗಿ ಎಚ್ಚರಿಕೆ ನೀಡಿದ್ದರು. ಎಲ್ಇಡಿ ಹಾಕಿ, ಅದರಲ್ಲಿ ವಿಡಿಯೋ ತೋರಿಸಲಾ. ಆಗ ಗೊತ್ತಾಗುತ್ತೆ ಯಾರು ಡರ್ಟಿ ಫೆಲೋ ಎಂದಿದ್ದರು.

ಪೆನ್ ಡ್ರೈವ್ ವಿಚಾರವಾಗಿ‌ಮಾತನಾಡಿರುವ ದೇವರಾಜೇಗೌಡ, ಈ ವಿಡಿಯೋ ವಿಚಾರ 2023ರಲ್ಲಿಯೇ ಬಂದಿತ್ತು. ಆದರೆ ಪ್ರಜ್ವಲ್ ರೇವಣ್ಣ ಕೋರ್ಟ್ ನಲ್ಲಿ ಸ್ಟೇ ತಂದಿದ್ದರು. ಅವರ ಕಾರು ಚಾಲಕನಾಗಿದ್ದ ಕಾರ್ತಿಕ್ ಮೇಲೂ ಸ್ಟೇ ತಂದಿದ್ದರು. ಕಾರ್ತಿಕ್ ನನ್ನ ಬಳಿ ಬಂದು ವಕಾಲತ್ತು ಹಾಕಿ ಎಂದಿದ್ದ, ಆ ವಿಡಿಯೋ ಇರಯವ ಪೆನ್ ಡ್ರೈವ್ ಕೂಡ ಕೊಟ್ಟಿದ್ದ. ಆ ವಿಡಿಯೋಗಳನ್ನು ನಾನು ನೋಡಿದ್ದೆ. ಸಾಕಷ್ಟು ವಿಡಿಯೋಗಳು ಅದರಲ್ಲಿ ಇತ್ತು. ಯಾರ್ಯಾರಿಗೆ ಈ ವಿಡಿಯೋ ಕೊಟ್ಟಿದ್ದೀಯಾ ಎಂದಾಗ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿದಂತೆ ಕಾಂಗ್ರೆಸ್ ಹಲವು ನಾಯಕರಿಗೆ ಕೊಟ್ಟಿದ್ದೀನಿ ಎಂದಿದ್ದ.

ಆದರೆ ಕಾಂಗ್ರೆಸ್ ಲೀಡರ್ ಎರಡು ತಿಂಗಳಾದರೂ ಏನು ಮಾಡಿರಲಿಲ್ಲ. ಇದನ್ನ ರಾಜಕೀಯವಾಗಿ ಯಾವಾಗ ಬಳಕೆ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಕಾರ್ತಿಕ್ ಹೇಳಿದ್ದ. ಈ ವಿಚಾರ ಮೋದಿ, ಅಮಿತಾ ಅವರಿಗೆ ಪತ್ರದ ಮುಖೇನ, ಮೇಲ್ ಮುಖೇನ ತಲುಪಿಸಲಾಗಿತ್ತು. ಆದರೆ ಮೇಲ್ ಸೆಮಡಮ್ ಆಗಿಲ್ಲ. ವಿಜಯೇಂದ್ರ ಅವರಿಗೂ ಪತ್ರದ ಮೂಲಕ ತಲುಪಿಸಿತ್ತಾದರೂ ಅವರಿಗೆ ಪತ್ತ ತಲುಪಿಲ್ಲ ಎಂದಿದ್ದಾರೆ.

ಕಾರ್ತಿಕ್ ಬಹಳ ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ. ಇತ್ತಿಚೆಗೆ ರೇವಣ್ಣ ಫ್ಯಾಮಿಲಿಗೂ ಕಾರ್ತಿಕ್ ಗೂ ಜಗಳ ನಡೆದಿತ್ತು. ತಮ್ಮ 13 ಎಕರೆ ಜಮೀನಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಕೂಡ ನೀಡಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment