ತಲೈವಾ ಸತತ ಪ್ರಯತ್ನದ ನಡುವೆಯೂ ಮಗಳು-ಅಳಿಯ ಅಧಿಕೃತವಾಗಿ ದೂರ..!

ತಮಿಳು ನಟ ಧನುಶ್ ಹಾಗೂ ಐಶ್ವರ್ಯಾ ದಾಂಪತ್ಯಕ್ಕೆ ಇಂದು ಅಧಿಕೃತವಾಗಿ ತೆರೆ ಬಿದ್ದಿದೆ. ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯವು ಡಿವೋರ್ಸ್ ಮಂಜೂರು ಮಾಡಿದೆ. ಇಬ್ಬರ ಒಮ್ಮತದ ಆಧಾರದ ಮೇಲೆಯೇ ಡಿವೋರ್ಸ್ ನೀಡಿದೆ. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ 20 ವರ್ಷಗಳಿಗೆ ದಾಂಪತ್ಯ ಅಂತ್ಯ ಮಾಡಿಕೊಂಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ತಿಳಿದಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ಮಗಳ ಜೀವನವನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಮಗಳ ಹಾಗೂ ಅಳಿಯನ ಸಮಸ್ಯೆ ಬಗೆ ಹರಿಸುವುದಕ್ಕೆ ನೋಡಿದರು. ಆದರೆ ಆ ಪ್ರಯತ್ನ ಸಫಲವಾಗಲಿಲ್ಲ. ಕಡೆಗೂ ಅಳಿಯ ಹಾಗೂ ಮಗಳು ದೂರವಾಗಿದ್ದಾರೆ. ಕಾನೂನಿನ ಮೂಲಕವೇ ಡಿವೋರ್ಸ್ ಪಡೆದಿದ್ದಾರೆ.

ಐಶ್ವರ್ಯಾ ಹಾಗೂ ಧನುಶ್ ಪ್ರೀತಿಸಿ ಮದುವೆಯಾದವರು. ಧನುಶ್ ಗಿಂತ ಐಶ್ಚರ್ಯಾ ದೊಡ್ಡವರಾಗಿದ್ದರು ಸಹ ಗುರು ಹಿರಿಯರ ಸಮ್ಮುಖದಲ್ಲಿ, ಎಲ್ಲರು ಒಪ್ಪಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಮೇಲೆ 18 ವರ್ಷಗಳ ಕಾಲ ಈ ಜೋಡಿ ಒಟ್ಟಿಗೆ ಇತ್ತು. ಆದರೆ 2022ರ ಜನವರಿಯಲ್ಲಿ ಧನುಶ್ ಮತ್ತು ಐಶ್ವರ್ಯಾ ದೂರ ಆಗ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಆ ನಂತರದಲ್ಲಿ ಎರಡು ಕುಟುಂಬದವರು ಮಕ್ಕಳ ಸಂಸಾರವನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಬಳಿಕ ಧನುಶ್ ಹಾಗೂ ಐಶ್ಚರ್ಯಾ ಮಕ್ಕಳ ವಿಚಾರಕ್ಕಷ್ಟೇ ಒಂದಾಗುತ್ತಿದ್ದರು. ಧನುಶ್ ಹಾಗೂ ಐಶ್ವರ್ಯಾಗೆ ಇಬ್ಬರು ಮಕ್ಕಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಈ ಜೋಡಿಯನ್ನು ಲವ್ಲಿ ಕಪಲ್ ಅಂತಾನೇ ಕರೆಯುತ್ತಿದ್ದರು. ಇದೀಗ ದೂರ ದೂರ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *