Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಮೀಕ್ಷೆ ನಡೆಸುವಾಗಲೇ ಹೃದಯಾಘಾತ : ಶಿಕ್ಷಕ ಸಾವು..!

---Advertisement---

 

ಚಿಂತಾಮಣಿ : ಹೃದಯಾಘಾತದ ಪ್ರಕರಣಗಳು ಇತ್ತೀಚೆಗೆ ಸ್ವಲ್ಪ ಮಟ್ಟಿಗಾದರು ಕಡಿಮೆಯಾಗಿದ್ದವು. ಆದರೆ ಈಗ ಮತ್ತೆ ಅದರ ಸುದ್ದಿಗಳು ಹೆಚ್ಚಾಗುತ್ತಿವೆ. ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕರೊಬ್ಬರು ಈ ಹೃದಯಾಘಾತಕ್ಕೆ ಬಲಿಯಾದ ಘಟನೆ ಚಿಂತಾಮಣಿ ಪಟ್ಟಣದಲ್ಲಿ ಭಾನುವಾರ ನಡೆದಿದೆ. 58 ವರ್ಷದ ವೈ ವಿ ರಾಮಕೃಷ್ಣ ನಿಧನರಾದ ಶಿಕ್ಷಕ.

ರಾಮಕೃಷ್ಣ ಅವರು ಯಗವಕೋಟಿ ಕ್ಲಸ್ಟರ್ ವ್ಯಾಪ್ತಿಯ ದಿಗವಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿವೃತ್ತಿಯ ಅಂಚಿನಲ್ಲಿದ್ದವರು. ಸರ್ಕಾರದ ಯೋಜನೆಯ ಸಮೀಕ್ಷೆಗೆಂದು ರಾಮಕೃಷ್ಣ ಅವರನ್ನು ನೇಮಿಸಲಾಗುತ್ತು. ಮತ್ತೊಬ್ಬ ಶಿಕ್ಷಕರ ಸಹಾಯದಿಂದ ರಾಮಕೃಷ್ಣ ಅವರು ಸರ್ವೇ ನಡೆಸುತ್ತಿದ್ದರು. ಭಾನುವಾರ ಅವರಿಗೆ ಸರ್ವೇ ನಡೆಸುತ್ತಿದ್ದ ಸಮಯದಲ್ಲಿಯೇ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಬಳಿಕ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ನೀಡುವ ಮೊದಲೇ ಸಾವನ್ನಪ್ಪಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ನಡೆಯಿತು.

ಜಾತಿ ಗಣತಿ ಸಮೀಕ್ಷೆಗಾಗಿ ಎಲ್ಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಕಡೆ ಸರ್ವರ್ ಸಮಸ್ಯೆಯನ್ನು ಎದುರಿಸುತ್ತಿರುವ ಶಿಕ್ಷಕರಿಗೆ ಆರೋಗ್ಯದ ಕಾಳಜಿಯೂ ಬಹಳ ಮುಖ್ಯವಾಗಿದೆ. ಎಷ್ಟೋ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿ ಇದ್ದ ಶಿಕ್ಷಕರಿಗೂ ಈಗ ಸಮೀಕ್ಷೆಯ ತಲೆ ಬಿಸಿ ಏರಿದೆ. ಕೆಲ ಹಳ್ಳಿಗಳಲ್ಲಿ ಓಡಾಟಕ್ಕೂ ಕಷ್ಟವಾಗಿದೆ‌. ಎಷ್ಟೋ ಹಳ್ಳಿಗಳಿಗೆ ಬಸ್ ಗಳ ಸೌಲಭ್ಯವೂ ಇಲ್ಲ. ಆ ಕಡೆಯೆಲ್ಲಾ ಶಿಕ್ಷಕರು ಏನೋ ಪಾಡು ಬಿದ್ದು, ಓಡಾಟ ನಡೆಸಿ ಸಮೀಕ್ಷೆ ನಡೆಸುತ್ತಿದ್ದಾರೆ. ಯಾಕಂದ್ರೆ ಕೇವಲ ಹದಿನಾರು ದಿನಗಳ ಕಾಲಮಿತಿ ಇದೆ. ಅಕ್ಟೋಬರ್ 8 ಕ್ಕೆ ಈ ಸಮೀಕ್ಷೆಗೆ ಡೆಡ್ಲೈನ್ ಇದೆ. ಅಷ್ಟರಲ್ಲಿ ಸಮೀಕ್ಷೆಯನ್ನ ಮುಗಿಸಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...