ಬೆಂಗಳೂರು.ಆಗಸ್ಟ್.2: ಸಿಗ್ನಲ್ ರೆಜಿಮೆಂಟ್‌ನಲ್ಲಿ ಯು.ಹೆಚ್.ಕ್ಯೂ. (UHQ) ಕೋಟಾದಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅಗ್ನಿಪಥ್ ಯೋಜನೆಯ ಮೂಲಕ ವಿವಿಧ ಅಗ್ನಿವೀರ್ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿ ಪ್ರಕ್ರಿಯೆಯು ಆಗಸ್ಟ್ 18 ರಿಂದ ಆಗಸ್ಟ್ 21 ರವರೆಗೆ ನಡೆಯಲಿದೆ. ವೀರನಾರಿಯರು, ಮಾಜಿ ಸೈನಿಕರ ಮಕ್ಕಳು ಹಾಗೂ ಪ್ರಸ್ತುತ ಸೇವೆಯಲ್ಲಿರುವ ಸೈನಿಕರ ಸ್ವಂತ ಸಹೋದರರು (ತಮ್ಮಂದಿರು) ಈ ಕೋಟಾದಡಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ನೇಮಕಾತಿ ಪ್ರಕ್ರಿಯೆಯ ಪ್ರಮುಖ ವಿವರಗಳು:

ವಯೋಮಿತಿ: 17 ವರ್ಷ 6 ತಿಂಗಳಿಂದ 22 ವರ್ಷದೊಳಗಿನವರು.
ಲಭ್ಯವಿರುವ ಹುದ್ದೆಗಳು:
ಅಗ್ನಿವೀರ್ ಜನರಲ್ ಡ್ಯೂಟಿ (General Duty)
ಅಗ್ನಿವೀರ್ ಟೆಕ್ನಿಕಲ್ (Technical)
ಅಗ್ನಿವೀರ್ ಟ್ರೇಡ್ಸ್‌ಮನ್ (Tradesman)
ದಿನಾಂಕ ಮತ್ತು ಸ್ಥಳ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 18 ರಂದು ಬೆಳಿಗ್ಗೆ 5:00 ಗಂಟೆಗೆ ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿರುವ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಮೈದಾನದಲ್ಲಿ (ಜಬಲ್ಪುರ್ ರಸ್ತೆ) ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ ಸಂಖ್ಯೆ: 04027-863016












