Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎರಡೇ ದಿನಕ್ಕೆ ಟಾರ್ಗೆಟ್ ಆದ್ರಾ ಸತ್ಯ ಅಲಿಯಾಸ್ ಗೌತಮಿ..?

---Advertisement---

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಮೊದಲ ವಾರವೇ ಮನೆಯಿಂದ ಹೊರಗೆ ಬರುವುದು ಯಾರು ಎಂಬ ಕುತೂಹಲವೂ ಎಲ್ಲರಲ್ಲೂ ಇದೆ. ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದು, ಗೇಮ್ ಮೂಲಕ ನಾಮಿನೇಷನ್ ಪ್ರಕ್ರಿಯೆ ಶುರು ಮಾಡಿದೆ. ಯಮುನಾ, ಭವ್ಯಾ, ಗೌತಮಿಯ ಹೆಸರು ನಾಮಿನೇಷನ್ ಆಗಿರುವುದು ಪ್ರೋಮೋದಲ್ಲಿ ಕೇಳಿ ಬಂದಿದೆ.

ಭವ್ಯಾ ಅವರಿಗೆ ಡಾಮಿನೇಟ್ ಎಂಬ ಪಟ್ಟ ಕೇಳಿ ಬಂದಿದೆ. ಇದರ ನಡುವೆ ಭವ್ಯಾ ಹಾಗೂ ಯಮುನಾ ಇಬ್ಬರು ಒಬ್ಬರನ್ನೇ ಆಯ್ಕೆ ಮಾಡಿದ್ದು, ಕಾರಣವನ್ನು ವಿಚಿತ್ರವಾಗಿಯೇ ಕೊಟ್ಟಿದ್ದಾರೆ. ಗೌತಮಿ ಹೆಸರೇಳಿದ ಈ ಇಬ್ಬರು, ಅವರಿಗೆ ನರಕವಾಸಿಗಳ ಮೇಲೆ ಸಾಫ್ಟ್ ಕಾರ್ನರ್ ಇದೆ. ನಮಗಿಂತ ಹೆಚ್ಚು ಅವರ ಜೊತೆಗೆ ಇರುತ್ತಾರೆ ಎಂಬ ಕಾರಣವನ್ನು ನೀಡಿದ್ದಾರೆ.

ಸತ್ಯ ಧಾರಾವಾಹಿಯಲ್ಲಿದ್ದ ಔಟ್ ಲುಕ್ ನಲ್ಲಿಯೇ ಗೌತಮಿ, ಬಿಗ್ ಬಾಸ್ ಗೆ ಬಂದಿದ್ದರು. ಆದರೆ ನಿನ್ನೆ ಮನೆಯಲ್ಲಿ ನಡೆದ ವಿಚಾರಕ್ಕೆ ವಿಗ್ ತೆಗೆದರು. ಆಗಲು ಗೌತಮಿಗೆ ಸ್ವಲ್ಪ ನೋವು ಕೊಟ್ಟಿತ್ತು. ಆದರೆ ಇಂದು ನರಕವಾಸಿಗಳ ಜೊತೆಗೆ ಕ್ಲೋಸ್ ಆಗಿದ್ದಾರೆ ಎಂಬ ಕಾರಣಕ್ಕೆ ನಾಮಿನೇಟ್ ಮಾಡುತ್ತಿದ್ದೇವೆ ಎಂದಾಗಲೇ ಅವರ ಮನಸ್ಸಿಗೆ ನೋವಾಗಿದೆ. ಸುಮ್ಮನೆ ಎಲ್ಲವನ್ನು ನೋಡಿಕೊಂಡು ನಿಂತು ಬಿಟ್ಟಿದ್ದಾರೆ. ಇದು ನೋಡುಗರಿಗೂ ಪಾಪ ಎನಿಸಿದೆ. ಗೌತಮಿಯನ್ನು ಟಾರ್ಗೆಟ್ ಮಾಡಿದ್ದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಯಮುನಾ ಕೂಡ ಮಾತಿಗೆ ಮುಂಚೆ ಜಗಳ ಮಾಡುವುದಕ್ಕೆ ಬರುತ್ತಾರೆ ಎಂಬ ಕಮೆಂಟ್ ಗಳು ಬರುತ್ತಿವೆ. ಗೌತಮಿ ಬಗ್ಗೆ ಪಾಸಿಟಿವ್ ಕೇಳಿ ಬರುತ್ತಿದೆ.ಬಿಗ್ ಬಾಸ್ ಶುರುವಾಗೇ ಎರಡೇ ದಿನಕ್ಕೆ ಈ ರೀತಿಯ ಬೆಳವಣಿಗೆ ನಡೆದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...