ಸಮೀಕ್ಷೆಯಿಂದ ಹೊರಗುಳಿಯದಂತೆ ತಾಲೂಕು ಆಡಳಿತ ಕ್ರಮ : ತಹಶೀಲ್ದಾರ್ ಸಿದ್ದೇಶ್

1 Min Read

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 08  : ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸರ್ವೇ ಕಾರ್ಯವನ್ನು ಅಕ್ಟೋಬರ್ 18 ವರೆಗೆ ವಿಸ್ತರಣೆ ಮಾಡಿ ಮುಂದುವರಿಸಲಾಗಿದ್ದು, ಸಮೀಕ್ಷೆಯಲ್ಲಿ ಒಳಪಡದೆ ಇದ್ದಲ್ಲಿ ಸಂಬಂಧಪಟ್ಟ ಮನೆ ಮಾಲೀಕರು ನಾಗರಿಕ ಬಂಧುಗಳು ಈ ಕೆಳಗಿನ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನ ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಈಗಾಗಲೇ ತಾಲ್ಲೂಕಿನಲ್ಲಿ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ತಾಲೂಕಿನಲ್ಲಿ ಯಾವುದೇ ಮನೆಗಳು ಸಮೀಕ್ಷಾ ಕಾರ್ಯದಿಂದ ಹೊರಗುಳಿಯದಂತೆ ತಾಲೂಕು ಆಡಳಿತ ವತಿಯಿಂದ ಕ್ರಮ ವಹಿಸಲಾಗಿದೆ. ಇದನ್ನು ಹೊರತುಪಡಿಸಿ ಸಮೀಕ್ಷೆಗೆ ಒಳಪಡದೆ ಇದ್ದಲ್ಲಿ ಸಂಬಂಧಪಟ್ಟ ಮನೆಗಳ ಮಾಲೀಕರು, ನಾಗರೀಕ ಬಂಧುಗಳು, ಜನಪ್ರತಿನಿಧಿಗಳು ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಎಂ. ಸಿದ್ದೇಶ್ ತಹಶೀಲ್ದಾರ್, 9741185772, ಎ. ವಾಸೀಂ ನಗರಸಭೆ ಪೌರಾಯುಕ್ತರು, 9620160966, ಸಿಎಂ ತಿಪ್ಪೇಸ್ವಾಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, 9480695146, ಶಿವಕುಮಾರ್ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಅಧಿಕಾರಿಗಳು, 9686269822, ಪುಟ್ಟಸ್ವಾಮಿ ಇಸಿಓ, ಬಿಓ ಕಚೇರಿ 8152957568 ಹಾಗೂ ಹೋಬಳಿ ನೋಡಲ್ ಅಧಿಕಾರಿಗಳಾಗಿ ಶಿವಮೂರ್ತಿ ಸ. ನಿ. ತಾ.ಪ 9980546373 ಕಸಬಾ ಮತ್ತು ನಗರ,
ದಿನೇಶ್ ಸ.ನಿ. ತಾಲೂಕು ಸಮಾಜ ಕಲ್ಯಾಣ ಇಲಾಖೆ 9900180708 ಐಮಂಗಲ,
ಸುಧೀರ್ ಸ.ಶಿ.ಅ.ಯೋ 9844 168382 ಜವನಗೊಂಡನಹಳ್ಳಿ ಹೋಬಳಿ ಹಾಗೂ ನಾಗರಾಜ ಇಸಿಓ , ಬಿಇಓ ಕಚೇರಿ 9632319003 ಧರ್ಮಪುರ ಇವರನ್ನು ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಎಂ ಸಿದ್ದೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article