Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಲ್ಕೆರೆ ಶಾಲೆಗೆ ಭೇಟಿ ನೀಡಿದ ಮಾಜಿ ಸಚಿವ ಸುರೇಶ್ ಕುಮಾರ್; ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಸೆ.07) : ಸರಳ, ಸಜ್ಜನಿಕೆ ಹಾಗೂ ಮಾನವೀಯ ಅಂತಃಕರಣದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೊಳಲ್ಕೆರೆ ತಾಲ್ಲೂಕಿನ ಕಾಲ್ಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದಾರೆ.

ಮಂಗಳವಾರ ಮುಂಜಾನೆ ಬೆಂಗಳೂರಿನಿಂದ ಹೊರಟ ಮಾಜಿ ಸಚಿವರು ಬರುವ ಹಾದಿಯಲ್ಲಿ ಹೋಟೆಲ್‍ನಲ್ಲಿ ಸಿಕ್ಕ ಕೇರಳ ಮೂಲದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಸೈನಿಕರನ್ನು ಮಾತನಾಡಿಸಿ ಶುಭ ಕೋರಿ ಬೀಳ್ಕೋಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಸ್ನೇಹಿತರ ಜತೆ ಕಾಲ್ಕೆರೆ ಗ್ರಾಮಕ್ಕೆ ಆಗಮಿಸಿ ಮಕ್ಕಳ ಜತೆ ಕಾಲ ಕಾಳೆದಿದ್ದಾರೆ.

ಶಾಲೆಯ ಸಹ ಶಿಕ್ಷಕ ರಮೇಶ್ ಮಾಜಿ ಸಚಿವರಿಗೆ ಒಂದು ತಿಂಗಳಿಂದ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಾಡುತ್ತಿರುವ ಕಾರ್ಯಕ್ರಮಗಳ ಕುರಿತು ವಾಟ್ಸಪ್ ಸಂದೇಶಗಳನ್ನು ಕಳಿಸುತ್ತಿದ್ದರು. ತಮ್ಮ ಶಾಲೆಗೆ ಒಮ್ಮೆ ನಾನು ಭೇಟಿ ಕೊಡಬೇಕೆಂದು ಬಹಳ ಕಳಕಳಿಯಿಂದ ಮನವಿ ಮಾಡಿದ್ದರು.

ಅಷ್ಟೇ ಅಲ್ಲದೆ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮಕ್ಕಳಿಗೆ ದೂರದರ್ಶನದ ಚಂದನವಾಹಿನಿಯಲ್ಲಿ ಬರುತ್ತಿದ್ದ ಸಂವೇದ ತರಗತಿಗಳ ಪಾಠಗಳನ್ನು ತೋರಿಸಲು ಈ ಶಿಕ್ಷಕರು ಮಾಡಿರುವ ಸಾಹಸವನ್ನು ಸುರೇಶ್ ಕುಮಾರ್ ಅವರು ಗಮನಿಸಿದ್ದರು.

ಇಷ್ಟು ಉತ್ತಮ ಕಾರ್ಯ ಮಾಡುತ್ತಿರುವ ಶಿಕ್ಷಕನನ್ನು ಭೇಟಿ ಆಗ ಬೇಕೆಂದು ತೀರ್ಮಾನಿಸಿ ಮಂಗಳವಾರ ಬೆಳಗ್ಗೆ ಆಗಮಿಸಿದ್ದರು. ಶಾಲೆಗೆ ಭೇಟಿ ನೀಡಿದ ಸುರೇಶ್ ಕುಮಾರ್ ಸಹಶಿಕ್ಷಕ ಶ್ರೀ ರಮೇಶ್ ಮತ್ತು ಇತರೆ ಶಿಕ್ಷಕರನ್ನು ಮಾತನಾಡಿಸಿ ಸಂತಸ ವಿನಿಮಯ ಮಾಡಿಕೊಂಡರು. ಬಳಿಕ 6 ಮತ್ತು 7ನೇ ತರಗತಿಯ ಮಕ್ಕಳ ಜೊತೆ ಸಂವಾದ ನಡೆಸಿದರು. ತದನಂತರ ಶಾಲಾ ಅಭಿವೃದ್ಧಿ ಸಮಿತಿಯ ತಂಡದವರೊಂದಿಗೆ ಮಾತುಕತೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಒಟ್ಟು ವಾತಾವರಣ, ಶಾಲೆಯ ಅಭಿವೃದ್ಧಿಗಾಗಿ ಕೈಜೋಡಿಸಿರುವ ಗ್ರಾಮಸ್ಥರು, ಶಾಲೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲೆಯ ಶಿಕ್ಷಕ ತಂಡ ಎಲ್ಲರ ಲವಲವಿಕೆ ಸ್ಫೂರ್ತಿ ಕೊಟ್ಟಿತು.

ನಾನು ಈ ಶಾಲೆಗೆ ಹೋಗುವುದನ್ನು ಯಾರಿಗೂ ತಿಳಿಸಬಾರದೆಂದು ನಿರ್ಧಾರ ಮಾಡಿದ್ದೆ. ಆದರೆ ಜಿಲ್ಲೆಯ ಉಪ ನಿರ್ದೇಶಕರು ಮತ್ತು ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಅದು ಹೇಗೋ ವಿಷಯ ತಿಳಿದು ಶಾಲೆಗೆ ಬಂದೇಬಿಟ್ಟರು. ನನ್ನ ಭೇಟಿಯ ಸಂದರ್ಭದಲ್ಲಿ ಅವರೂ ಸಹ ಸಂತಸದಿಂದ ಭಾಗಿಯಾದರು.

ಗ್ರಾಮೀಣ ಭಾಗದ ಶಾಲೆಯೊಂದರ ಮಕ್ಕಳ ಜೊತೆ ಮಾತನಾಡಿ ಅವರಲ್ಲಿ ಒಂದಷ್ಟು ವಿಷಯಗಳ ಕುರಿತು ಆಸಕ್ತಿ ಬರುವಂತೆ ಸಂವಾದ ನಡೆಸಿದ ಸಂತಸ ನನ್ನದು. ನಂತರ ಅದೇ ತಾಲೂಕಿನ ದುಮ್ಮಿ ಎಂಬ ಗ್ರಾಮದ ಮತ್ತೊಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದೆ. ಸಾರಿಗೆ ಬಸ್ ರೀತಿ ಹಾಗೂ ರೈಲ್ವೇ ಬೋಗಿಗಳ ರೀತಿಯಲ್ಲಿ ಅತ್ಯಾಕರ್ಷಕವಾಗಿ ರೂಪುಗೊಂಡಿರುವ ಶಾಲೆಯ ತರಗತಿಗಳಲ್ಲಿ ಮಕ್ಕಳ ಜೊತೆ ಮಾತನಾಡಿ ಬೆನ್ನು ತಟ್ಟಿದೆ.

ಶಿಕ್ಷಕರಿಗೂ ಅವರ ಆಸಕ್ತಿಯಿಂದ ಕೂಡಿರುವ ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಒಟ್ಟಾರೆ ಒಂದು ವಾಟ್ಸಪ್ ಸಂದೇಶ ನನ್ನನ್ನು ಈ ಗ್ರಾಮದ ಶಾಲೆಗೆ ಭೇಟಿ ನೀಡುವಂತೆ ಪ್ರೇರೇಪಿಸಿತು ಮತ್ತು ಅಲ್ಲಿನ ವಾತಾವರಣವನ್ನು ಆಸ್ವಾದಿಸುವ ಅವಕಾಶ ನೀಡಿತು.

ನನ್ನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಣ್ಣ ಗ್ರಾಮಕ್ಕೆ ಭೇಟಿ ನೀಡುವಂತೆ ಪ್ರೇರೇಪಿಸಿದ ಉತ್ಸಾಹಿ ಸಹಶಿಕ್ಷಕ ರಮೇಶ್ ರವರಿಗೆ ಧನ್ಯವಾದಗಳು ಎಂದು ಸುರೇಶ್ ಕುಮಾರ್ ಅವರು ತಮ್ಮ ಫೇಸ್‍ಬುಕ್‍ನ ಪೇಜ್‍ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಗಮನ ಸೆಳೆಯಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ : ಕುಮಾರಸ್ವಾಮಿಗೆ ಡಿಕೆಶಿ ಟಾಂಗ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿನ್ನೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಓಡಾಡುತ್ತಿದೆ. ಅವರೇ ಪೆನ್ ಡ್ರೈವ್ ಹಂಚಿರುವುದು ಅಂತ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರಿಗೆ

ವಿಶ್ವ ರೆಡ್‍ಕ್ರಾಸ್ ದಿನಾಚರಣೆ | ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಚಿತ್ರದುರ್ಗ ಮೇ. 08 :  ವಿಶ್ವ ರೆಡ್‍ಕ್ರಾಸ್ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆ ಹಾಗೂ ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೇ. 8 ರ ಇಂದು ಕಾಲೇಜಿನಲ್ಲಿ

ಚಿತ್ರದುರ್ಗ ಜಿಲ್ಲೆಯ ರೈತರಿಗೆ ಉಪಯುಕ್ತ ಮಾಹಿತಿ | ಬೆಳೆ ಪರಿಹಾರ ಪಾವತಿ ಸಂಬಂಧ ಸಹಾಯವಾಣಿ ಆರಂಭ : ಇಲ್ಲಿದೆ ತಾಲ್ಲೂಕುವಾರು ಮಾಹಿತಿ

ಚಿತ್ರದುರ್ಗ. ಮೇ.08:   ಬೆಳೆ ಪರಿಹಾರ ಪಾವತಿ ಸಂಬಂಧ ಮಾಹಿತಿ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ  ಹಾಗೂ ಜಿಲ್ಲೆಯ 6 ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

error: Content is protected !!